ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಖಚಿತ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಖಚಿತ: ಅಮೆರಿಕ
ಮುಂಬೈಯಲ್ಲಿ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಖಚಿತವಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಲಷ್ಕರ್ ಎ ತೊಯ್ಬಾ ಸಂಘಟನೆಯ ಪಾತ್ರ ಇರುವ ಅಂಶವನ್ನು ಭಾರತ ಮತ್ತು ಅಮೆರಿಕದ ತನಿಖಾ ಅಧಿಕಾರಿಗಳು ನಡೆಸಿದ ಜಂಟಿ ತನಿಖೆಯಿಂದ ದೃಢಪಟ್ಟಿದ್ದು, ಉಗ್ರರು ಮುಂಬೈಗೆ ಬರಲು ಬಳಸಿದ್ದ ಕುಬೇರ್ ದೋಣಿಯಲ್ಲಿ ಸಿಕ್ಕಿದ್ದ ಸೆಟಲೈಟ್ ಮೊಬೈಲ್‌ನಿಂದ ಈ ಅಂಶ ದೃಢಪಟ್ಟಿದೆ ಎಂದು ತಿಳಿಸಿದೆ.

ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವ ಸಾಕ್ಷ್ಯದ ಕುರಿತಾಗಿ ಈಗಾಗಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಹಾಗೂ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರಿಗೆ ವಿವರಿಸಲಾಗಿದೆ ಎಂದು ಅಮೆರಿಕದ ಆಡ್ಮಿರಲ್ ಮೈಕೇಲ್ ಮುಲ್ಲೆನ್ ಅವರು ಹೇಳಿದ್ದಾರೆ.

ಅಲ್ಲದೇ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪ್ರಜೆಗಳು ಹಾಗೂ ಲಷ್ಕರ್ ಉಗ್ರಗಾಮಿ ಸಂಘಟನೆ ಭಾಗಿಯಾಗಿರುವ ಪುರಾವೆಯನ್ನು ಈಗಾಗಲೇ ಪಾಕಿಸ್ತಾನಕ್ಕೆ ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ತಿಳಿಸಿದರು.

ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕ್ ಮೂಲದ ಭಯೋತ್ಪಾದಕರು ಶಾಮೀಲಾಗಿರುವ ಕುರಿತು ಪಾಕ್ ಕೂಲಂಕಷವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ,ಕ್ರಮ ಕೈಗೊಳ್ಳುವಂತೆ ಮುಲ್ಲೆನ್ ತಾಕೀತು ಮಾಡಿರುವುದಾಗಿ ಅಮೆರಿಕ ರಾಯಭಾರಿ ಕಚೇರಿಯ ಪ್ರಕಟಣೆ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿ: ಇಬ್ಬರು ಶಂಕಿತರ ಬಂಧನ
ಬಕ್ರೀದ್ ಹಬ್ಬದಂದು ಗೋ ಹತ್ಯೆ ಬೇಡ: ದಾರ್ ಉಲ್
ಕಾಂಗ್ರೆಸ್‌ನಿಂದ ನಂಗ್ಯಾವ ಸ್ಥಾನ ಬೇಡ: ರಾಣೆ
ಮಹಾ: ಅಶೋಕ್ ಮುಖ್ಯಮಂತ್ರಿ, ರಾಣೆ ಬಂಡಾಯ
ಮುಂಬೈ ದಾಳಿಗೂ ಲಷ್ಕರೆಗೂ ಸಂಬಂಧವಿಲ್ಲ
ಸಿಪಿಐ(ಎಂ)-ಎಐಎಡಿಎಂಕೆ ಬಾಯ್ ಬಾಯ್