ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ
ಅಶೋಕ್ ಚವಾಣ್ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಛಗನ್ ಭುಜಬಲ್ ಅವರು ಸೋಮವಾರ ಸಂಜೆ ಅಧಿಕಾರದ ಗದ್ದುಗೆಗೆ ಏರಿದ್ದಾರೆ.

ಮುಂಬೈನಲ್ಲಿರುವ ರಾಜ್ ಭವನ್‌ದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಜಮೀರ್ ಅವರು ರಾಜ್ಯದ 24ನೇ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸಿದರು.

ಮುಂಬೈನಲ್ಲಿ ಉಗ್ರರ ದಾಳಿಯಿಂದ ಜನ ನೋವನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ತನ್ನ ಪ್ರಮಾಣವಚನ ಸಮಾರಂಭವನ್ನು ಅದ್ದೂರಿಯಾಗಿ ನಡೆಸದೆ ಸರಳವಾಗಿರಬೇಕೆಂಬುದು ಚವಾಣ್ ಇರಾದೆಯಾಗಿತ್ತು. ಅದರಂತೆಯೇ ಸರಳ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಎನ್‌ಸಿಪಿಯ ಛಗನ್ ಭುಜಬಲ್ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದರು.
ಭಯೋತ್ಪಾದಕರ ದಾಳಿ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಮತ್ತು ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಕಾಂಗ್ರೆಸ್ ಹೈಕಮಾಂಡ್ ಆ ಸ್ಥಾನಗಳಿಗೆ ಚವಾಣ್ ಮತ್ತು ಛಗನ್ ಅವರನ್ನು ಆಯ್ಕೆ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಮಲಕ್ಕೆ ಛತ್ತೀಸ್‌ಗಢ್ ಉಳಿಸಿಕೊಟ್ಟ"ಮಿಸ್ಟರ್ ಕ್ಲೀನ್"
ಜೈಶೆ ಎ ಮೊಹಮ್ಮದ್ ನಾಯಕ ಅಜರ್ ಗೃಹಬಂಧನದಲ್ಲಿ
ಹೆತ್ತವರಿಗೆ ಪತ್ರ ಬರೆವೆನೆಂದ ಉಗ್ರ
ಅಪ್ಪನಿಂದಲೂ ಉಚ್ಚಾಟನೆಗೀಡಾದ ಚಂದ್ರಮೋಹನ್
10 ಸಾವಿರ ಮತದ ಸೋಲು: ಉಮಾ ರಾಜಕೀಯ ಸನ್ಯಾಸ?
ಕೇಂದ್ರ, ಮಹಾರಾಷ್ಟ್ರಕ್ಕೆ ಹೈಕೋ ನೋಟೀಸ್