ಮುಂಬೈ: ಹೈಕಮಾಂಡಿನ ಈ ಕ್ರಮದಿಂದ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ನಾರಾಯಣ ರಾಣೆ ತೀವ್ರ ಅಸಮಾಧಾನಗೊಂಡಿದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿರುವ ಕಾರಣ ಕ್ರೋಧಗೊಂಡಿರುವ ರಾಣೆ, ಕಾಂಗ್ರೆಸ್ ಪಕ್ಷದಿಂದ ತನಗೆ ಯಾವ ಹುದ್ದೆಯೂ ಬೇಡ ಎಂದು ಹೇಳಿದ್ದಾರೆ.
ಅಶೋಕ್ ಚೌವ್ಹಾಣ್‌ರ ಅಸಮರ್ಥತೆಯನ್ನು ತನ್ನ ವಿರೋಧಿ ಎಂದು ಪರಿಗಣಿಸಿ ತಾನು ಸ್ಫರ್ಧೆಯಿಂದ ಹಿಮ್ಮೆಟ್ಟಿರುವುದಾಗಿ ರಾಣೆ ಹೇಳಿದ್ದಾರೆ.
ಅಶೋಕ್ ಚೌವ್ಹಾಣ್ ನನ್ನ ಸ್ಫರ್ಧಿಯಾಗಲು ಸಾಧ್ಯವಿಲ್ಲ. ಆತ ತನ್ನ ಖಾತೆಯನ್ನು ನಿಭಾಯಿಸಲು ಅಸಮರ್ಥಗಾರಿರುವ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನ್ಯಾಯ ಒದಗಿಸಲಾರರು ಎಂಬ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ರಾಣೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ವಕ್ತಾರರು ನಿರಾಕರಿಸಿದ್ದಾರೆ.
|