ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನೀಡಲು ಮುಂದಾಗಿರುವ ಆರ್ಥಿಕ ಪರಿಹಾರವನ್ನು ಉಗ್ರರ ಗುಂಡಿಗೆ ಬಲಿಯಾಗಿರುವ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಕುಟುಂಬ ನಿರಾಕರಿಸಿದೆ.
ಶುಕ್ರವಾರ ಮೋದಿ ಅವರು ಕರ್ಕರೆ ಹಾಗೂ, ಗುಂಡಿನ ಚಕಮಕಿಯಲ್ಲಿ ಹತರಾಗಿರುವ ಇನ್ನೋರ್ವ ಯೋಧ ವಿಜಯ್ ಸಾಲಸ್ಕರ್ ಅವರುಗಳ ಮನೆಗೆ ಭೇಟಿ ನೀಡಿದ್ದರು.
ಮೋದಿಯವರು ಹೋರಾಟದಲ್ಲಿ ಮಡಿದ ಪೊಲೀಸರ ಕುಟುಂಬಗಳಿಗೆ ನೀಡಲು ಒಂದು ಕೋಟಿ ರೂಪಾಯಿ ಸಹಾಯವನ್ನು ಮಹಾರಾಷ್ಟ್ರ ಸರಕಾರಕ್ಕೆ ನೀಡುವುದಾಗಿಯೂ ಘೋಷಿಸಿದ್ದರು.
ಸಾವಿಗೀಡಾಗಿರುವ ಕರ್ಕರೆ ಅವರ ಪತ್ನಿ ಮೋದಿಯವರ ಸಹಾಯವನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಮಹಾರಾಷ್ಟ್ರದ 14 ಪೊಲೀಸ್ ಸಿಬ್ಬಂದಿಗಳು ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ.
|