ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕ ಛಗನ್ ಬುಜ್‌ಬಲ್ ಆಯ್ಕೆಯಾಗಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆಯೊಂದಿಗೆ ಅವರು ಗೃಹಖಾತೆಯನ್ನೂ ಹೊಂದಲಿದ್ದಾರೆ.
ಮುಂಬೈ ದಾಳಿಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಆರ್.ಆರ್.ಪಾಟೀಲ್ ಐದು ದಿನಗಳ ಹಿಂದೆ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು.
ಬುಜ್‌ಬಲ್ ಅವರು ಪ್ರಸ್ತುತ ಲೋಕೋಪಯೋಗಿ ಸಚಿವರಾಗಿದ್ದಾರೆ. ಇವರೊಬ್ಬ ಕಠಿಣ ನಿಲುವಿನ ಸಚಿವ ಎಂದೇ ಖ್ಯಾತಿ ಹೊಂದಿದ್ದಾರೆ.
ಮುಂಬೈ ದಾಳಿಯ ಕುರಿತು "ದೊಡ್ಡ ದೇಶದಲ್ಲಿ ಇಂತಹ ಸಣ್ಣ ಘಟನೆಗಳು ನಡೆಯುತ್ತವೆ" ಎಂಬ ಅನುಚಿತ ಹೇಳಿಕೆ ನೀಡಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಎಲ್ಲೆಡೆಯಿಂದ ತೀವ್ರ ಟೀಕೆಗೆ ಒಳಗಾಗಿದ್ದರು. |