ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್‌ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಕೈವಾಡದ ಬಗ್ಗೆ ಭಾರತದ ಬಳಿ ಸಾಕ್ಷ್ಯಾಧಾರ ಇರುವುದಾಗಿ ಮಾಧ್ಯಮವೊಂದರ ವರದಿ ಬಹಿರಂಗಪಡಿಸಿದೆ.

ಮುಂಬೈ ಮೇಲಿನ ದಾಳಿಗಾಗಿ ಯಾವ ಸ್ಥಳದಲ್ಲಿ ಮತ್ತು ಯಾರಿಗೆ ತರಬೇತಿ ನೀಡಲಾಗಿದೆ ಎಂಬ ಕುರಿತು ಭಾರತ ಸರಕಾರದ ಬಳಿ ಪುರಾವೆ ಇರುವುದಾಗಿ ಮೂಲಗಳು ತಿಳಿಸಿದೆ.

ಆ ನಿಟ್ಟಿನಲ್ಲಿ ಮುಂಬೈ ದಾಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪುರಾವೆಯನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಳ್ಳುವ ಬಗ್ಗೆ ಅಮೆರಿಕ ನಂಬಿರುವುದಾಗಿ ವರದಿ ಹೇಳಿದೆ.

ಮುಂಬೈಯ ದಾಳಿಯ ಹಿಂದೆ ಲಷ್ಕರ್ ಎ ತೊಯ್ಬಾದ ಕೈವಾಡ ಇರುವ ಬಗ್ಗೆ ಪುರಾವೆ ಒದಗಿಸದಲ್ಲಿ ಲಷ್ಕರ್ ವರಿಷ್ಠ ಹಾಫೀಜ್ ಸಯೀದ್‌ನನ್ನು ಬಂಧಿಸಬೇಕು ಎಂದು ಅಮೆರಿಕ ಪಾಕ್‌ಗೆ ಎಚ್ಚರಿಸಿತ್ತು.

ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಇರುವ ಬಗ್ಗೆ ಈಗ ದೊರೆತಿರುವ ಪುರಾವೆ ಸಾಕು ಎಂಬುದಾಗಿ ಅಮೆರಿಕದ ಅಡ್ಮಿರಲ್ ಮೈಕ್ ಮುಲ್ಲೆನ್ ಅವರು ಬುಧವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಪ್ತಚರ ದಳಗಳಿಗೆ ಉಗ್ರರು ಚಳ್ಳೆಹಣ್ಣು ತಿನ್ನಿಸಿದ್ದಾರೆ: ಸಿಜಿ
ಸುದೃಢ, ಶುದ್ಧ, ಪ್ರಾಮಾಣಿಕ ಪಕ್ಷಕಟ್ಟಲು ಅಮೀರ್ ಕರೆ
ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ
ಪಾಕ್ ನಿವೃತ್ತ ಸೇನಾಧಿಕಾರಿಗಳಿಂತ ತರಬೇತಿ: ವರದಿ
ಮೋದಿ, ತೊಗಾಡಿಯಾ ಭಾಷಣ ತೋರಿಸಲಾಗಿತ್ತು: ಉಗ್ರ
ದೇಶ್‌ಮುಖ್ ರಾಜೀನಾಮೆ ಸ್ವೀಕಾರ