ಅಮೃತಸರದಲ್ಲಿ ಸೇನಾನೇಮಕಾತಿ ಸಮಾವೇಶದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಇಬ್ಪರು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.
ಖಾಸದಲ್ಲಿರುವ ಸೇನಾ ಕಂಟೋನ್ಮೆಂಟ್‌ನಲ್ಲಿ ಅಭ್ಯರ್ಥಿಗಳು ಒಳಬರುವಂತೆ ಗೇಟ್ ತೆರೆಯುತ್ತಲೇ, ಒಳನುಗ್ಗಲು ಆಭ್ಯರ್ಥಿಗಳೊಳಗೆ ನೂಕುನುಗ್ಗಲು ಉಂಟಾದ ವೇಳೆ ಇಬ್ಬರು ಸಾವನ್ನಪ್ಪಿದರು ಎಂದು ಅಮೃತಸರ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ತಿಳಿಸಿದ್ದಾರೆ.
ಇವರಿಬ್ಬರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಕರೆತರುವಾಗಲೇ ಸಾವನ್ನಪ್ಪಿದ್ದರು ಎಂದು ಘೋಷಿಸಲಾಯಿತು.
ಮುಂಜಾನೆಯಿಂದಲೇ ದೊಡ್ಡ ಸಂಖ್ಯೆಯ ಯವಕರು ಜಮಾಯಿಸಿದ್ದು, ಗೇಟ್ ತೆರೆಯುತ್ತಲೇ ಮುಂಚಿತವಾಗಿ ಒಳಸೇರಿಕೊಳ್ಳಲು ಎಲ್ಲರೂ ಒಮ್ಮೆಗೇ ಧಾವಿಸಿದ ಕಾರಣ ಕಾಲ್ತುಳಿತ ಉಂಟಾಯಿತು ಎಂದು ಅವರು ತಿಳಿಸಿದ್ದಾರೆ. ಮೃತ ಯುವಕರು ಯಾರೆಂಬುದನ್ನು ಇನ್ನಷ್ಟೆ ಪತ್ತೆ ಹಚ್ಚಬೇಕಾಗಿದೆ ಎಂದೂ ಅವರು ಹೇಳಿದರು. |