ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರ ವಿರುದ್ಧ 62 ಗಂಟೆಗಳ ಕಾರ್ಯಾಚರಣೆ ಅಂತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ವಿರುದ್ಧ 62 ಗಂಟೆಗಳ ಕಾರ್ಯಾಚರಣೆ ಅಂತ್ಯ
ಮುಂಬೈಯ ಪಂಚತಾರಾ ಹೋಟೇಲುಗಳಲ್ಲಿ ಅಡಿಗಿ ಕುಳಿತು ಕ್ರೌರ್ಯ ಮೆರೆದ ಉಗ್ರರನ್ನು ಸದೆಬಡಿಯುವ ಎನ್‌ಎಸ್‌ಜಿ ಕಮಾಂಡೋ ಕಾರ್ಯಾಚರಣೆ 'ಆಪರೇಶನ್ ಸೈಕ್ಲೋನ್' ಶನಿವಾರ ಮುಕ್ತಾಯಗೊಂಡಿದೆ.

ರಾಷ್ಟ್ರದ ವಾಣಿಜ್ಯ ನಗರಿಯಲ್ಲಿ ಸರಿಸುಮಾರು 62 ಗಂಟೆಗಳ ಕಾಲ ನಡೆದ ಈ ನಿರಂತರ ಕಾರ್ಯಚರಣೆಯ ವೇಳೆಗೆ ಓರ್ವ ಉಗ್ರನನ್ನು ಜೀವಂತ ಹಿಡಿದಿದ್ದರೆ, ಮಿಕ್ಕೆಲ್ಲ ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಶನಿವಾರದ ಕೊನೆಯ ಹಂತದ ಕಾರ್ಯಾಚರಣೆಯ ವೇಳೆಗೆ ಹೋಟೇಲ್ ತಾಜ್‌ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.

ತಾಜ್ ಹೋಟೇಲ್‌ನ ಎಲ್ಲಾ 529 ಕೋಣೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಗಿಯುವ ಮೂಲಕ ಕೊನೆಯ ಹಂತದ ಕಾರ್ಯವನ್ನೂ ಕಮಾಂಡೋಗಳು ಮುಗಿಸಿದ್ದಾರೆ.
WD

ಉಗ್ರರ ದಾಳಿಯಿಂದ ಸತ್ತವರ ಸಂಖ್ಯೆ 195ಕ್ಕೇರಿದೆ. ಇವರಲ್ಲಿ 14 ಮಂದಿ ಎನ್‌ಎಸ್‌ಜಿ ಮತ್ತು ಪೊಲೀಸ್ ಸಿಬ್ಬಂದಿಗಳು. 14 ಉಗ್ರರು ಸಾವನ್ನಪ್ಪಿದ್ದರೆ, ಒಬ್ಬಾತ ಉಗ್ರ ಜೀವಂತ ಸೆರೆಸಿಕ್ಕಿದ್ದಾನೆ.

ತಾಜ್ ಹೋಟೇಲಿನಲ್ಲಿ ಒಂದು ಎಕೆ 47 ರೈಫಲ್ ಸೇರಿದಂತೆ ಗ್ರೇನೇಡುಗಳು ಹಾಗೂ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ ಎಂಬುದಾಗಿ ಎನ್ಎಸ್‌ಜಿ ಅಧಿಕಾರಿಗಳು ತಿಳಿಸಿದ್ದಾರೆ.

ಒಳಗೆ ಅವಿತಿದ್ದ ಉಗ್ರರು ಒತ್ತಡಕ್ಕೆ ಸಿಲುಕಿದಾಗೆಲ್ಲ, ಕಮಾಂಡೋಗಳ ಗಮನವನ್ನು ಬೇರೆಡೆ ಹರಿಸಲು ಗುಂಡು ಹಾರಾಟ ಸ್ಥಗಿತಗೊಳಿಸುತ್ತಿದ್ದರು. ಭದ್ರತಾ ಪಡೆಗಳು ಟ್ರೈಡೆಂಟ್ ಒಬೆರಾಯ್, ಹಾಗೂ ನಾರಿಮನ್ ಹೌಸ್‌ಗಳನ್ನು ಶುಕ್ರವಾರ ಸಂಪೂರ್ಣವಾಗಿ ವಶಕ್ಕೆ ಪಡೆದಿದ್ದರು. ಇಲ್ಲಿ ಐವರು ಇಸ್ರೇಲಿ ಒತ್ತೆಯಾಳುಗಳು ಸಾವನ್ನಪ್ಪಿದ್ದರು. ತಾಜ್ ಕಾರ್ಯಾಚರಣೆ ಶನಿವಾರ ಅಂತ್ಯಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುತಾತ್ಮರಿಗೆ ರಾಷ್ಟ್ರದ ಗೌರವಪೂರ್ಣ ನಮನ
ತಾಜ್ ಹೋಟೇಲ್ ಸ್ಫೋಟಿಸಲು ಯೋಜಿಸಿದ್ದ ಉಗ್ರರು?
ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ
ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ