ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೆತ್ತವರಿಗೆ ಪತ್ರ ಬರೆವೆನೆಂದ ಉಗ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆತ್ತವರಿಗೆ ಪತ್ರ ಬರೆವೆನೆಂದ ಉಗ್ರ
ಮುಂಬಯಿ ಮೇಲೆ ನಡೆದ ಉಗ್ರವಾದಿ ದಾಳಿಯಲ್ಲಿ ಬಂಧಿತನಾದ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್, ತನ್ನನ್ನು ಉಗ್ರವಾದಿ ಸಂಘಟನೆ ದಾರಿ ತಪ್ಪಿಸಿದೆ ಎಂದು ತಿಳಿಸಲು ಪಾಕಿಸ್ತಾನದಲ್ಲಿರುವ ತನ್ನ ಹೆತ್ತವರಿಗೆ ಪತ್ರ ಬರೆಯಬರೆಯುವನೆಂಬ ಕೋರಿಕೆ ಮುಂದಿಟ್ಟಿರುವುದಾಗಿ ಸೋಮವಾರ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅಜ್ಮಲ್ ತನ್ನ ಹೆತ್ತವರಿಗೆ ಪತ್ರ ಬರೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಸಂಘಟನೆ ತನ್ನನ್ನು ದಿಕ್ಕುತಪ್ಪಿಸಿತು ಎಂದು ತಿಳಿಸುವುದಕ್ಕಾಗಿ ತಾನು ಪತ್ರ ಬರೆಯಬೇಕೆಂದು ಅಜ್ಮಲ್ ಕೇಳಿಕೊಂಡಿದ್ದಾನೆ" ಎಂದು ಜಂಟಿ ಪೊಲೀಸ್ ಕಮಿಷನರ್(ಕ್ರೈಮ್) ರಾಕೇಶ್ ಮಾರಿಯಾ ತಿಳಿಸಿದ್ದಾರೆ.

"ಅಜ್ಮಲ್ ಎರಡು ದಿನಗಳ ಮೊದಲು ಈ ಕೋರಿಕೆ ಮುಂದಿರಿಸಿದ್ದಾನೆ ಮತ್ತು ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ಮುಂಬಯಿಗೆ ದಾಳಿ ನಡೆಸಿ 183 ಜನರನ್ನು ಬಲಿ ತೆಗೆದುಕೊಂಡ 10 ಮಂದಿ ಉಗ್ರರಲ್ಲಿ ಅಜ್ಮಲ್ ಒಬ್ಬನಾಗಿದ್ದಾನೆ.

20ರಂಚಿನಲ್ಲಿರುವ ಅಜ್ಮಲ್‌ನನ್ನು ಗಿರ್‌ಗಾವ್ ಚೌಪಾಟಿ ಬಳಿ ದಸ್ತಗಿರಿ ಮಾಡಲಾಗಿತ್ತು ಮತ್ತು ಉಳಿದ ಎಲ್ಲಾ 9 ಉಗ್ರರು ಭದ್ರತಾ ಪಡೆಗಳಿಂದ ಹತರಾಗಿದ್ದರು. ಇದು ಅಜ್ಮಲ್‌ನ ಪ್ರಥಮ ಕಾರ್ಯಚರಣೆಯಾಗಿದ್ದು, ಉಳಿದ ಕಲವರು ಈ ಮೊದಲು ಸಹ ಭಯೋತ್ಪಾದನಾ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಪ್ಪನಿಂದಲೂ ಉಚ್ಚಾಟನೆಗೀಡಾದ ಚಂದ್ರಮೋಹನ್
10 ಸಾವಿರ ಮತದ ಸೋಲು: ಉಮಾ ರಾಜಕೀಯ ಸನ್ಯಾಸ?
ಕೇಂದ್ರ, ಮಹಾರಾಷ್ಟ್ರಕ್ಕೆ ಹೈಕೋ ನೋಟೀಸ್
ಕ್ಯಾಂಪಸ್ಸುಗಳು ರಾಜಕೀಯ ರಣರಂಗವಾಗಬಾರದು: ಸು.ಕೋ
ದಾಳಿ ನಡೆಸಿದ ಲಷ್ಕರೆಗೆ ಐಎಸ್ಐ ಸಹಾಯ
ದಾಳಿ ಲಿಂಕ್: ಪಾಕಿಸ್ತಾನದಲ್ಲಿ ಅಜ್ಮಲ್ ಕುಟುಂಬ