ಆಧಿಕಾರಿದಲ್ಲಿದ್ದ ಬಿಜೆಪಿ ಮುಖ್ಯಮಂತ್ರಿ ರೆಹಮಾನ್ ಸಿಂಗ್ ಅವರ "ಮಿಸ್ಟರ್ ಕ್ಲೀನ್" ಇಮೇಜ್ ಛತ್ತೀಸ್‌ಗಢದಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಜಯಗಳಿಸುವಲ್ಲಿ ಮುಖ್ಯಪಾತ್ರ ವಹಿಸಿದೆ. ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಆಧಿಕಾರದ ಗದ್ದುಗೆಯೇರಲು ಜನಾದೇಶ ಪಡೆದಿದೆ.ಮೊದಲು ಸರಳ ಬಹುಮತಕ್ಕೆ ಅಗತ್ಯವಿರುವ 46 ಸ್ಥಾನಗಳು ಬಿಜೆಪಿಗೆ ಒಲಿಯುವ ಬಗ್ಗೆ ಸಂದೇಹಗಳಿದ್ದವು, ಆದರೆ ಸೋಮವಾರ ಮಧ್ಯಾಹ್ನ ಇಕ್ತಮ್ ಪರಿಸರ್, ರಾಯ್‌ಪುರದಲ್ಲಿರುವ ಬಿಜೆಪಿ ರಾಜ್ಯ ಮುಖ್ಯಘಟಕಗಳಲ್ಲಿ ಜಯದ ಸಂಭ್ರಮಾಚರಣೆ ಮೊದಲ್ಗೊಂಡಿತು.ಸ್ಪರ್ಧೆಯ ಕೊನೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್‌ನ ಆರು ಹಿರಿಯ ನಾಯಕರಾದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಧನೇಂದ್ರ ಸಾಹು, ಸತ್ಯನಾರಾಯಣ ಶರ್ಮ, ಮಹೇಂದ್ರ ಕರ್ಮ, ಭೂಪೇಶ್ ಬಾಗೇಲ್ ಮತ್ತು ಅರುಣ್ ವೋರಾ ಅವರಿಗೆ ಜನಾಭಿಪ್ರಾಯ ಅಘಾತ ನೀಡಿತು. ರಾಜಕೀಯ ವಿಶ್ಲೇಷಕರು ಬಿಜೆಪಿಯ ಈ ಜಯದ ಶ್ರೇಯವನ್ನು ರೆಹಮಾನ್ ಸಿಂಗ್‌ರ "ಮಿಸ್ಟರ್ ಕ್ಲೀನ್" ಇಮೇಜ್‌ಗೆ ಮತ್ತು ಈ ವರ್ಷದ ಆರಂಭದಲ್ಲಿ ಅವರು ಆರಂಭಿಸಿದ 3.5 ಲಕ್ಷ ಬಡ ಕುಟುಂಬಗಳಿಗೆ ಕೆ.ಜಿಗೆ ಮೂರು ರೂಪಾಯಿಯಂತೆ ತಿಂಗಳಿಗೆ 35ಕೆಜಿ ಅಕ್ಕಿ ವಿತರಿಸುವ ಯೋಜನೆಗೆ ನೀಡಿದ್ದಾರೆ.ಬಿಜೆಪಿಯ ಜಯವನ್ನು "ಬಿಜೆಪಿ ಸರಕಾರದ ಕಾರ್ಯಯೋಜನೆಗಳು ಮತ್ತು ಅಭಿವೃದ್ದಿ ಯೋಜನೆಗಳ ಬಗ್ಗೆ ಜನತೆಯ ಅನುಮೋದನೆ" ಎಂದು ಸಿಂಗ್ ವ್ಯಾಖ್ಯಾನಿಸಿದ್ದಾರೆ.ಗೆಲುವಿನ ಖುಷಿಯಲ್ಲಿದ್ದ 56ರ ಸಿಂಗ್ "ರಾಜ್ಯದಲ್ಲಿ ಅಭಿವೃದ್ಧಿಯ ಗತಿಯನ್ನು ಹೆಚ್ಚಿಸುವುದು ಮತ್ತು ಶಾಂತಿಯನ್ನು ಕಾಯ್ದಿರಿಸುವುದಕ್ಕೆ ಪ್ರಮುಖ ಅದ್ಯತೆ" ಎಂದು ಮಾಧ್ಯಮ ವರದಿಗಾರರಲ್ಲಿ ಹೇಳಿದರು. |