ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ಪರ ವಕಾಲತ್ತು ವಹಿಸುವುದಿಲ್ಲ: ಮುಂಬೈ ವಕೀಲರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಪರ ವಕಾಲತ್ತು ವಹಿಸುವುದಿಲ್ಲ: ಮುಂಬೈ ವಕೀಲರು
ಮುಂಬೈ ದಾಳಿಯ ಸಂದರ್ಭದಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀನ್ ಇಮಾಮ್ ಆಲಿಯಾಸ್ ಕಸಬ್ ಪರ ವಕಾಲತ್ತು ವಹಿಸುವುದಿಲ್ಲ ಎಂದು ಕ್ರಿಮಿನಲ್ ವಕೀಲರು ಘೋಷಿಸಿದ್ದಾರೆ.

ಬಾಂಬೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಾವಿರಕ್ಕೂ ಅಧಿಕ ಸದಸ್ಯರುಗಳ ವಕೀಲರ ಸಂಘದಲ್ಲಿ ಈ ಕುರಿತಂತೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.

ಸಂಘದ ಯಾವುದೇ ಸದಸ್ಯ ಉಗ್ರಗಾಮಿ ದಾಳಿಯ ಯಾವುದೇ ಆರೋಪಿಯ ಪರ ವಕಾಲತ್ತು ವಹಿಸುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಪ್ರಜ್ಞಾವಂತ ವಕೀಲನಾದವನು ಇಂಥ ಘೋರ ಆರೋಪಿಗಳನ್ನು ಸಮರ್ಥಿಸಿ ವಕಾಲತ್ತು ವಹಿಸುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಕ್ರಿಮಿನಲ್ ವಕೀಲ ಮಜೀದ್ ಮೆಮೊನ್ ತಿಳಿಸಿದ್ದಾರೆ.

7/11ರ ಮುಂಬೈ ಸರಣಿ ರೈಲು ಸ್ಫೋಟಗಳ ಪ್ರಕರಣದ ಹಾಗೂ ಇತ್ತೀಚಿನ ಇಂಡಿಯನ್ ಮುಜಾಹಿದೀನ್ ಆರೋಪಿಗಳ ಪರ ವಕಾಲತ್ತು ವಹಿಸಿರುವ ವಕೀಲ ಮುಬಿನ್ ಸೋಲ್ಕರ್ ಅವರು ಮೆಮೊನ್ ಅವರು ಕೂಡ ಮಜೀದ್ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ದಾರಿಗೆ ಬೆದರಿಕೆ ಕರೆ ಮಾಡಿಲ್ಲ: ಪ್ರಣಬ್
ಕಾಶ್ಮೀರ: ಎನ್‌ಸಿ-ಪಿಡಿಪಿ ಮಾರಾಮಾರಿಗೆ ಓರ್ವ ಬಲಿ
ಗೋವಾ ಮೇಲೆ ಅಲ್ ಕೈದಾ ಕರಿನೆರಳು
ಹಿಂದೂ-ಕ್ರಿಶ್ಚಿಯನ್ ವಿವಾಹ ಮಾನ್ಯ ಅಲ್ಲ: ಸು.ಕೋ.
'ಓಟು ಹಾಕದಿರುವ ಆಯ್ಕೆ'ಯಿಂದ ವಿಜೇತನಿಗೆ ಬಾಧೆ ಇಲ್ಲ
ಭಾರತ- ಚೀನಾ ಜಂಟಿ ಸಮರಾಭ್ಯಾಸ