ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನು ರಾಜಕಾರಣಿಗಳ ವಿರೋಧಿಯಲ್ಲ: ಉನ್ನಿಕೃಷ್ಣನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ರಾಜಕಾರಣಿಗಳ ವಿರೋಧಿಯಲ್ಲ: ಉನ್ನಿಕೃಷ್ಣನ್
PTI
ರಾಜಕಾರಣಿಗಳ ವಿರುದ್ಧ ತನಗೆ ಯಾವುದೇ ದ್ವೇಷವಿಲ್ಲ. ನಾನು ರಾಜಕಾರಣಿಗಳ ವಿರೋಧಿಯಲ್ಲ. ರಾಜಕಾರಣಿಗಳು ಪ್ರಜಾಪ್ರಭುತ್ವದ ಭಾಗವಷ್ಟೇ ಎಂದು ಮುಂಬಯಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಅವರ ತಂದೆ ಉನ್ನಿಕೃಷ್ಣನ್ ಅವರ ಸಮಜಾಯಿಷಿಕೆ ನೀಡಿದ್ದಾರೆ.

ಕೇರಳ ಸಿಎಂ ವಿ.ಎಸ್. ಅಚ್ಯತಾನಂದನ್ ಮತ್ತು ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಲು ನಿರಾಕರಿಸಿದ ಬಳಿಕ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಮಾಧ್ಯಮಗಳ ವರದಿ ಗಮನಿಸಿ ಸಚಿವರು ಆಗಮಿಸಿದರು. ಯಾರದೋ ಒತ್ತಾಯದ ಮೇರೆಗೆ ಸಾಂತ್ವನ ಹೇಳಲು ಬರುವುದು ನನಗಿಷ್ಟವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ದೇಶ ಸಂಕಷ್ಟದಲ್ಲಿದೆ. ನನ್ನ ಪ್ರತಿಕ್ರಿಯೆಯನ್ನು ತಪ್ಪಾಗಿ ಅರ್ಥೈಸುವುದಾಗಲಿ, ವಿಪರೀತ ಅರ್ಥ ಕಲ್ಪಿಸುವುದಾಗಲಿ ನನಗಿಷ್ಟವಿಲ್ಲ. ರಾಜಕಾರಣಿಗಳು ರಾಜೀನಾಮೆ ನೀಡುತ್ತಿದ್ದಾರೆ. ಆದರೆ ನನ್ನ ಟೀಕೆ ಅದ್ಯಾವುದಕ್ಕೂ ಸಂಬಂಧಿಸಿದ್ದಲ್ಲ. ಸಹಜವಾಗಿ ಸಾಂತ್ವನವನ್ನು ನಿರೀಕ್ಷಿಸಿದ್ದೆ ಎಂದು ಅವರು ಹೇಳಿದರು.

ಕೇರಳದ ಸಚಿವರು ಐದಾರು ಬಾರಿ ದೂರವಾಣಿ ಕರೆ ಮಾಡಿದ್ದರೂ ಕೂಡ ಉನ್ನಿಕೃಷ್ಣನ್ ಪ್ರತಿಕ್ರಿಯಿಸಿರಲಿಲ್ಲವಾಗಿತ್ತು. ಬಳಿಕ ಸಿಎಂ ಮತ್ತು ಸಚಿವರು ಮುಂಬೈಯಿಂದ ನೇರವಾಗಿ ಅವರ ಮನೆಗೆ ಬಂದಾಗಲೂ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನದಟ್ಟಣೆಯ ವೇಳೆ ದಾಳಿ ನಡೆಸಬಯಸಿದ್ದ ಉಗ್ರರು
ಉನ್ನಿ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾರೆ: ಸಿಪಿಐ ನಾಯಕ
ವಿವಾದಬೇಡ- ಉನ್ನಿ: ಕ್ಷಮೆಯಾಚಿಸುವುದಿಲ್ಲ-ಸಿಎಂ
ಅಸ್ಸಾಂ ರೈಲು ಸ್ಫೋಟ: 3ಸಾವು, 30 ಮಂದಿಗೆ ಗಾಯ
ದಾವೂದ್‌ನನ್ನು ಒಪ್ಪಿಸಿ: ಪಾಕ್‌ಗೆ ಭಾರತ ತಾಕೀತು
ದತ್ತಪೀಠ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ