ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಮಾಂಡೋ ಕಾರ‌್ಯಾಚರಣೆಗೆ 'ಲೈವ್ ಕವರೇಜ್' ಅಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಮಾಂಡೋ ಕಾರ‌್ಯಾಚರಣೆಗೆ 'ಲೈವ್ ಕವರೇಜ್' ಅಡ್ಡಿ
ಟಿವಿ ಚಾನೆಲ್‌ಗಳ 'ನೇರ ಪ್ರಸಾರ' ಧಾವಂತವು ಮುಂಬಯಿಯಲ್ಲಿ ಉಗ್ರರ ವಿರುದ್ಧ 60 ಗಂಟೆಗಳ ಕಾರ್ಯಾಚರಣೆಗೆ ಅಡ್ಡಿಯಾಗಿರುವುದರಿಂದ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ), ತನ್ನ ಕಮಾಂಡೋಗಳು ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ಥಳಗಳಲ್ಲಿ ಮಾಧ್ಯಮಗಳಿಗೆ ಕವರೇಜ್ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಇತ್ತೀಚೆಗೆ ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ವಿಷಯವನ್ನು ಈಗಾಗಲೇ ಪ್ರಸ್ತಾಪಿಸಿರುವ ಎನ್ಎಸ್‌ಜಿ ಅಧಿಕಾರಿಗಳು, ಈ ಸಂದರ್ಭ ಲಿಖಿತ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ವರದಿ ಮಾಡಿವೆ.

ವಿಶೇಷವಾಗಿ ನಾರಿಮನ್ ಭವನದಲ್ಲಿ ನಡೆಸಿದ ಕಾರ್ಯಾಚರಣೆ ಸಂದರ್ಭ 'ಲೈವ್ ಕವರೇಜ್' ಧಾವಂತವು ಪಡೆಗಳಿಗೆ ತೀವ್ರ ತೊಂದರೆಯಾಗಿದೆ. ನಾರಿಮನ್ ಭವನದಲ್ಲಿ ಹವಾಲ್ದಾರ್ ಗಜೇಂದ್ರ ಸಿಂಗ್ ಅವರು ಉಗ್ರರ ಗುಂಡಿಗೆ ಬಲಿಯಾಗಿರುವ ರೀತಿ ಬಗ್ಗೆ ಅನೇಕ ಪ್ರಶ್ನೆಗಳು ಏಳಲಾರಂಭಿಸಿವೆ. 'ನಾರಿಮನ್ ಭವನದ ಚಾವಣಿಯಿಂದ ನಮ್ಮ ಕಮಾಂಡೋಗಳು ಹೆಲಿಕಾಪ್ಟರ್‌ನಲ್ಲಿ ಇಳಿಯುತ್ತಿರುವುದನ್ನು ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ನಮ್ಮ ಪಡೆಗಳು ಅಲ್ಲಿ ಇಳಿದು ಕಾರ್ಯಾಚರಣೆ ಆರಂಭಿಸುವ ವೇಳೆಗೆ, ಉಗ್ರರು ಅದಾಗಲೇ ಅವರಿಗಾಗಿ ಕಾಯುತ್ತಿದ್ದರು ಮತ್ತು ಗುಂಡಿನ ದಾಳಿ ಮಾಡಿದ್ದರು' ಎಂದು ಎನ್ಎಸ್‌ಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಬೆರಾಯ್‌ನಲ್ಲಿ ಟಿವಿ ಚಾನೆಲ್‌ಗಳನ್ನು ಒಂದು ಕಿ.ಮೀ. ಪರಿಧಿಗಿಂತ ದೂರವಿರಿಸಿದ್ದ ಕಾರಣ ಕಾರ್ಯಾಚರಣೆಯು 'ಸುಲಲಿತ'ವಾಗಿತ್ತು ಎಂದು ಎನ್‌ಎಸ್‌ಜಿ ಅಧಿಕಾರಿ ಹೇಳಿದ್ದಾರೆ. ಅಲ್ಲಿ ಕಾರ್ಯಾಚರಣೆಗೆ ಕನಿಷ್ಠ ಸಮಯ ಬೇಕಾಯಿತು. ಇತರ ಎರಡು ಕಡೆಗಳಿಗೆ ಹೋಲಿಸಿದರೆ ಇಲ್ಲಿ ಕೇವಲ 30 ಗಂಟೆಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿತ್ತು ಎಂದು ವೀರಾವೇಶದಿಂದ ಹೋರಾಡಿದ ಕಮಾಂಡೋ ಒಬ್ಬರು ಹೇಳಿದ್ದಾರೆ.

ಕಾರ್ಯಾಚರಣೆಯ ಎರಡು ಮತ್ತು ಮೂರನೇ ದಿನ ಒಳಗಿದ್ದ ಉಗ್ರಗಾಮಿಗಳಿಗೆ ಬಹುಶಃ ಟಿವಿ ನೇರ ಪ್ರಸಾರ ವೀಕ್ಷಿಸುವ ಅವಕಾಶ ತಪ್ಪಿಹೋಗಿದ್ದಿರಬಹುದು. ಆದರೆ ಅವರ ಬಳಿ ಫೋನ್‌ಗಳಿದ್ದವು ಮತ್ತು ಲೈವ್ ಕವರೇಜ್ ವೀಕ್ಷಿಸುತ್ತಿದ್ದವರಿಂದ ಫೋನ್ ಮೂಲಕವೇ ಅವರಿಗೆ ಸಂದೇಶ ರವಾನೆಯಾಗುತ್ತಿದ್ದಿರಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೆ ರಾಜಕಾರಣಿಗಳ ಮರ್ಜಿ: ವಿಮಾನ ವಿಳಂಬ
ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಖಚಿತ: ಅಮೆರಿಕ
ಮುಂಬೈ ದಾಳಿ: ಇಬ್ಬರು ಶಂಕಿತರ ಬಂಧನ
ಬಕ್ರೀದ್ ಹಬ್ಬದಂದು ಗೋ ಹತ್ಯೆ ಬೇಡ: ದಾರ್ ಉಲ್
ಕಾಂಗ್ರೆಸ್‌ನಿಂದ ನಂಗ್ಯಾವ ಸ್ಥಾನ ಬೇಡ: ರಾಣೆ
ಮಹಾ: ಅಶೋಕ್ ಮುಖ್ಯಮಂತ್ರಿ, ರಾಣೆ ಬಂಡಾಯ