ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಛೇ, ನಾವು ದಾಳಿ ನಡೆಸಿಲ್ಲ: ಲಷ್ಕರ್ ಹಫೀಜ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛೇ, ನಾವು ದಾಳಿ ನಡೆಸಿಲ್ಲ: ಲಷ್ಕರ್ ಹಫೀಜ್
ಮುಂಬೈಯ ದಾಳಿಯ ಹಿಂದೆ ನಮ್ಮ ಕೈವಾಡ ಇಲ್ಲ ಎಂಬುದಾಗಿ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೊಯ್ಬಾದ ವರಿಷ್ಠ ಹಫೀಜ್ ಮೊಹಮ್ಮದ್ ಸಯೀದ್ ಔಟ್ ಲುಕ್‌ಗೆ ನೀಡಿದ ವಿಶೇಷ ಸಂದರ್ಶನ ಹೇಳಿಕೆಯನ್ನು ಟೈಮ್ಸ್ ನೌ ವರದಿಯಲ್ಲಿ ತಿಳಿಸಿದೆ.

ನಾವು ಮುಂಬೈ ದಾಳಿಯನ್ನು ನಡೆಸಿಲ್ಲ, ಅಲ್ಲದೇ ನಾಗರಿಕರನ್ನು ಅಮಾಯಕವಾಗಿ ಕೊಲ್ಲುವುದನ್ನು ಲಷ್ಕರ್ ಬೆಂಬಲಿಸುವುದಿಲ್ಲ ಎಂಬುದಾಗಿ ಹೇಳಿರುವ ಸಯೀದ್, ಭಾರತ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿರುವುದು ಇದೇ ಮೊದಲೇನಲ್ಲ. ಪ್ರತಿ ಬಾರಿಯೂ ಅದು ಏನೇ ದಾಳಿ ನಡೆದರೂ ಪಾಕ್‌ನತ್ತ ಬೆರಳು ತೋರಿಸುವುದು ಅಭ್ಯಾಸವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.

ಮುಂಬೈಯ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಲಷ್ಕರ್ ಸ್ಥಾಪಕ ಸಯೀದ್ ಬುಡಬುಡಿಕೆ ಹೇಳಿಕೆ ನೀಡಿದ್ದು, ಈ ದಾಳಿಯ ಹಿಂದೆ ಲಷ್ಕರ್ ಕೈವಾಡ ಇಲ್ಲ ಎಂದು ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಆ ಮೂಲಕ ಭಾರತ ತನ್ನ ವೈಫಲ್ಯವನ್ನು ಮರೆಮಾಚಲು ಪಾಕಿಸ್ತಾನದತ್ತ ಬೊಟ್ಟು ಮಾಡಿ ತೋರಿಸುತ್ತಿರುವುದಾಗಿ ಸಯೀದ್ ಆರೋಪಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
ಗುಪ್ತಚರ ದಳಗಳಿಗೆ ಉಗ್ರರು ಚಳ್ಳೆಹಣ್ಣು ತಿನ್ನಿಸಿದ್ದಾರೆ: ಸಿಜಿ
ಸುದೃಢ, ಶುದ್ಧ, ಪ್ರಾಮಾಣಿಕ ಪಕ್ಷಕಟ್ಟಲು ಅಮೀರ್ ಕರೆ
ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ
ಪಾಕ್ ನಿವೃತ್ತ ಸೇನಾಧಿಕಾರಿಗಳಿಂತ ತರಬೇತಿ: ವರದಿ
ಮೋದಿ, ತೊಗಾಡಿಯಾ ಭಾಷಣ ತೋರಿಸಲಾಗಿತ್ತು: ಉಗ್ರ