ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಟ್ಟೆಚ್ಚರದಲ್ಲಿ ವಾಯುಪಡೆ, ಪ್ರಮುಖರ ರಜೆ ರದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಟ್ಟೆಚ್ಚರದಲ್ಲಿ ವಾಯುಪಡೆ, ಪ್ರಮುಖರ ರಜೆ ರದ್ದು
ಸಮರೋಪಾದಿಯಲ್ಲಿ ಸನ್ನದ್ಧವಾಗಿರುವ ಭಾರತೀಯ ವಾಯುಪಡೆಯು ಕಟ್ಟೆಚ್ಚರ ವಹಿಸಿದ್ದು, ವಾಯುಪಡೆಯ ಪ್ರಮುಖ ಹುದ್ದೆಯಲ್ಲಿರುವವರ ರಜೆಗಳನ್ನು ರದ್ದುಪಡಿಸಲಾಗಿದೆ.

2001ರಲ್ಲಿ ನಡೆದ ಆಪರೇಶನ್ ಪರಾಕ್ರಮದ ಬಳಿಕ ವಾಯುಪಡೆಯು ನಡೆಸಿರುವ ಅತ್ಯುನ್ನತ ಸಿದ್ಧತೆ ಇದಾಗಿದೆ. ಭಾರತೀಯ ನೆಲೆಗಳ ಉಗ್ರರ ಸಂಭಾವ್ಯ ದಾಳಿಯನ್ನು ತಡೆಯಲು ವಾಯುಪಡೆಯು ಸರ್ವಸನ್ನದ್ದವಾಗಿದೆ.

ಬಾಂಬುಗಳು ಮತ್ತು ಕ್ಷಿಪಣಿಗಳೊಂದಿಗೆ ವಾಯುಪಡೆಯ ಎಲ್ಲಾ ವಿಮಾನಗಳು ಸಮರ ಸಜ್ಜಾಗಿವೆ. ಯಾವುದೇ ಕ್ಷಣದಲ್ಲಿಯೂ ಹಾರಡಲು ವಿಮಾನಗಳು ಸಿದ್ಧವಾಗಿವೆ. ಪಾಕಿಸ್ತಾನಕ್ಕೆ ಮುಖಮಾಡಿರುವ ಪಶ್ಚಿಮ ನೌಕಾದಳದ ಯುದ್ಧ ನೌಕೆಗಳು ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿವೆ.

ಅದಾಗ್ಯೂ, ಈ ರಕ್ಷಣಾತ್ಮಕ ಎಚ್ಚರಿಕೆಯನ್ನು ಭಾರತದ ಮೇಲಿನ ದಾಳಿಯ ಎದುರಿಸುವಿಕೆಯ ರಕ್ಷಣೆ ದೃಷ್ಟಿಯಿಂದ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಮತ್ತು ನೈರುತ್ಯ ಕಮಾಂಡೋಗಳ ಪ್ರಮುಖ ಎಲ್ಲ ಸಿಬ್ಬಂದಿಗಳ ಎಲ್ಲಾ ರಜೆಗಳನ್ನು ರದ್ದು ಪಡಿಸಲಾಗಿದೆ. ರಜೆಮೇಲೆ ಸಿಬ್ಬಂದಿಗಳು ತೆರಳುವ ಶೇಕಡವಾರನ್ನು 30ರಿಂದ 10ಕ್ಕೆ ಇಳಿಸಲಾಗಿದೆ.

ಆದರೆ, ಗಡಿಪ್ರದೇಶದಲ್ಲಿ ಸೇನಾಪಡೆಗಳ ಜಮಾವಣೆ ಆಗಿಲ್ಲ ಮತ್ತು ಭಾರತೀಯ ಸೇನೆಯು ಉನ್ನತ ಮಟ್ಟದ ಸಿದ್ಧತೆಯಲ್ಲಿ ಇಲ್ಲ.

ಮುಂಬೈ ದಾಳಿ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥರು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರಿಗೆ ಭದ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಉಗ್ರರು ನಡೆಸಿರುವ 9/11 ದಾಳಿಗಳನ್ನು ತಡೆಯಲು ವಾಯುಪಡೆಗಳು ಸರ್ವ ಸನ್ನದ್ಧವಾಗಿವೆ.

ಆಪರೇಶನ್ ಪರಾಕ್ರಮದ ವೇಳೆ ಐಎಎಫ್ ಸಕ್ರಿಯ ವಾಯು ರಕ್ಷಣೆಯನ್ನು ಕೈಗೊಂಡಿದ್ದು, ವೈರಿ ನೆಲೆಗಳನ್ನು ನಾಶಪಡಿಸಲು ವಾಯುಪಡೆ ವಿಮಾನಗಳು ಸನ್ನದ್ಧವಾಗಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
26/11 ದಾಳಿಯ ಭಯೋತ್ಪಾದಕರ ಚಿತ್ರ ಬಿಡುಗಡೆ
ಇಂದಿನಿಂದ ಅಲ್ಪಾವಧಿಯ ಸಂಸತ್ ಅಧಿವೇಶನ
ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ
ಕಮಲಕ್ಕೆ ಛತ್ತೀಸ್‌ಗಢ್ ಉಳಿಸಿಕೊಟ್ಟ"ಮಿಸ್ಟರ್ ಕ್ಲೀನ್"
ಜೈಶೆ ಎ ಮೊಹಮ್ಮದ್ ನಾಯಕ ಅಜರ್ ಗೃಹಬಂಧನದಲ್ಲಿ
ಹೆತ್ತವರಿಗೆ ಪತ್ರ ಬರೆವೆನೆಂದ ಉಗ್ರ