ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ
ಪೆಂಟಗಾನ್ - 9/11ರ ಮಾದರಿಯಲ್ಲೇ ದಾಳಿ ?
PTI
ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ(9/11) ಅಲ್ ಕೈದಾ ದಾಳಿ ನಡೆಸಿದ ಮಾದರಿಯಲ್ಲೇ ಭಾರತದ ಮೇಲೂ ಮತ್ತೊಮ್ಮೆ ಉಗ್ರರು ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದ್ದು ಆ ನಿಟ್ಟಿನಲ್ಲಿ ಎಲ್ಲೆಡೆ ಕಟ್ಟೆಚ್ಚರದಿಂದ ಇರುವಂತೆ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ರಕ್ಷಣಾ ಪಡೆಗೆ ಸೂಚಿಸಿದ್ದಾರೆ.

ಮುಂಬೈಯ ಪ್ರಮುಖ ಹೋಟೆಲುಗಳು ಮೇಲೆ ಉಗ್ರರು ನಡೆಸಿದ ದಾಳಿ ನೆನಪು ಮಾಸುವ ಮುನ್ನವೇ ಇದೀಗ ರಕ್ಷಣಾ ಸಚಿವರು ಮತ್ತೊಂದು ದಾಳಿಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, ಆ ನಿಟ್ಟಿನಲ್ಲಿ ಭಯೋತ್ಪಾದಕರು ಯಾವುದೇ ಸಂದರ್ಭದಲ್ಲೂ ವೈಮಾನಿಕ ದಾಳಿ ನಡೆಸುವ ಸಂಭವವಿದ್ದು, ರಕ್ಷಣಾ ಪಡೆ ಎಲ್ಲಾ ರೀತಿಯಿಂದಲೂ ಸರ್ವ ಸನ್ನದ್ಧರಾಗಿರಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಅಮೆರಿಕದ ಪೆಂಟಾಗಾನ್ ಮೇಲೆ ಉಗ್ರರು ಈ ಮೊದಲು ನಡೆಸಿದ ದಾಳಿಯ ಮಾದರಿಯಂತೆಯೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಆಂಟನಿ ಹೇಳಿದ್ದಾರೆ.

ದೇಶದ ಭದ್ರತೆಯ ಅಂಗವಾಗಿ ರಕ್ಷಣಾ ಪಡೆಯ ಮೂರು ಜನರಲ್‌ಗಳ ಜತೆ ಆಂಟನಿ ಅವರು ಬುಧವಾರ ಮಹತ್ವದ ಮಾತುಕತೆ ನಡೆಸಿದ್ದು, ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ರಕ್ಷಣಾ ಪಡೆಗಳ ಸಹಕಾರ ಅತ್ಯಗತ್ಯವಾಗಿದ್ದು, ಗುಪ್ತಚರ ಇಲಾಖೆ ಕೂಡ ಕಾರ್ಯದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ನೌಕಾದಳದ ವರಿಷ್ಠ ಆಡ್ಮಿರಲ್ ಸುರೇಶ್ ಮೆಹ್ತಾ, ವೈಮಾನಿಕ ದಳದ ಮಾರ್ಷಲ್ ಪಾಲಿ ಹೋಮಿ ಮಾಜೋರ್ ಮತ್ತು ಆರ್ಮಿ ವರಿಷ್ಠ ಜನರಲ್ ದೀಪಕ್ ಕಪೂರ್, ರಕ್ಷಣಾ ಕಾರ್ಯದರ್ಶಿ ವಿಜಯ್ ಸಿಂಗ್ ಅವರು ಹಾಜರಿದ್ದು, ಮುಂಬೈಯಲ್ಲಿ ದಾಳಿ ನಡೆದ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಗಡಿಪ್ರದೇಶದಲ್ಲಿ ಹೈ ಅಲರ್ಟ್ ಆಗಿ ಇರುವಂತೆಯೂ ಆಂಟನಿ ಸೂಚಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಲ್ಲಿ ಪ್ರತಿ ಗಂಟೆಗೆ 14 ರೈತರ ಆತ್ಮಹತ್ಯೆ
ದಾಳಿಯ ಬಳಿಕ ಪರಾರಿಯ ಭರವಸೆಯಿತ್ತು: ಕಸಬ್
ಭಾರತಕ್ಕೆ ಸಹಕರಿಸುವಂತೆ ಪಾಕ್‌ಗೆ ಅಮೆರಿಕ ತಾಕೀತು
'ನಾಯಿ'ಗೆ ಕ್ಷಮೆಯಾಚಿಸಿದ ಅಚ್ಯುತಾನಂದನ್
'ನಾಯಿ' ಹೇಳಿಕೆಗೆ ವಿಕ್ಷಿಪ್ತ ಪ್ರತಿಭಟನೆ
ಮಾಧ್ಯಮಗಳ ಮೇಲೆ ಅಚ್ಯುತಾನಂದನ್ ಗೂಬೆ