ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತಕ್ಕೆ ಯುದ್ಧದ ಇರಾದೆಯಿಲ್ಲ: ಜರ್ಮನಿಗೆ ಎಂಕೆಎನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಯುದ್ಧದ ಇರಾದೆಯಿಲ್ಲ: ಜರ್ಮನಿಗೆ ಎಂಕೆಎನ್
ಮುಂಬೈಯಲ್ಲಿ ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸುವ ಇರಾದೆ ಭಾರತಕ್ಕಿಲ್ಲ ಎಂದು ಭಾರತದ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಹಿರಿಯ ಜರ್ಮನಿ ಅಧಿಕಾರಿಯೊಬ್ಬರಿಗೆ ಹೇಳಿದ್ದಾರೆನ್ನಲಾಗಿದೆ.

ಭಾರತವು ಯುದ್ಧ ಘೋಷಿಸಲೂ ಇಲ್ಲ, ಅಥವಾ ಯುದ್ಧ ಘೋಷಿಸುವ ಇರಾದೆಯನ್ನೂ ಹೊಂದಿಲ್ಲ ಎಂದು ನಾರಾಯಣನ್ ತನಗೆ ಹೇಳಿರುವುದಾಗಿ ಜರ್ಮನ್ ಚಾನ್ಸಲರ್ ಅವರ ವಿದೇಶಾಂಗ ನೀತಿ ಮತ್ತು ಭದ್ರತಾ ಸಲಹಾಗಾರ ಕ್ರಿಸ್ಟೋಪ್ ಹ್ಯೂಸ್‌ಜೆನ್ ಅವರು ಪಾಕಿಸ್ತಾನದ ಪ್ರಧಾನಿ ಕಚೇರಿಗೆ ತಿಳಿಸಿದ್ದಾರೆನ್ನಲಾಗಿದೆ.

ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯ ಹಿತದೃಷ್ಟಿಯಲ್ಲಿ ಸಹನೆ ಕಾಪಾಡಿಕೊಳ್ಳುವಂತೆ ಮತ್ತು ಪಾಕಿಸ್ತಾನದ ವಿರುದ್ಧ ಕ್ರೋಧವನ್ನು ತಗ್ಗಿಸಿಕೊಳ್ಳಲು ಭಾರತವನ್ನು ಒತ್ತಾಯಿಸಲು ಭಾರತದ ರಾಷ್ಟ್ರೀಯ ಭದ್ರತಾ ಸಲಹಾಗಾರರನ್ನು ಸಂಪರ್ಕಿಸಲು ಜರ್ಮನ್ ಚಾನ್ಸ್‌ಲರ್ ಏಂಜೆಲಾ ಮಾರ್ಕೆಲ್ ಅವರು ಕ್ರಿಸ್ಟೋಪ್ ಅವರಿಗೆ ನಿರ್ದೇಶನ ನೀಡಿದ್ದರು ಎಂದು ಪಾಕ್ ಪ್ರಧಾನಿ ಕಚೇರಿ ಹೇಳಿದೆ.
ಪಾಕಿಸ್ತಾನದ ವಿರುದ್ಧ ಶಸ್ತ್ರಾಸ್ತ್ರ ಬಿಕ್ಕಟ್ಟಿನ ಸಾಧ್ಯತೆಯನ್ನು ಸಾಧ್ಯತೆಯನ್ನು ನಾರಾಯಣನ್ ತಳ್ಳಿ ಹಾಕಿದ್ದಾರೆ ಎಂದು ಕ್ರಿಸ್ಟೋಪ್ ಹೇಳಿದ್ದಾರೆನ್ನಲಾಗಿದೆ.

ಮುಂಬೈ ಘಟನೆಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗಾಗಿ ಪಾಕಿಸ್ತಾನದಿಂದ ಸ್ಪಷ್ಟ ಸಹಕಾರವನ್ನು ಮಾತ್ರ ಭಾರತ ಬಯಸುತ್ತಿದೆ ಎಂದು ನಾರಾಯಣನ್ ಕ್ರಿಸ್ಟೋಪ್ ಅವರೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆನ್ನಲಾಗಿದೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಿಕೊಳ್ಳುವಂತೆ ಒತ್ತಾಯಿಸಲು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಲು ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಬಯಸಿದ್ದಾರೆ ಎಂದು ಕ್ರಿಸ್ಟೋಪ್ ಹೇಳಿದ್ದಾರೆನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಛೇ, ನಾವು ದಾಳಿ ನಡೆಸಿಲ್ಲ: ಲಷ್ಕರ್ ಹಫೀಜ್
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
ಗುಪ್ತಚರ ದಳಗಳಿಗೆ ಉಗ್ರರು ಚಳ್ಳೆಹಣ್ಣು ತಿನ್ನಿಸಿದ್ದಾರೆ: ಸಿಜಿ
ಸುದೃಢ, ಶುದ್ಧ, ಪ್ರಾಮಾಣಿಕ ಪಕ್ಷಕಟ್ಟಲು ಅಮೀರ್ ಕರೆ
ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ
ಪಾಕ್ ನಿವೃತ್ತ ಸೇನಾಧಿಕಾರಿಗಳಿಂತ ತರಬೇತಿ: ವರದಿ