ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜೈಶೆ ಎ ಮೊಹಮ್ಮದ್ ನಾಯಕ ಅಜರ್ ಗೃಹಬಂಧನದಲ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೈಶೆ ಎ ಮೊಹಮ್ಮದ್ ನಾಯಕ ಅಜರ್ ಗೃಹಬಂಧನದಲ್ಲಿ
ಜೈಶೆ ಎ ಮೊಹಮ್ಮದ್ ಸ್ಠಾಪಕ ಮೌಲಾನ ಮಸೂದ್ ಅಜರ್‌ನನ್ನು ಹಸ್ತಾಂತರಿಸಬೇಕೆಂಬ ಭಾರತದ ಬೇಡಿಕೆಯನ್ನು ತಿರಸ್ಕರಿಸಲಾಗಿದ್ದರೂ, ಪಾಕಿಸ್ತಾನಿ ಆಧಿಕಾರಿಗಳು ಆತನ ಕಾರ್ಯ ಚಟುವಟಿಕೆಗಳನ್ನು ಪ್ರತಿಬಂಧಿಸಿದ್ದು, ಗೃಹಬಂಧನಕ್ಕೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.

1999ರಲ್ಲಿ ಕಠ್ಮಂಡುವಿನಿಂದ ಕಂದಾಹಾರ್‌ಗೆ ಇಂಡಿಯನ್ ಏರ್‌ಲೈನ್ಸ್ ಅಪಹರಿಸಲ್ಪಟ್ಟಾಗ, ಭಾರತದ ಬಂಧನದಲ್ಲಿದ್ದ ಅಜರ್ ಮತ್ತು ಇನ್ನಿಬ್ಬರು ಉಗ್ರವಾದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅಜರ್‌ನನ್ನು ಭವಾಲ್‌ಪುರ್‌ದಲ್ಲಿರುವ ಆತನ ಬಹುಮಹಡಿ ಕಟ್ಟಡದೊಳಗೆ ನಿರ್ಬಂಧಿಸಲಾಗಿದೆ ಎಂದು ನ್ಯೂಸ್ ಡೈಲಿ ಮಂಗಳವಾರ ವರದಿ ಮಾಡಿದೆ.

ಭೂಗತ ದೊರೆಗಳಾದ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆನನ್ ಅವರೊಂದಿಗೆ ಅಜರ್‌ನನ್ನು ಹಸ್ತಾಂತರಿಸಬೇಕೆಂದು ಭಾರತ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಅಜರ್‌ರ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ ಎಂದು ಆಧಿಕಾರಿ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಲಾಗಿದೆ.

ಅಜರ್‌ನನ್ನು ಗೃಹಬಂಧನಕ್ಕೊಳಪಡಿಸಲಾಗಿದೆ ಎಂಬ ಬಗ್ಗೆ ಯಾವುದೇ ಆಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ನಿಷೇಧಿತ ಸಂಘಟನೆಗಳ ವಿರುದ್ಧ ತಾವು ಕಾರ್ಯಾಚರಣೆ ಆರಂಭಿಸಿರುವುದಾಗಿ ಸೋಮವಾರ ಪಾಕಿಸ್ತಾನ ಸೇನೆ ದೃಢಪಡಿಸಿತ್ತು.

ಕಾರ್ಯಾಚರಣೆಯ ಸಂದರ್ಭ ಲಷ್ಕರ್ ಮುಖಂಡ ಜಾಕೀರ್ ರೆಹಮಾನ್ ಲಕ್ವಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು.

ಮುಂಬಯಿ ದಾಳಿ ಹಿನ್ನಲೆಯಲ್ಲಿ ಅಜರ್, ದಾವೂದ್ ಮತ್ತು ಟೈಗರ್ ಮೆನನ್‌ರನ್ನು ಹಸ್ತಾಂತರಿಸಬೇಕೆಂಬ ಭಾರತದ ಮನವಿಯನ್ನು ತಿರಸ್ಕರಿಸಿದ್ದ ಪಾಕಿಸ್ತಾನ ಸರಕಾರ, ಇದಕ್ಕೆ ಬದಲಾಗಿ ಮತ್ತೆ ಜಂಟಿ ಕಾರ್ಯಾಚರಣೆ ನಡೆಸುವ ಪ್ರಸ್ತಾವನೆಯನ್ನು ಸೋಮವಾರದಂದು ಮುಂದಿಟ್ಟಿತ್ತು.

ಈ ಹಿಂದೆಯೂ ಭಾರತ ಅಜರ್‌ನ ಹಸ್ತಾಂತರ ಬೇಡಿಕೆ ಸಲ್ಲಿಸಿದ್ದಾಗ ಆತನ ಚಟುವಟಿಕೆಗಳನ್ನು ನಿಯಂತ್ರಿಸಲಾಗಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅಜರ್ ಹಾಗು ಜೈಷೆ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದ ಬಗ್ಗೆ ವರದಿಗಳಿದ್ದವು.

ಈ ಹಿಂದೆ ಉಗ್ರ ಅಜರ್ ಭಾರತೀಯ ಜೈಲಿನಲ್ಲಿದ್ದ, ಪಾಕಿಸ್ತಾನಿ ಉಗ್ರರು ಭಾರತೀಯ ವಿಮಾನವನ್ನು ಅಪಹರಿಸಿ ಕಂದಹಾರ್‌ಗೆ ಕೊಂಡೊಯ್ದಾಗ ಪ್ರಯಾಣಿಕರ ಬದಲಿಗೆ ಅಜರ್‌ನನ್ನು ಭಾರತ ಸರಕಾರ ಬಿಡುಗಡೆ ಮಾಡಿತ್ತು.

ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಅಜರ್ ಜೈಶೆ ಸಂಘಟನೆಯನ್ನು ಹುಟ್ಟು ಹಾಕಿದ್ದ.

ಜೈಶೆಗೆ ಖುದುಮ್-ಉಲ್-ಇಸ್ಲಾಮ್ ಎಂಬ ಮರುನಾಮಕರಣ ಮಾಡಲಾಗಿತ್ತು ಮತ್ತು ಅಜರ್‌ನ ತಮ್ಮ ಮುಫ್ತಿ ಅಬ್ದುಲ್ ರಾಫ್‌ನ ಮುಖಂಡತ್ವಕ್ಕೆ ಒಳಪಡಿಸಲಾಗಿತ್ತು.

ಭಾರತೀಯ ಸಂಸತ್ತಿನ ಮೇಲಿನ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನಿ ಆಧಿಕಾರಿಗಳು 2001ರಲ್ಲಿ ಅಜರ್‌ನನ್ನು ಆಧಿಕೃತವಾಗಿ ಬಂಧಿಸಿದ್ದರು. ಆದರೆ ಒಂದು ವರ್ಷದ ನಂತರ ಲಾಹೋರ್ ಹೈಕೋರ್ಟ್ ಆತನನ್ನು ಬಿಡುಗಡೆಗೊಳಿಸಿತು.

ಅಜರ್‌ನ ನಿಕಟವರ್ತಿ ಅಹಮದ್ ಸಯೀದ್ ಉಮರ್ 2002ರಲ್ಲಿ ಅಮೆರಿಕನ್ ಪತ್ರಕರ್ತ ಡೇನಿಯಲ್ ಪರ್ಲ್ ಅನ್ನು ಹತ್ಯೆಗೈದ ಹಿನ್ನಲೆಯಲ್ಲಿ ಅಮೆರಿಕ ಅಪಹರಣವಾದ ಭಾರತೀಯ ವಿಮಾನದಲ್ಲಿ ಅಮೆರಿಕ ಪ್ರಜೆಗಳೂ ಇದ್ದುದರಿಂದ ಜೈಶೆ ಮುಖಂಡನನ್ನು ತಮ್ಮ ಬಂಧನಕ್ಕೆ ಒಪ್ಪಿಸಬೇಕೆಂದು ಕೇಳಿತ್ತು.

ಆದರೆ ಅಮೆರಿಕ ಮನವಿಯನ್ನು ತಿರಸ್ಕರಿಸಿದ ಪಾಕಿಸ್ತಾನಿ ಆಧಿಕಾರಿಗಳು, ಅಜರ್ ಅಪಹರಣಕಾರನಲ್ಲ ಮತ್ತು ಭಾರತ ಆತನನ್ನು "ಕಾನೂನುಬಾಹಿರ"ವಾಗಿ ಬಂಧನದಲ್ಲಿರಿಸಿತ್ತು ಎಂದು ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೆತ್ತವರಿಗೆ ಪತ್ರ ಬರೆವೆನೆಂದ ಉಗ್ರ
ಅಪ್ಪನಿಂದಲೂ ಉಚ್ಚಾಟನೆಗೀಡಾದ ಚಂದ್ರಮೋಹನ್
10 ಸಾವಿರ ಮತದ ಸೋಲು: ಉಮಾ ರಾಜಕೀಯ ಸನ್ಯಾಸ?
ಕೇಂದ್ರ, ಮಹಾರಾಷ್ಟ್ರಕ್ಕೆ ಹೈಕೋ ನೋಟೀಸ್
ಕ್ಯಾಂಪಸ್ಸುಗಳು ರಾಜಕೀಯ ರಣರಂಗವಾಗಬಾರದು: ಸು.ಕೋ
ದಾಳಿ ನಡೆಸಿದ ಲಷ್ಕರೆಗೆ ಐಎಸ್ಐ ಸಹಾಯ