ಕಳೆದ ವಾರದ ಉಗ್ರರ ದಾಳಿಗೆ ನಲುಗಿರುವ ಮುಂಬೈಗೆ, ಗೃಹಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪಿ.ಚಿದಂಬರಂ ಪ್ರಥಮವಾಗಿ ಶುಕ್ರವಾರ ಆಗಮಿಸಿದ್ದಾರೆ. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗುಪ್ತಚರದಳದ ವೈಫಲ್ಯ ಮತ್ತು ಭದ್ರತಾದಳದ ಕೊರತೆಯನ್ನು ಒಪ್ಪಿಕೊಂಡರು.
ಆದರೆ ರಾಷ್ಟ್ರದ ಭದ್ರತೆಯನ್ನು ಹೆಚ್ಚಿಸಲು ಸರಕಾರವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಮತ್ತು ಕೊರತೆಯನ್ನು ನೀಗಿಸಲು ಭದ್ರತಾ ದಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಾಗಿ ನುಡಿದರು.
ಈ ಹಿಂದೆ ಭಯೋತ್ಪಾದನಾ ದಾಳಿ ನಡೆಸಿರುವ ಸಂಘಟನೆಗಳೇ ಈ ದಾಳಿ ನಡೆಸಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಗೃಹಸಚಿವರು ನುಡಿದರು.
ಮಹಾರಾಷ್ಟ್ರದ ಜನತೆ ಸರಕಾರದೊಂದಿಗೆ ಸಹಕರಿಸಬೇಕು ಮತ್ತು ಸರಕಾರವು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ನಿರ್ಧರಿಸಿದೆ ಎಂದು ನುಡಿದರು.
ದಾಳಿಗೀಡಾಗಿರುವ ಜೆಜೆ ಆಸ್ಪತ್ರೆಗೆ ಮುಂಜಾನೆ ಭೇಟಿ ನೀಡಿದರು. ಸಿಎಸ್‌ಟಿ, ತಾಜ್, ಟ್ರೈಡೆಂಟ್ ಮತ್ತು ಒಬೆರಾಯ್ ಹೋಟೇಲ್‌ಗಳಿಗೆ ಅವರು ಅಪರಾಹ್ನ ಭೇಟಿ ನೀಡಲಿದ್ದಾರೆ. |