ಗುಪ್ತಚರ ಇಲಾಖೆಗಳ ಹಾದಿತಪ್ಪಿಸಲು ಉಗ್ರರು ತಪ್ಪು ಮಾಹಿತಿಗಳು ಸೋರುವಂತೆ ಮಾಡಿದ್ದಾರೆ ಎಂದು ಗುರುವಾರ ಕರಾವಳಿ ಕಾವಲುಪಡೆ(ಸಿಜಿ) ಹೇಳಿದೆ.
ಗುಪ್ತಚರ ಇಲಾಖೆಗಳು ಮುಂಬೈದಾಳಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದವು ಎಂಬ ಹೇಳಿಕೆಗೆ ಎದಿರೇಟು ನೀಡಿರುವ ಕರಾವಳಿ ಕಾವಲುಪಡೆಯು, ಗುಪ್ತಚರಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನಿ ಭಯೋತ್ಪಾದಕರು ತಮ್ಮ ಆಗಮನದ ವೇಳೆ ಮತ್ತು ಸ್ಥಳದ ಕುರಿತು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ಹರಿಬಿಟ್ಟಿದ್ದಾರೆ ಎಂದು ಹೇಳಿದೆ.
"ಇದರಿಂದಾಗಿ ಗುಪ್ತಚರದಳಗಳು ನೌಕಾದಳ ಮತ್ತು ಕರಾವಳಿ ಕಾವಲು ಪಡೆಗೆ ತಪ್ಪು ಮಾಹಿತಿ ನೀಡುವಂತಾಗಿದೆ. ಗುಪ್ತಚರದಳಗಳು ದಯನೀಯವಾಗಿ ವಿಫಲವಾಗಿದ್ದು ಇದೀಗ ಮುಂಬೈ ದಾಳಿಯ ಕುರಿತು ಸಶಸ್ತ್ರ ಪಡೆಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ" ಅವರು ದೂರಿದ್ದಾರೆ.
ಗುಜರಾತ್ ಕರಾವಳಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ತಮ್ಮ ಯುದ್ಧ ನೌಕೆಗಳ ಹಾದಿ ತಪ್ಪಿಸಿ ಸರ್‌ಕ್ರೀಕ್ ಪ್ರದೇಶದ ಗಮನ ಹರಿಸಲಾಗಿತ್ತು. ಆದರೆ ಉಗ್ರರು ದಕ್ಷಿಣ ಗುಜರಾತಿನ ಮೂಲಕ ಪ್ರವೇಶಿಸಿದ್ದಾರೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ. ಕರಾವಳಿ ಕಾವಲು ಪಡೆ ನೌಕಾಪಡೆಗಳು ತಪ್ಪು ದಿಕ್ಕಿಗೆ ತೆರಳುವಂತೆ ಮಾಡಲು ಗುಪ್ತಚರ ದಳಗಳಿಗೆ ಸಮಯ ಮತ್ತು ವೇಳೆಯ ಬಗ್ಗೆ ತಪ್ಪು ಮಾಹಿತಿ ತಲುಪುವಂತೆ ನೋಡಿಕೊಂಡಿರುವ ಉಗ್ರರು ಭಾರತೀಯ ಪ್ರಾಂತ್ಯದ ಆಳ ಸಮುದ್ರದಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. 1993ರಲ್ಲೂ ಅವರು ಇದನ್ನೇ ಮಾಡಿದ್ದರು ಎಂದು ಮೂಲಗಳು ಹೇಳಿವೆ.
"ಸರ್‌ಕ್ರೀಕ್ ಪ್ರದೇಶದಲ್ಲಿ ಉಗ್ರರ ಹಡಗು ಚಲಿಸುತ್ತಿದೆ ಎಂಬ ಸೂಚನೆ ಗುಪ್ತಚರ ಏಜೆನ್ಸಿಗಳು ನೀಡಿದ್ದು, ನಾವು ಅಲ್ಲಿನ ಕಾವಲು ಹೆಚ್ಚಿಸಿದ್ದೆವು" ಎಂದು ಕಡಲಕಾವಲು ಏಜೆನ್ಸಿಗಳು ಗುಪ್ತಚರ ದಳಗಳು ನೀಡಿರುವ ಮಾಹಿತಿ ಕುರಿತು ಹೇಳಿವೆ.
|