ಗುವಾಹತಿ: ಅಸ್ಸಾಮಿನಲ್ಲಿ ಪ್ರಯಾಣಿಕರ ರೈಲೊಂದರಲ್ಲಿ ಸಂಭವಿಸಿರುವ ಸ್ಫೋಟದಿಂದಾಗಿ ಮೂರು ಮಂದಿ ಸಾವನ್ನಪ್ಪಿದ್ದು, ಇತರ 30 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುವಾಹತಿಯ ಸುಮಾರು 300 ಕಿ.ಮೀ ಪೂರ್ವದಲ್ಲಿ ರೈಲು ನಿಲುಗಡೆಯಾದ ವೇಳೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಓರ್ವವ್ಯಕ್ತಿ ಸ್ಥಳದಲ್ಲೇ ಮೃತರಾಗಿದ್ದಾರೆ, ಗಂಭೀರ ಗಾಯಗೊಂಡಿದ್ದ ಇತರ ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಸ್ಫೋಟದ ಕುರಿತು ಇದುವರೆಗೆ ಯಾವುದೇ ಉಗ್ರಗಾಮಿ ಸಂಘಟನೆ ಜವಾಬ್ದಾರಿ ವಹಿಸಿಕೊಳ್ಳಲಿಲ್ಲ. ಬಹುಸಂಖ್ಯಾತ ಕರ್ಬಿ ಬುಡಕಟ್ಟು ಬಾಹುಳ್ಯದ ಈ ಪ್ರದೇಶದಲ್ಲಿ ಪ್ರತ್ಯೇಕರಾಜ್ಯಕ್ಕಾಗಿ ಹೋರಾಡುತ್ತಿರುವ ಕಾನೂನು ಬಾಹಿರ ಸಂಘಟನೆ ಕರ್ಬಿ ಲೋಂಗ್ರಿ ನ್ಯಾಶನಲ್ ಲಿಬರೇಶನ್ ಫ್ರಂಟ್ ಸಕ್ರಿಯವಾಗಿದೆ. |