ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿವಾದಬೇಡ- ಉನ್ನಿ: ಕ್ಷಮೆಯಾಚಿಸುವುದಿಲ್ಲ-ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿವಾದಬೇಡ- ಉನ್ನಿ: ಕ್ಷಮೆಯಾಚಿಸುವುದಿಲ್ಲ-ಸಿಎಂ
ಮುಂಬೈ ತಾಜ್ ಹೋಟೇಲ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾಗಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆಯಿಂದ ಅವಮಾನಿತರಾಗಿರುವ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ವ್ಯಗ್ರಗೊಂಡಿದ್ದು, ಅದು ಮೇಜರ್ ಸಂದೀಪ್ ಮನೆಯಲ್ಲದಿದ್ದರೇ 'ನಾಯಿಯೂ ಅತ್ತ ಇಣುಕುತ್ತಿರಲಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ತಿರುವನಂತಪುರದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ "ಸಂದೀಪ್ ನಮ್ಮ ಮನದಲ್ಲಿದ್ದಾರೆ. ಇದಕ್ಕಾಗಿ ನಾವು ಅವರ ಹೆತ್ತವರು ಮತ್ತು ಬಂಧು ಬಳಗದವರನ್ನು ಮತನಾಡಿಸಿ ಸಂತಾಪ ಸೂಚಿಸಲು ತೆರಳಿದ್ದೆವು. ಯೋಧನ ತಂದೆಯಾಗಿರುವ ಉನ್ನಿಕೃಷ್ಣನ್ ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕಿತ್ತು" ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ಕೇರಳ ಮುಖ್ಯಮಂತ್ರಿ ಹಾಗೂ ಗೃಹಸಚಿವ ಬಾಲಕೃಷ್ಣ ಕೊಡಿಯೇರಿ ಅವರುಗಳು ಉನ್ನಿಕೃಷ್ಣನ್ ಮನೆಗೆ ತೆರಳಿದ್ದ ವೇಳೆ, ಪುತ್ರಶೋಕದಿಂದ ಭಾವತೀವ್ರಗೊಂಡಿದ್ದ ಅವರು, ತಾನು ಮುಖ್ಯಮಂತ್ರಿಗಳನ್ನು ಭೇಟಿಮಾಡುವುದಿಲ್ಲ ಎಂದು ಹೇಳಿದ್ದು ತನ್ನ ಮನೆಯ ಗೇಟ್ ಹಾಕಿಕೊಂಡಿದ್ದರು. ಪೊಲೀಸರು ಅವರ ಮನವೊಲಿಕೆಗೆ ಪುನರಪಿ ಪ್ರಯತ್ನಿಸಿದ್ದರೂ ಅವರು ಭೇಟಿಗೆ ಅವಕಾಶವನ್ನೇ ನೀಡದೆ ಬಾಯಿಗೆ ಬಂದಂತೆ ಬಯ್ದಿದ್ದರು. ಇಲ್ಲಿಂದ ತೆರಳಿ ಎಂಬುದಾಗಿ ಕೇರಳ ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ತಾಕೀತು ಮಾಡಿದ್ದರು.

ಇದಾದ ಬಳಿಕ ಮರುದಿವಸ ಅದೇ ವಾಹಿನಿಗೆ ಸಂದರ್ಶನ ನೀಡಿದ್ದ ಉನ್ನಿಕೃಷ್ಣನ್ ಅವರು "ತಮ್ಮ ಪುತ್ರನ ಸಾವಿನೊಂದಿಗೆ ರಾಜಕೀಯ ನಡೆಸುವುದು ತನಗಿಷ್ಟವಿಲ್ಲ. ಸಂದೀಪ್ ಬದುಕಿದ್ದರೂ ಇದನ್ನು ಇಷ್ಟಪಡುತ್ತಿರಲಿಲ್ಲ. ಇವರು ರಾಜಕೀಯ ಒತ್ತಡದಿಂದ ತನ್ನ ಮಗನ ಸಾವಿಗೆ ಸಂತಾಪ ಸೂಚಿಸಲು ಬಂದಿದ್ದರು" ಎಂದು ಹೇಳಿದ್ದರು.

"ತುಂಬ ಕೆಟ್ಟ ಮನಸ್ಥಿತಿಯಲ್ಲಿ ಇದ್ದ ನನ್ನಿಂದ ಆರೀತಿಯ ವರ್ತನೆಯಾಗಿದೆ ಎಂದೂ ಹೇಳಿದ್ದರು."

ಕ್ಷಮೆ ಯಾಚಿಸುವುದಿಲ್ಲ
ಇದೀಗ ಈ ವಿಚಾರ ಮಾಧ್ಯಮಗಳಲ್ಲಿ ಅತಿಹೆಚ್ಚು ಪ್ರಚಾರ ವಾಗುತ್ತಿರುವಂತೆ, ತನ್ನ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಹೇಳಿದ್ದಾರೆ.

ವಿವಾದ ಬಯಸುವುದಿಲ್ಲ
ಇದೀಗ, ಕೇರಳ ಮುಖ್ಯಮಂತ್ರಿ ಅವರು, "ಅದು ಸಂದೀಪ್ ಮನೆಯಲ್ಲದಿದ್ದರೆ ಅತ್ತ ಒಂದು ನಾಯಿಯೂ ಇಣುಕುತ್ತಿರಲಿಲ್ಲ" ಎಂಬ ಹೇಳಿಕೆ ನೀಡಿರುವ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಲು ಉನ್ನಿಕೃಷ್ಣನ್ ನಿರಾಕರಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಯಾವುದೇ ವಿವಾದ ತನಗೆ ಇಷ್ಟವಿಲ್ಲ ಎಂದೂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಸ್ಸಾಂ ರೈಲು ಸ್ಫೋಟ: 3ಸಾವು, 60 ಮಂದಿಗೆ ಗಾಯ
ದಾವೂದ್‌ನನ್ನು ಒಪ್ಪಿಸಿ: ಪಾಕ್‌ಗೆ ಭಾರತ ತಾಕೀತು
ದತ್ತಪೀಠ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
ಮುಂಬೈಗೆ ಬಂದಿಳಿದ ಅಮೆರಿಕದ ಎಫ್‌ಬಿಐ
ಬಿಜೆಪಿ ರಾಜಕೀಯ ಮಾಡುತ್ತಿದೆ: ತಿವಾರಿ ಆರೋಪ
ದೇಶಾದ್ಯಂತ ವಿಶ್ವ ಏಡ್ಸ್ ದಿನಾಚರಣೆ