ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) ಮತ್ತು ತಮಿಳ್ನಾಡಿನ ಎಐಎಡಿಎಂಕೆ ಪಕ್ಷವು ಹೊಂದಾಣಿಕೆ ಮಾಡಿಕೊಳ್ಳಲಿದೆ.
ಇಲ್ಲಿ ನಡೆದ ಎರಡು ದಿನಗಳ ಕಾಲದ ರಾಜ್ಯ ಸಮಿತಿಯ ಸುದೀರ್ಘ ಸಭೆಯ ಬಳಿಕ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಅವರನ್ನು ಭೇಟಿಯಾದರು.
ಪೊಯೆಸ್ ಗಾರ್ಡನ್‌ನಲ್ಲಿರುವ ಜಯಲಲಿತಾ ನಿವಾಸದಲ್ಲಿ ಉಭಯ ನಾಯಕರು ಹೊಂದಾಣಿಕೆ ವಿಚಾರವನ್ನು ಘೋಷಿಸಿದರು. |