ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿಗೆ ಡೆಕ್ಕನ್ ಮುಜಾಹಿದೀನ್ ಇಮೇಲ್ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಗೆ ಡೆಕ್ಕನ್ ಮುಜಾಹಿದೀನ್ ಇಮೇಲ್ ಬೆದರಿಕೆ
ಮುಂಬೈಯಲ್ಲಿ ಪೈಶಾಚಿಕ ಕೃತ್ಯ ಮೆರೆದು ರುದ್ರ ನರ್ತನ ಮಾಡಿರುವ ಡೆಕ್ಕನ್ ಮುಜಾಹಿದ್ದೀನ್ ಎಂಬ ಉಗ್ರವಾದಿ ಸಂಘಟನೆಯು ಇದೀಗ ದೆಹಲಿಯಲ್ಲಿ ದಾಳಿ ನಡೆಸುವುದಾಗಿ ಇಮೇಲ್ ಬೆದರಿಕೆ ಹಾಕಿದೆ.

ರಾಜಧಾನಿ ದೆಹಲಿಯಲ್ಲಿ ತ್ರಿಚಕ್ರ ವಾಹನಗಳು ತೀವ್ರ ಪರಿಶೀಲನೆಗೆ ಒಳಗಾಗಿವೆ. ಉಗ್ರರು ರಿಕ್ಷಾಗಳನ್ನು ಬಳಸಿ ಜನನಿಬಿಡ ಪ್ರದೇಶದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಮುಂದಾಗಿದ್ದಾರೆ ಎಂಬ ಗುಪ್ತಚರದಳದ ಮಾಹಿತಿಗಳ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೂರು ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ದಾಳಿ ನಡೆಸುವುದಾಗಿ ಡೆಕ್ಕನ್ ಮುಜಾಹಿದೀನ್ ಎಂದು ಸಹಿ ಮಾಡಿರುವ ಈಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಏರ್‌ಪೋರ್ಟ್ ಸುತ್ತಮುತ್ತ ಓಡಾಡುತ್ತಿರುವ ರಿಕ್ಷಾಗಳ ತಪಾಸಣೆಗೆ ಪೊಲೀಸರು ಮುಂದಾಗಿದ್ದಾರೆ. ರಿಕ್ಷಾಗಳು ಸಿಎನ್‌ಜಿಯಲ್ಲಿ ಓಡಾಡುವ ಕಾರಣ ರಿಕ್ಷಾದಲ್ಲಿ ಇರಿಸಿರುವ ಬಾಂಬ್ ಸ್ಫೋಟಗೊಂಡರೆ, ಪೆಟ್ರೋಲ್ ಅಥವಾ ಡೀಸೆಲ್‌ನಲ್ಲಿ ಓಡಾಡುವ ವಾಹನ ಸ್ಫೋಟಕ್ಕಿಂತ ಹೆಚ್ಚಿನ ಹಾನಿಯುಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜೀನಾಮೆ ಸಲ್ಲಿಸಿದ ಡಿಸಿಎಂ ಪಾಟೀಲ್
ಎಂಕೆಎನ್ ರಾಜೀನಾಮೆ ಸ್ವೀಕೃತವಿಲ್ಲ
ಪಾಟೀಲ್ ಕಳಕೊಂಡದ್ದು ಚಿದುಗೆ ದಕ್ಕಿತು!
ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ
ಉಪಮುಖ್ಯಮಂತ್ರಿಗೆ ಇದೊಂದು ಸಣ್ಣ ಘಟನೆಯಂತೆ!
ದಾಳಿ ನಡೆಸಿದ ಉಗ್ರರಿಗೆ ಸ್ಥಳೀಯರ ಸಹಾಯ