ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೋನಿಯಾ ಗಾಂಧಿ ಹತ್ಯೆಗೆ ಮಸ್ಕತ್‌ನಿಂದ ಬೆದರಿಕೆ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋನಿಯಾ ಗಾಂಧಿ ಹತ್ಯೆಗೆ ಮಸ್ಕತ್‌ನಿಂದ ಬೆದರಿಕೆ ಕರೆ
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮುಂದಿನ ವಾರ ಕೇರಳಕ್ಕೆ ಆಗಮಿಸುವ ಸಂದರ್ಭದಲ್ಲಿ ಹತ್ಯೆಗೈಯುವುದಾಗಿ ಬೆದರಿಕೆಯ ಕರೆಯೊಂದು ಬಂದಿರುವುದಾಗಿ ಕೇರಳದ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 16ರಂದು ಕೊಚ್ಚಿಯಲ್ಲಿ ನಡೆಯಲಿರುವ ರಾಜ್ಯ ಕಾಂಗ್ರೆಸ್ ಸಭೆಗೆ ಆಗಮಿಸುತ್ತಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಹತ್ಯೆಗೈಯುವುದಾಗಿ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಅನಾಮಧೇಯ ಬೆದರಿಕೆ ಕರೆಯನ್ನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ.

ಸೋನಿಯಾ ಹತ್ಯೆ ಬೆದರಿಕೆ ಕರೆ ವಿಷಯವನ್ನು ಕೇರಳ ಪೊಲೀಸರು ಕೂಡಲೇ ಸಿಬಿಐಗೆ ತಿಳಿಸಿರುವುದಾಗಿ ತಿಳಿಸಿದ್ದು, ಈ ಬೆದರಿಕೆ ಕರೆ ಮಸ್ಕತ್‌ನಿಂದ ಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ಸೋನಿಯಾ ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಡಿಸೆಂಬರ್ 14ರಿಂದ 16ರವರೆಗೆ ನಡೆಸಲು ಕೊಚ್ಚಿಯಲ್ಲಿ ಉದ್ದೇಶಿಸಿರುವ ಕಾಂಗ್ರೆಸ್ ಸಮ್ಮೇಳನವನ್ನು ಮುಂದೂಡಲು ನಿರ್ಧರಿಸಿರುವುದಾಗಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವರಿಷ್ಠರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್ ಪರ ವಕಾಲತ್ತು ವಹಿಸುವುದಿಲ್ಲ: ಮುಂಬೈ ವಕೀಲರು
ಜರ್ದಾರಿಗೆ ಬೆದರಿಕೆ ಕರೆ ಮಾಡಿಲ್ಲ: ಪ್ರಣಬ್
ಕಾಶ್ಮೀರ: ಎನ್‌ಸಿ-ಪಿಡಿಪಿ ಮಾರಾಮಾರಿಗೆ ಓರ್ವ ಬಲಿ
ಗೋವಾ ಮೇಲೆ ಅಲ್ ಕೈದಾ ಕರಿನೆರಳು
ಹಿಂದೂ-ಕ್ರಿಶ್ಚಿಯನ್ ವಿವಾಹ ಮಾನ್ಯ ಅಲ್ಲ: ಸು.ಕೋ.
'ಓಟು ಹಾಕದಿರುವ ಆಯ್ಕೆ'ಯಿಂದ ವಿಜೇತನಿಗೆ ಬಾಧೆ ಇಲ್ಲ