ಮುಂಬೈಯಲ್ಲಿ ಉಗ್ರರ ಹೇಷಾರವದ ಹಿನ್ನೆಲೆಯಲ್ಲಿ ಉರುಳಿದ ತಲೆಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಮುಂಬೈ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಸ್ವೀಕರಿಸಿದೆ. ಆದರೆ ಅವರ ಉತ್ತರಾಧಿಕಾರಿ ಯಾರು ಎಂಬ ಅಂತಿಮ ನಿರ್ಧಾರ ಇನ್ನಷ್ಟೆ ಆಗಬೇಕಿದೆ.ಕೇಂದ್ರ ಸಚಿವ ಸುಶಿಲ್ ಕುಮಾರ್ ಶಿಂಧೆ, ರಾಜ್ಯ ಸಚಿವ ನಾರಾಯಣ ರಾಣೆ ಇವರ ಹೆಸರುಗಳು ಸ್ಫರ್ಧೆಯಲ್ಲಿವೆ.ಹಿರಿಯ ನಾಯಕರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರದ ಉಸ್ತುವಾರಿಯಾಗಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ ದೇಶ್‌ಮುಖ್ ಅವರ ರಾಜೀನಾಮೆ ಸ್ವೀಕೃತಿಯನ್ನು ಘೋಷಿಸಿದರು.ಗುರವಾರ ಕಾಂಗ್ರೆಸ್ ಕೇಂದ್ರ ವೀಕ್ಷಕರು ಮುಂಬೈಗೆ ತೆರಳಲಿದ್ದು, ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಮುಂಬೈಯ ದಾಳಿಯ ಹಿನ್ನೆಲೆಯಲ್ಲಿ ಇದೀಗಾಗಲೇ ಕೇಂದ್ರ ಗೃಹಸಚಿವರಾಗಿದ್ದ ಶಿವರಾಜ್ ಪಾಟೀಲ್ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ರಾಜೀನಾಮೆ ನೀಡಿದ್ದಾರೆ.ಸುಶಿಲ್ ಕುಮಾರ್ ಶಿಂಧೆ, ಪೃಥ್ವಿರಾಜ್ ಚವ್ಹಾಣ್, ನಾರಾಯಣ್ ರಾಣೆ, ಅಶೋಕ್ ಚೌವ್ಹಾಣ್ ಇವರುಗಳಲ್ಲಿ ಯಾರಿಗೆ ಪಟ್ಟ ಒಲಿಯುತ್ತದೆ ಎಂಬುದು ಗುರುವಾರ ಸಾಯಂಕಾಲದೊಳಗೆ ತಿಳಿಯುವ ಸಾಧ್ಯತೆ ಇದೆ.ಈ ಹಿಂದಿನ ಅವಧಿಗೆ ಮುಖ್ಯಮಂತ್ರಿಯಾಗಿದ್ದಲೂ ದೇಶ್‌ಮುಖ್ ತನ್ನ ಅಧಿಕಾರದ ಕೊನೆಗಾಲದಲ್ಲಿ ತನ್ನ ಆಡಳಿತ ವೈಖರಿಗಾಗಿ ರಾಜೀನಾಮೆ ನೀಡಬೇಕಾಗಿತ್ತು. ಆಗಲೂ ಅವರ ಉತ್ತರಾಧಿಕಾರಿಯಾಗಿ ಶಿಂಧೆ ನೇಮಕಗೊಂಡಿದ್ದರು.ಉಗ್ರರ ದಾಳಿ ನಡೆದ ತಾಜ್ ಹೋಟೇಲಿಗೆ, ತನ್ನ ಕಲಾವಿದ ಪುತ್ರ ರಿತೇಶ್ ದೇಶ್‌ಮುಖ್ ಹಾಗೂ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರನ್ನು ದಾಳಿಯ ಬಳಿಕ ಕರೆದೊಯ್ದಿದ್ದ ದೇಶ್‌ಮುಖ್ ಭಾರೀ ಟೀಕೆ ಎದುರಿಸಿದ್ದಾರೆ. ಈ ಹಿಂದೆಯೂ ತನ್ನ ಪುತ್ರನ ಸಿನಿಮಾದ ಪ್ರಚಾರಕ್ಕೆ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ವಿಲಾಸ್‌ರಾವ್ ದೇಶ್‌ಮುಖ್ ಒಳಗಾಗಿದದ್ದರು. |