ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಾಜ್‌ನಲ್ಲಿ ಸಿಲುಕಿದ್ದ ಪತ್ರಕರ್ತೆ ಬದುಕುಳಿದಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್‌ನಲ್ಲಿ ಸಿಲುಕಿದ್ದ ಪತ್ರಕರ್ತೆ ಬದುಕುಳಿದಿಲ್ಲ
PTI
ತಾಜ್ ಹೋಟೇಲಿನ ಆರನೆ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಹಿರಿಯ ಪತ್ರಕರ್ತೆ, ಟೈಮ್ಸ್ ಆಫ್ ಇಂಡಿಯಾದ ಉದ್ಯೋಗಿ ಸಬಿನಾ ಸೆಹಗಲ್ ಸಾಯ್ಕಿಯಾ ಅವರು ಸಾವನ್ನಪ್ಪಿದ್ದಾರೆಂದು ಅವರ ಸ್ನೇಹಿತರು ಶನಿವಾರ ದೃಢಪಡಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಸಲಹಾ ಸಂಪಾದಕಿ ಹಾಗೂ ಖ್ಯಾತ ಆಹಾರ ತಜ್ಞೆಯೂ ಆಗಿದ್ದ ಸಬಿನಾ ಅವರು ಬುಧವಾರ ರಾತ್ರಿಯ ತನಕ ತನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಎಸ್ಎಂಎಸ್ ಕಳುಹಿಸುತ್ತಿದ್ದು ಬಳಿಕ ಸಂಪರ್ಕ ಕಡಿದುಕೊಂಡಿದ್ದರು.

ಅವರು ಇದ್ದ ಮಹಡಿಯ ಹೆಚ್ಚಿನ ಭಾಗ ಬೆಂಕಿಗೆ ಆಹುತಿಯಾಗಿತ್ತು. ಶುಕ್ರವಾರ ತಡರಾತ್ರಿಯ ತನಕವೂ ಅವರ ಪತಿ ಶಂತನು ಸಾಯ್ಕಿಯಾ ಅವರು ತನ್ನ ಪತ್ನಿ ಬದುಕುಳಿದಿರಬಹುದು ಎಂಬ ಆಶಾವಾದ ಹೊಂದಿದ್ದರಾದರೂ, ಇದೀಗ ಆವರ ಆಸೆ ಕಮರಿದೆ.

ಸಬಿನಾ ತನ್ನ ಪತಿ ಹಾಗೂ 14ರ ಹರೆಯದ ಪುತ್ರಿ ಮತ್ತು 11ರ ಹರೆಯ ಪುತ್ರನನ್ನು ಅಗಲಿದ್ದಾರೆ. ಅವರು ಗುರುವಾರ ಮಧ್ಯರಾತ್ರಿ 2 ಗಂಟೆಯ ವೇಳೆಗೆ ತನ್ನ ಪತಿಗೆ ಸಂದೇಶ ಕಳುಹಿಸಿ ತಾನು ಬಾತ್‌ರೂಂನಲ್ಲಿ ಸಿಲುಕಿಕೊಂಡಿರುವುದಾಗಿ ಹೇಳಿದ್ದರು.

ಸಾಯ್ಕಿನಾ ಅವರು ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಹೋಟೇಲಿಗೆ ತೆರಳಿದ್ದರು. ಅದೇ ವೇಳೆಗೆ ಭಯೋತ್ಪಾದಕರು ಹೋಟೇಲಿಗೆ ನುಗ್ಗಿ ಎಲ್ಲೆಂದರಲ್ಲಿ ಗುಂಡು ಹಾರಾಟ ನಡೆಸಿದ್ದು, ಹಲವಾರು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.
ಗುರುವಾರದಿಂದ ಎನ್ಎಸ್‌ಜಿ ಕಮಾಂಡೋಗಳು ಉಗ್ರರ ವಿರುದ್ಧ ಆರಂಭಿಸಿದ್ದ ಕಾರ್ಯಾಚರಣೆ ಶನಿವಾರ ಮುಂಜಾನೆ ಅಂತ್ಯಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿಯ ಪ್ರಮುಖ ಘಟನಾವಳಿ...
ಉಗ್ರರ ವಿರುದ್ಧ 62 ಗಂಟೆಗಳ ಕಾರ್ಯಾಚರಣೆ ಅಂತ್ಯ
ಹುತಾತ್ಮರಿಗೆ ರಾಷ್ಟ್ರದ ಗೌರವಪೂರ್ಣ ನಮನ
ತಾಜ್ ಹೋಟೇಲ್ ಸ್ಫೋಟಿಸಲು ಯೋಜಿಸಿದ್ದ ಉಗ್ರರು?
ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು