ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಂದಿನಿಂದ ಅಲ್ಪಾವಧಿಯ ಸಂಸತ್ ಅಧಿವೇಶನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿನಿಂದ ಅಲ್ಪಾವಧಿಯ ಸಂಸತ್ ಅಧಿವೇಶನ
ಇಂದಿನಿಂದ ಆರಂಭವಾಗಲಿರುವ ಅಲ್ಪಾವಧಿಯ ಸಂಸತ್ ಅಧಿವೇಶನದಲ್ಲಿ ಭಯೋತ್ಪಾದನೆಯ ವಿರುದ್ಧ ರಾಜಕೀಯ ಒಮ್ಮತ ಒಂದನ್ನು ಮೂಡಿಸುವ ನಿರೀಕ್ಷೆ ಇದೆ.

ಜುಲೈ 21ರ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸಮತ ಯಾಚನೆಯ ಬಳಿಕ ನಡೆಯುತ್ತಿರುವ ಹತ್ತು ದಿನಗಳ ಅಧಿವೇಶನ ಇದಾಗಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿರುವ ಯುಪಿಎ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಸರಕಾರವು ಕೇಂದ್ರೀಯ ತನಿಖಾ ದಳ(ಎಫ್ಐಎ)ದ ಜಾರಿಗೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ಮತ್ತು ಭಯೋತ್ಪಾದನೆಯ ನಿಗ್ರಹಕ್ಕಾಗಿ ಕಾನೂನಿ ಚೌಕಟ್ಟೊಂದನ್ನೂ ರೂಪಿಸುವ ನಿರೀಕ್ಷೆ ಇದೆ.

ನೂತನ ಗೃಹಸಚಿವ ಪಿ.ಚಿದಂಬರಂ ಅವರು ಈ ಕುರಿತು ಈಗಾಗಲೆ ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಅಧಿವೇಶನದಲ್ಲಿ ಎಫ್ಐಎಯನ್ನು ಜಾರಿಗೆ ತರುವ ವಿಶ್ವಾಸವನ್ನು ಕಾಂಗ್ರೆಸ್ ವಕ್ತಾರ ಹಾಗೂ ಗೃಹಖಾತೆಯ ರಾಜ್ಯಸಚಿವ ಶಕೀಲ್ ಅಹ್ಮದ್ ವ್ಯಕ್ತಪಡಿಸಿದ್ದಾರೆ.

ಭದ್ರತಾ ವಿಚಾರದಲ್ಲಿ ಸರ್ಕಾರ ಉತ್ತರದಾಯಿಯಾಗಿದೆ ಎಂದಿರುವ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ, ಭಯೋತ್ಪಾದನೆಯನ್ನು ಎದುರಿಸಲು ಸರ್ಕಾರದ ಸಿದ್ಧತೆಯ ಕುರಿತು ವಿವರವಾದ ವರದಿಯನ್ನು ಕೇಳುವುದಾಗಿ ಅವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ
ಕಮಲಕ್ಕೆ ಛತ್ತೀಸ್‌ಗಢ್ ಉಳಿಸಿಕೊಟ್ಟ"ಮಿಸ್ಟರ್ ಕ್ಲೀನ್"
ಜೈಶೆ ಎ ಮೊಹಮ್ಮದ್ ನಾಯಕ ಅಜರ್ ಗೃಹಬಂಧನದಲ್ಲಿ
ಹೆತ್ತವರಿಗೆ ಪತ್ರ ಬರೆವೆನೆಂದ ಉಗ್ರ
ಅಪ್ಪನಿಂದಲೂ ಉಚ್ಚಾಟನೆಗೀಡಾದ ಚಂದ್ರಮೋಹನ್
10 ಸಾವಿರ ಮತದ ಸೋಲು: ಉಮಾ ರಾಜಕೀಯ ಸನ್ಯಾಸ?