ಮುಂಬೈದಾಳಿಯಲ್ಲಿ ಪಾಲ್ಗೊಂಡಿರುವ ಉಗ್ರರ ಚಿತ್ರವನ್ನು ಮುಂಬೈ ಪೋಲೀಸರು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಇವುಗಳಲ್ಲಿ ಕೆಲವು ಚಿತ್ರಗಳನ್ನು ಸಾವೀಗೀಡಾಗಿರುವ ಉಗ್ರರು ಹೊಂದಿರುವ ಗುರುತುಚೀಟಿಗಳಿಂದ ಪಡೆಯಲಾಗಿದೆ. ಇವರನ್ನು ಬಡಾ ಅಬ್ದುಲ್ ರೆಹ್ಮಾನ್, ಅಬ್ದುಲ್ ರೆಹ್ಮಾನ್ ಚೋಟಾ, ಇಸಾಮಲ್ ಖಾನ್, ನಸೀಸ್ ಅಕ ಅಬು ಉಮರ್ ಮತ್ತು ಬಾಬರ್ ಅಬು ಅಕಸ ಎಂದು ಗುರುತಿಸಲಾಗಿದೆ.ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಕಾಮಾ ಆಸ್ಪತ್ರೆಯಲ್ಲಿ ದಾಳಿನಡೆಸಿದವರನ್ನು ಇಸ್ಮಾಯಿಲ್ ಖಾನ್ ಅಲಿಯಾಸ್ ಅಬು ಇಸ್ಮಾಯಿಲ್ ಮತ್ತು ಮಹಮ್ಮದ್ ಅಜ್ಮಲ್ ಅಮಿರ್ ಇಮಾನ್ ಅಲಿಯಾಸ್ ಅಬು ಮುಜಾಹಿದ್ ಎಂದು ಗುರುತಿಸಿರುವುದಾಗಿ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳಿದ್ದಾರೆ.ಮುಲ್ತಾನಿನ ಹಫೀಜಾ ಅರ್ಶದ್, ಅಲಿಯಾಸ್ ಬಡಾ ಅಬ್ದುಲ್ ರೆಹ್ಮಾನ್, ಒಕಾರದ ಜಾವೇದ್ ಅಲಿಯಾಸ್, ಸಿಯಾಲ್‌ಕೋಟ್‌ನ ಅಬು ಅಲಿ ಅಲಿಯಾಸ್ ಮತ್ತು ಫೈಸ್ಲಾಬಾದ್‌ನ ನಾಝೀರ್ ಅಲಿಯಾಸ್ ಅಬು ಉಮರ್ ಅವರುಗಳು ಹೋಟೇಲ್ ತಾಜ್‌ನಲ್ಲಿ ದಾಳಿ ನಡೆಸಿದ್ದಾರೆ.ಫೈಸ್ಲಾಬಾದಿನ ನಾಸಿರ್ ಅಲಿಯಾಸ್ ಅಬು ಉಮರ್, ಮುಲ್ತಾನಿನ ಬಾಬರ್ ಇಮ್ರಾನ್ ಅಲಿಯಾಸ್ ಅಬು ಅಕಸ ಇವರುಗಳು ಕೊಲಾಬದಲ್ಲಿರುವ ನರಿಮನ್ ಹೌಸ್‌ನಲ್ಲಿ ಯಹೂದಿ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಮುಲ್ತಾನಿನ ಅಬ್ದುಲ್ ರೆಹ್ಮಾನ್ ಅಲಿಯಾಸ್ ಅಬ್ದುಲ್ ರೆಹ್ಮಾನ್ ಚೋಟಾ ಮತ್ತು ಒಕಾರದ ಫಹದುಲ್ಲಾ ಅಲಿಯಾಸ್ ಫಹದ್ ಎಂಬಿಬ್ಬರು ಒಬೆರಾಯ್ ಹೋಟೇಲಿನ ಮೇಲೆ ದಾಳಿ ನಡೆಸಿದ್ದರು ಎಂದು ಅವರು ತಿಳಿಸಿದ್ದಾರೆ. |