ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ: ಗುಂಡಿನ ಸದ್ದು ಸೃಷ್ಟಿಸಿದ ಕೋಲಾಹಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ: ಗುಂಡಿನ ಸದ್ದು ಸೃಷ್ಟಿಸಿದ ಕೋಲಾಹಲ
ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಕೇಳಿಬಂದ ಗುಂಡಿನ ಸದ್ದು ಆತಂಕದ ಸ್ಥಿತಿ ನಿರ್ಮಾಣ ಮಾಡಿರುವ ಕುರಿತು ವರದಿಯಾಗಿದೆ.

ಸಿಐಎಸ್ಎಫ್‌ನ ನಿಯಂತ್ರಣ ಕೊಠಡಿಗೆ ಮಧ್ಯರಾತ್ರಿ ಸುಮಾರು 1.10ರ ವೇಳೆಗೆ ಕರೆಯೊಂದನ್ನು ಮಾಡಿರುವ ಪ್ರಯಾಣಿಕರು, ಅಂತಾರಾಷ್ಟ್ರೀಯ ನಿರ್ಗಮನ ಲಾಂಜ್ ಬಳಿಯಿಂದ ದ್ವಾರದ ಬಳಿ ಗುಂಡಿನ ಸದ್ದು ಕೇಳಿಸಿತೆಂದು ತಿಳಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.

"ಎರಡು ಗುಂಡಿನ ಸದ್ದು ಕೇಳಿಸಿತೆಂದು ಪ್ರಯಾಣಿಕರು ಹೇಳಿದರು. ಆದರೆ ಪ್ರತ್ಯಕ್ಷಸಾಕ್ಷಿಗಳಿಲ್ಲ. ಇದು ಗುಂಡು ಹಾರಾಟವೆಂದು ಪ್ರಮಾಣಿಕರಿಸಲು ಯಾವುದೇ ಸಕ್ಷ್ಯಾಧಾರಗಳು ಇಲ್ಲ ಮತ್ತು ನಾವಿದನ್ನು ಗುಂಡು ಹಾರಾಟವೆಂದು ದೃಢಪಡಿಸುವಂತಿಲ್ಲ" ಎಂದು ಸಿಐಎಸ್ಎಫ್ ಡಿಐಜಿ ಮತ್ತು ದೆಹಲಿ ಭದ್ರತಾ ಉಸ್ತುವಾರಿ ಹೊಂದಿರುವ ಉದಯನ್ ಬ್ಯಾನರ್ಜಿ ಪಿಟಿಐಗೆ ತಿಳಿಸಿದ್ದಾರೆ.

ಇದಾದ ಬಳಿಕ ವಿಮಾನನಿಲ್ದಾಣದಲ್ಲಿ ತಪಾಸಣೆಯನ್ನು ಹೆಚ್ಚಿಸಲಾಯಿತು ಎಂದು ನುಡಿದ ಅವರು ವಿಮಾನನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಸಹಜವಾಗಿದೆ ಮತ್ತು ಆಗಮನ ಮತ್ತು ನಿರ್ಗಮನ ಕಾರ್ಯ ಸುಲಲಿತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದು ಗುಂಡುಹಾರಾಟವೇ ಎಂಬುದು ಇನ್ನೂ ಪತ್ತೆಯಾಗಿಲ್ಲ ಮತ್ತು ತನಿಖೆ ಮುಂದುವರಿದಿದೆ.

ಬಿಳಿಕಾರು ಯಾವುದು?
ಈ ಮಧ್ಯೆ ಬಿಳಿ ಬಣ್ಣದ ಹರ್ಯಾಣದ ನಂಬರ್ ಪ್ಲೇಟ್ ಹೊಂದಿದ್ದ ಕ್ವಾಲಿಸ್ ಕಾರೊಂದು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯನ್ನು ತಪ್ಪಿಸಿಹಾದು ಹೋಯಿತು ಎಂದೂ ಹೇಳಲಾಗಿದೆ.

ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿ 12ರಿಂದ ಒಂದು ಗಂಟೆಯ ವೇಳೆಗೆ ದಾಳಿ ನಡೆಯಲಿದೆ ಎಂಬ ಮಾಹಿತಿ ಇದ್ದು, ಇದೇ ವೇಳೆಯಲ್ಲಿ ಗುಂಡು ಹಾರಾಟದ ಸದ್ದು ಕೇಳಿ ಬಂದಿದೆ ಎಂದಿರುವುದು ಹಲವಾರು ಸಂಶಯಕ್ಕೆ ಕಾರಣವಾಗಿದೆ.

ಇದೇ ವೇಳೆಗೆ ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಬಲಭಾಗದಲ್ಲಿದ್ದ ಜನತೆಯನ್ನು ಎಡಭಾಗಕ್ಕೆ ಸ್ಥಳಾಂತರಿಸಿದರು ಎಂದು ವರದಿಗಾರರು ಹೇಳಿದ್ದಾರೆ.

ಆದರೆ ಗುಂಡು ಹಾರಾಟದ ಯಾವುದೇ ಕುರುಹುಗಳು ಲಭಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಯುದ್ಧದ ಇರಾದೆಯಿಲ್ಲ: ಜರ್ಮನಿಗೆ ಎಂಕೆಎನ್
ಛೇ, ನಾವು ದಾಳಿ ನಡೆಸಿಲ್ಲ: ಲಷ್ಕರ್ ಹಫೀಜ್
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
ಗುಪ್ತಚರ ದಳಗಳಿಗೆ ಉಗ್ರರು ಚಳ್ಳೆಹಣ್ಣು ತಿನ್ನಿಸಿದ್ದಾರೆ: ಸಿಜಿ
ಸುದೃಢ, ಶುದ್ಧ, ಪ್ರಾಮಾಣಿಕ ಪಕ್ಷಕಟ್ಟಲು ಅಮೀರ್ ಕರೆ
ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ