ಮುಂಬೈ ದಾಳಿಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ಅವರ ಉತ್ತರಾಧಿಕಾರಿಯಾಗಿ ಸುಶಿಲ್ ಕುಮಾರ್ ಶಿಂಧೆ ಅವರು ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ನೆಹರೂ ಕುಟುಂಬಕ್ಕೆ ನಿಷ್ಠರಾಗಿರುವ ಶಿಂಧೆ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅಂತ್ಯದ ವೇಳೆ 2003ರಲ್ಲೂ ಶಿಂಧೆ ಅವರು ದೇಶ್‌ಮುಖ್ ಅವರ ಉತ್ತರಾಧಿಕಾರಿಯಾಗಿದ್ದರು.
ತಾನು ಅಧಿಕಾರ ತ್ಯಜಿಸಲು ಸಿದ್ಧವಾಗಿರುವುದಾಗಿ ದೇಶ್‌ಮುಖ್ ಘೋಷಿಸಿದ ಬೆನ್ನಿಗೆ ಶಿಂಧೆ ಅವರು ಸೋಮಾವಾರ ಮುಂಜಾನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಶಿಂಧೆಯವರಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ಪೃಥ್ವಿರಾಜ್ ಚೌವ್ಹಾಣ್ ಅವರ ಹೆಸರೂ ಕೇಳಿಬಂದಿದೆ.
ಆಂಟನಿ ಪ್ರತಿಕ್ರಿಯೆ ದೇಶ್‌ಮುಖ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಉಸ್ತುವಾರಿಯಾಗಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, ರಾಜೀನಾಮೆ ಹೈಮಾಂಡ್ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.
ಅಲ್ಲದೆ ಈ ಕುರಿತು ಮಿತ್ರಪಕ್ಷಗಳೊಂದಿಗೂ ಸಮಾಲೋಚನೆ ನಡೆಸಬೇಕಾಗಿದೆ ಎಂದು ಆಂಟನಿ ತಿಳಿಸಿದ್ದಾರೆ. |