ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ದಾಳಿಯ ಪ್ರಮುಖ ಘಟನಾವಳಿ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿಯ ಪ್ರಮುಖ ಘಟನಾವಳಿ...

ವರದಿ: ಹರ್ಮಿತ್ ಸೌಲ್
ವಾಣಿಜ್ಯ ನಗರಿಯ ಪ್ರತಿಷ್ಠಿತ ತಾಜ್ ಹೋಟೆಲ್, ಒಬೆರಾಯ್ ಹಾಗೂ ಜ್ಯೂವಿಶ್ ಸೆಂಟರ್‌ಗಳ ಮೇಲೆ ಉಗ್ರರು ನಡೆಸಿದ ದಾಳಿಯ ಸಂದರ್ಭದಲ್ಲಿನ ಘಟನಾವಳಿಗಳ ಪ್ರಮುಖ ವಿವರ ಇಲ್ಲಿದೆ.

*ಬ್ರಿಟನ್ ಪ್ರಜೆ 73ರ ಹರೆಯದ ಆಂಡ್ರೆಸ್ ಲೈವೆರಾಸ್ ಅವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿಯೇ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಆದರೆ ಎರಡನೇ ದಿನವೂ ಉಗ್ರರೊಂದಿಗಿನ ಕಾಳಗ ಮುಂದುವರಿದಾಗ, ಹೋಟೆಲ್‌ ಒಳಭಾಗದಲ್ಲಿ 12ಕ್ಕೂ ಅಧಿಕ ಬ್ರಿಟನ್ ಪ್ರಜೆಗಳು ಸಿಲುಕಿದ್ದರು ಎಂಬ ಮಾಹಿತಿ ಬಹಿರಂಗವಾಗಿತ್ತು. ಉಗ್ರರು ಅಮೆರಿಕ, ಬ್ರಿಟನ್ ಹಾಗೂ ಜ್ಯೂವಿಶ್‌‌ ಪ್ರಜೆಗಳನ್ನು ಪ್ರಮುಖ ಗುರಿಯಾಗಿರಿಸಿ ದಾಳಿ ನಡೆಸಿದ್ದರು.

*ಉಗ್ರರ ಗುಂಡಿಗೆ ಬಲಿಯಾದ ವ್ಯಕ್ತಿ ಯಾಚಟ್ ಕಂಪೆನಿಯ ಮಾಲೀಕರಾಗಿದ್ದರು. ಅವರು ಉತ್ತರ ಲಂಡನ್‌‌ನ ನಿವಾಸಿಯಾಗಿದ್ದರು. ಭಯೋತ್ಪಾದಕರು ಏಕಾಏಕಿ ನಡೆಸಿದ ದಾಳಿಯಿಂದಾಗಿ ಸಾವಿರಾರು ಜನರು ಆತಂಕ ಎದುರಿಸುವಂತಾಗಿದ್ದು, ತಮ್ಮ ಜೀವ ಉಳಿಸಿಕೊಳ್ಳುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಉಗ್ರರು ದಾಳಿ ನಡೆಸಿದ ಸ್ವಲ್ಪ ಹೊತ್ತಿನಲ್ಲಿಯೇ ಬಿಬಿಸಿ ಜತೆಗೆ ದೂರವಾಣಿಯಲ್ಲಿ ಮಾತನಾಡುತ್ತ ಆಂಡ್ರೆಸ್ ಅವರು ತಿಳಿಸಿದ್ದರು. ಹೊಟೇಲ್‌ನೊಳಗೆ ಸಾವಿರಾರು ಮಂದಿ ಇದ್ದು, ಹೋಟೆಲ್‌ನ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಲಾಗಿದ್ದು, ಈಗಲೂ ಉಗ್ರರು ತಮ್ಮ ಗುಂಡಿನ ದಾಳಿಯನ್ನು ಮುಂದುವರಿಸಿದ್ದಾರೆ. ಇಲ್ಲಿನ ಸಿಬ್ಬಂದಿಗಳು ನೀರು ಮತ್ತು ಊಟದ ವ್ಯವಸ್ಥೆಗೆ ಸಹಾಯ ಮಾಡುತ್ತಿದ್ದು, ಎಲ್ಲರೂ ಜೀವದ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಗುಂಡೇಟಿಗೆ ಬಲಿಯಾಗುವ ಕೆಲವೇ ಕ್ಷಣಗಳ ಮೊದಲು ಬಿಬಿಸಿಯೊಂದಿಗೆ ಮಾತನಾಡುತ್ತ ಹೇಳಿದ ನುಡಿಗಳಿವು...

*ಘಟನೆ ಕುರಿತಂತೆ ಆಂಡ್ರೆಸ್ ಮನೆಗೂ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು. ಬಳಿಕ ಆಂಡ್ರೆಸ್ ಪತ್ನಿ ಅವರಿಗೆ ದೂರವಾಣಿ ಮಾಡಿದ್ದರು. ಆದರೆ ಕರೆಯನ್ನು ಸ್ವೀಕರಿಸಿದ್ದು ಒಬ್ಬ ಭಾರತೀಯ ಮಹಿಳೆ. ಅವರು ನಿಮ್ಮ ಪತಿ ಗುಂಡೇಟಿಗೆ ಬಲಿಯಾಗಿದ್ದಾರೆಂದು ತಿಳಿಸಿದ್ದರು.
PTI
* ಹೊಟೇಲ್‌ನೊಳಕ್ಕೆ ಉಗ್ರರು ಆಗಮಿಸಿದಾಗ ಆಸ್ಟ್ರೇಲಿಯಾದ ಖ್ಯಾತ ನಟಿ ಬ್ರೂಕೆ ಸಾಟಿನ್,ಬಾತ್‌ರೂಮ್‌ನೊಳಗೆ ಅಡಗಿ ಕೂರುವ ಮೂಲಕ ಅಪಾಯದಿಂದ ಪಾರಾಗಿದ್ದರು.

*ಅದೇ ರೀತಿ ಉಗ್ರರ ಗುಂಡಿನ ದಾಳಿ ಮುಂದುವರಿಯುತ್ತಿದ್ದಾಗಲೇ ನಿವೃತ್ತ ಶಿಕ್ಷಕಿ ಡೈನೆ ಮರ್ಫಿ(59) ಹಾಗೂ ಪತಿ ಮೈಕೇಲ್(59) ಅವರು ಹೆಸರಾಂತ ಕೆಫೆ ಲಿಯೋಪಾಡ್‌ನಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಉಗ್ರರು ಹಾರಿಸಿದ ಗುಂಡೊಂದು ಡೈನೆ ಅವರ ಕಾಲಿಗೆ ತಗುಲಿದ್ದು, ಪತಿ ಮೈಕೇಲ್ ಅವರು ಗಾಯಗೊಂಡಿದ್ದರು. ಅವರಿಬ್ಬರೂ ಇದೀಗ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

*ಜ್ಯೂವಿಶ್ ಕೇಂದ್ರವನ್ನು ಉಗ್ರರು ರಾತ್ರಿ 10ಗಂಟೆಗೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು, ಅದರಲ್ಲೊಬ್ಬ ಉಗ್ರ ಖಾಸಗಿ ಟಿವಿ ಚಾನೆಲ್ ಜತೆ ಮಾತನಾಡುತ್ತ, ಕಾಶ್ಮೀರ ಸೇರಿದಂತೆ ಜಾಗತಿಕವಾಗಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ.

*ದಾಳಿಯ ಕುರಿತಂತೆ ಬ್ರಿಟನ್‌ ಪ್ರಧಾನಿ ಗೋರ್ಡನ್ ಬ್ರೌನ್ ಅವರು, ಇದೊಂದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅಮಾಯಕ ಜನರ ಪ್ರಾಣ ಹರಣ ಮಾಡುವುದು ಧೈರ್ಯವಂತ ಜನರ ಲಕ್ಷಣವಲ್ಲ ಎಂದಿದ್ದಾರೆ. ಅಲ್ಲದೇ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಘೋಷಿಸಿದ್ದಾರೆ.

*ಏತನ್ಮಧ್ಯೆ ಭಯೋತ್ಪಾಕರ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಬ್ರಿಟಿಷ್ ಮೂಲದ ಮುಸ್ಲಿಂ ಮೌಲ್ವಿ ಅನ್‌‌ಜೆಮ್ ಚೌಧರಿ, "ಬ್ರಿಟನ್ ಮತ್ತು ಅಮೆರಿಕ ಜಾಗತಿಕವಾಗಿ ಮುಸ್ಲಿಂ ಬೇಟೆಯಾಡುತ್ತಿದೆ. ಪ್ರತಿದಿನ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇರಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯ ಮೂಲಕ ಮುಸ್ಲಿಂರನ್ನು ಹತ್ಯೆಗೈಯಲಾಗುತ್ತಿದೆ. ಆದರೆ ಮಾಧ್ಯಮಗಳು ಕೇವಲ ಮುಂಬೈ ದಾಳಿಯನ್ನು ಮಾತ್ರ ಹೈಲೈಟ್ ಮಾಡುತ್ತಿವೆ" ಎಂದು ಆರೋಪಿಸಿದ್ದಾರೆ.

*ಉಗ್ರರ ದಾಳಿಯಿಂದಾಗಿ ಇಂಗ್ಲೆಡ್-ಭಾರತ ನಡುವಿನ ಏಕದಿನ ಪಂದ್ಯ ಅಂತಿಮ ಹಣಾಹಣಿ ದಿನಾಂಕ ಮುಂದೂಡಲ್ಪಟ್ಟಿದೆ. ಇಂಗ್ಲೆಂಡ್ ತಂಡದ ಆಟಗಾರರು ಕೂಡ ತಾಯ್ನಾಡಿಗೆ ವಾಪಸಾಗಿದ್ದಾರೆ. ತಮ್ಮ ಜೀವಕ್ಕೆ ಅಪಾಯ ಇರುವ ಕಾರಣ ನಾವು ಟೆಸ್ಟ್ ಸರಣಿಗೂ ಕೂಡ ಭಾರತಕ್ಕೆ ತೆರಳಲಾರೆವು ಎಂದು ಹೇಳಿದ್ದಾರೆ.

*ಈ ಘಟನೆಯಲ್ಲಿ ಅಪಾಯದಿಂದ ಪಾರಾದ ಅಲೆಕ್ಸ್ ಚೇಂಬರ್ ತನ್ನ ಸ್ನೇಹಿತನ ಜೊತೆ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ಮೊರೆತ ಕೇಳಿಸತೊಡಗಿತ್ತು. ಸುಮಾರು 30ರಿಂದ 40 ಜನರನ್ನು ಕಿಚನ್ ರೂಮ್‌ನೊಳಕ್ಕೆ ಕೂಡಿ ಹಾಕಿ, ಎಲ್ಲರೂ ಕೈಯೆತ್ತಿ ನಿಲ್ಲಿ ಎಂದು ಹೇಳಿ, ಇದರಲ್ಲಿ ಯಾರಾದರೂ ಬ್ರಿಟನ್ ಅಥವಾ ಅಮೆರಿಕದ ಪ್ರಜೆಗಳಿದ್ದಾರಾ ಎಂದು ಪ್ರಶ್ನಿಸಿದರು, ನಿಮ್ಮ ಗುರುತು ಪತ್ರ ಅಥವಾ ಪಾಸ್‌ಪೋರ್ಟ್ ಅನ್ನು ತೋರಿಸಿ ಎಂದು ಧಮಕಿ ಹಾಕಿದ್ದ. ಆದರೆ ಉಗ್ರರು ಕೇಳುವ ಪ್ರಶ್ನೆಗೆ ನಿಜ ಹೇಳುವ ಮೂರ್ಖತನ ಮಾಡದಿರು ಎಂದು ಅಲೆಕ್ಸ್‌ಗೆ ಜತೆಯಲ್ಲಿದ್ದ ಗೆಳೆಯ ಸಲಹೆ ನೀಡಿದ್ದ ಮತ್ತು ಬ್ರಿಟನ್ ಪ್ರಜೆಯಾಗಿದ್ದರೂ ಬೇರೆ ದೇಶದ ಹೆಸರು ಹೇಳುವಂತೆ ತಿಳಿಸಿದ್ದ.

*ಬ್ರಿಟನ್‌ನ ಮತ್ತೊಬ್ಬ ಪ್ರಜೆ ಅಲನ್ ಜಾನ್ ವಾಲ್ಸ್ ಸೇರಿದಂತೆ ಹಲವಾರು ಮಂದಿ ಈ ದಾಳಿಯಿಂದ ಪಾರಾಗಿದ್ದರು. ಅಲನ್ ಲಿಫ್ಟ್‌ನೊಳಕ್ಕೆ ತೂರಿಕೊಳ್ಳುವ ಮೂಲಕ ಪಾರಾಗಿದ್ದ. ಲಿಫ್ಟ್ ಬಾಗಿಲು ಮುಚ್ಚಿಕೊಳ್ಳುವುದರೊಂದಿಗೆ ಆತ ಬದುಕುಳಿದಿದ್ದ, ಆದರೆ ಆತ ಕೆಲವು ಸಮಯದವರೆಗೂ ನಿಂತೇ ಕಾಲ ಕಳೆದಿದ್ದ. ಯಾಕೆಂದರೆ ಮತ್ತೊಂದು ಮೂಲೆಯಲ್ಲಿ ಉಗ್ರರು ಜಪಾನ್ ಪ್ರಜೆಯೊಬ್ಬನನ್ನು ಗುಂಡಿಕ್ಕಿ ಸಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ವಿರುದ್ಧ 62 ಗಂಟೆಗಳ ಕಾರ್ಯಾಚರಣೆ ಅಂತ್ಯ
ಹುತಾತ್ಮರಿಗೆ ರಾಷ್ಟ್ರದ ಗೌರವಪೂರ್ಣ ನಮನ
ತಾಜ್ ಹೋಟೇಲ್ ಸ್ಫೋಟಿಸಲು ಯೋಜಿಸಿದ್ದ ಉಗ್ರರು?
ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ