ಭಾರತದಲ್ಲಿ ವಿವಿಧ ಕಾರಣಗಳಿಂದಾಗಿ ಪ್ರತಿ ಗಂಟೆಗೆ 14 ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ನೂತನ ವರದಿ ಬಹಿರಂಗಗೊಳಿಸಿದೆ.
ಸಂಬಂಧ ಹಳಸುವಿಕೆ, ದಿವಾಳಿ, ಅನಾರೋಗ್ಯ ಮತ್ತು ಸಾಮಾಜಿಕವಾಗಿ ಅವಮಾನಕ್ಕೊಳಗಾದವರು ಆತ್ಮಹತ್ಯೆಗೆ ಒಳಗಾಗುತ್ತಿದ್ದು, ಪ್ರತಿ ಮೂರು ಆತ್ಮಹತ್ಯೆಗಳಲ್ಲಿ ಬಲಿಪಶುಗಳಾರುತ್ತಿರುವವರಲ್ಲಿ ಓರ್ವ ಯುವಕ ಹಾಗೂ ಐದು ಮಂದಿಯಲ್ಲಿ ಓರ್ವ ಗೃಹಿಣಿ ನೇಣಿಗೆ ಶರಣಾಗುತ್ತಿರುವುದಾಗಿ ವರದಿ ತಿಳಿಸಿದೆ.
ದೇಶದಲ್ಲಿ ಇತ್ತೀಚೆಗೆ ಅಪಘಾತ ಮತ್ತು ಆತ್ಮಹತ್ಯೆಯಿಂದ ಸಾಯುತ್ತಿರುವವರ ಕುರಿತು ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್‌ಸಿಆರ್‌ಬಿ)ಯ ನೂತನ ವರದಿ ಈ ಅಂಕಿ-ಅಂಶಗಳನ್ನು ಹೊರಗೆಡಹಿದೆ.
ಅಪಘಾತ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದಂತೆ ನೂತನ ಅಂಕಿ-ಅಂಶದ ಪ್ರಕಾರ ಭಾರತದಲ್ಲಿ 2007ರಲ್ಲಿ 1,22,637ಜನರು ಆತ್ಮಹತ್ಯೆಗೆ ಶರಣಾಗಿದ್ದು, ಇದರಲ್ಲಿ 43,342ಮಹಿಳೆಯರು ಸೇರಿದ್ದಾರೆ.
ಅದರಲ್ಲೂ ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಅಲ್ಲಿ 15,184 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಆಂಧ್ರಪ್ರದೇಶದಲ್ಲಿ 14,882 ಜನ ನೇಣಿಗೆ ಶರಣಾಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ.
ಸಾಮಾನ್ಯ ಅಥವಾ ಕೌಟುಂಬಿಕ ಕಾರಣಗಳಿಂದಾಗಿ 264ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿರುವ ವರದಿ, ಇದರಲ್ಲಿ 118ಮಂದಿ ಪುರುಷರು ಹಾಗೂ 146ಮಂದಿ ಮಹಿಳೆಯರಾಗಿದ್ದಾರೆ.
|