ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕ್ಯಾಂಪಸ್ಸುಗಳು ರಾಜಕೀಯ ರಣರಂಗವಾಗಬಾರದು: ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯಾಂಪಸ್ಸುಗಳು ರಾಜಕೀಯ ರಣರಂಗವಾಗಬಾರದು: ಸು.ಕೋ
ವಿಶ್ವವಿದ್ಯಾನಿಲಯಗಳ ಕ್ಯಾಂಪಸ್ಸುಗಳಲ್ಲಿನ ಚುನಾವಣೆಗಳು ಸಂಸತ್ ಚುನಾವಣೆಗಳ ರೂಪ ಪಡೆಯುತ್ತಿರುವ ಕುರಿತು ತೀವ್ರ ಅಸಮಾಧಾನ ಸೂಚಿಸಿರುವ ಸುಪ್ರೀಂ ಕೋರ್ಟ್, ಕ್ಯಾಂಪಸ್ಸುಗಳು ರಾಜಕೀಯ ರಣರಂಗವಾಗಲು ಬಿಡುವುದಿಲ್ಲ ಎಂದು ಹೇಳಿದೆ.

"ಶೈಕ್ಷಣಿಕ ಸಂಸ್ಥೆಗಳು ರಾಜಕೀಯ ರಣರಂಗವಾದಂತೆ ನಾವು ನೋಡಿಕೊಳ್ಳುತ್ತೇವೆ. ಇಂತಹ ಚುನಾವಣೆಗಳಲ್ಲಿ ಹಣಬಲ ಮತ್ತು ರಟ್ಟೆಬಲ ಮುಕ್ತವಾಗಿ ಹರಿಯದಂತೆ ನೋಡಿಕೊಳ್ಳುವುದು ನಮ್ಮ ಗುರಿ" ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಎಂ.ಕೆ.ಶರ್ಮಾ ಅವರುಗಳನ್ನೊಳಗೊಂಡಿರುವ ನ್ಯಾಯಪೀಠ ಹೇಳಿದೆ.

"ಇತ್ತೀಚಿನ ವರ್ಷಗಳಲ್ಲಿ ಕ್ಯಾಂಪಸ್ಸುಗಳ ಚುನಾವಣಾ ದೃಶ್ಯವೇ ಬದಲಾಗಿದೆ. ಈ ಚುನಾವಣೆಗಳಲ್ಲಿ ವಿನಿಯೋಗವಾಗುವ ಹಣದ ಮೊತ್ತವನ್ನು ನೋಡಿ. ಕಳೆದ ಹತ್ತುವರ್ಷಗಳಿಂದೀಚೆಗೆ ಸಂಸತ್ ಚುನಾವಣೆಯಲ್ಲೂ ವಿನಿಯೋಗವಾಗದಷ್ಟು ದೊಡ್ಡ ಮೊತ್ತದ ಹಣ ಇಂತಹ ಚುನಾವಣೆಗಳಲ್ಲಿ ವಿನಿಯೋಗವಾಗುತ್ತಿದೆ" ಎಂದು ಸರ್ವೋಚ್ಚ ನ್ಯಾಯಾಲಯ ಖೇದ ವ್ಯಕ್ತಪಡಿಸಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವು ಲಿಂಗ್ಡೋ ಸಮಿತಿಯ ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳಲಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಅಲ್ಲಿನ ವಿದ್ಯಾರ್ಥಿ ಸಂಘಟನೆಯ ಚುನಾವಣೆಗೆ ತಡೆ ನೀಡಿರುವ ಕುರಿತ ಪ್ರಕಣರಣದ ವಿಚಾರಣೆ ನಡೆಸುವ ವೇಳೆಗೆ ನ್ಯಾಯಾಲಯ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿ ನಡೆಸಿದ ಲಷ್ಕರೆಗೆ ಐಎಸ್ಐ ಸಹಾಯ
ದಾಳಿ ಲಿಂಕ್: ಪಾಕಿಸ್ತಾನದಲ್ಲಿ ಅಜ್ಮಲ್ ಕುಟುಂಬ
ಸೋನಿಯಾ ಗಾಂಧಿ ಹತ್ಯೆಗೆ ಮಸ್ಕತ್‌ನಿಂದ ಬೆದರಿಕೆ ಕರೆ
ಕಸಬ್ ಪರ ವಕಾಲತ್ತು ವಹಿಸುವುದಿಲ್ಲ: ಮುಂಬೈ ವಕೀಲರು
ಜರ್ದಾರಿಗೆ ಬೆದರಿಕೆ ಕರೆ ಮಾಡಿಲ್ಲ: ಪ್ರಣಬ್
ಕಾಶ್ಮೀರ: ಎನ್‌ಸಿ-ಪಿಡಿಪಿ ಮಾರಾಮಾರಿಗೆ ಓರ್ವ ಬಲಿ