ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ: ಸಿಎಲ್‌ಪಿ ನಾಯಕಿಯಾಗಿ ಶೀಲಾದೀಕ್ಷಿತ್ ಆಯ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ: ಸಿಎಲ್‌ಪಿ ನಾಯಕಿಯಾಗಿ ಶೀಲಾದೀಕ್ಷಿತ್ ಆಯ್ಕೆ
PTI
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಶೀಲಾದೀಕ್ಷಿತ್ ಅವರನ್ನು ದೆಹಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿದೆ. ಶಾಸಕಾಂಗ ಪಕ್ಷವು ತನ್ನ ನಾಯಕರ ಔಪಚಾರಿಕ ಆಯ್ಕೆಗಾರಿ ಬಧವಾರ ಸಭೆಸೇರಿ ಶೀಲಾರ ಆಯ್ಕೆ ಮಾಡಿದೆ.

ದೆಹಲಿಯಲ್ಲಿ ಕಾಂಗ್ರೆಸ್ ತೃತೀಯ ಬಾರಿ ಗೆಲುವು ಸಾಧಿಸಿರುವ ಕೀರ್ತಿಯನ್ನು ದೀಕ್ಷಿತ್ ಅವರಿಗೆ ಸಲ್ಲಿಸಲಾಗಿದೆ. ಕಾಂಗ್ರೆಸ್ ಗೆಲುವು ದಾಖಲಿಸುತ್ತಿರುವಂತೆ ಶೀಲಾ ಅವರೇ ಮುಖ್ಯಮಂತ್ರಿ ಎಂಬುದು ನಿಚ್ಚಳವಾಗಿದ್ದರೂ, ಔಪಚಾರಿಕವಾಗಿ ಬುಧವಾರದ ಸಭೆ ಕರೆಯಲಾಗಿತ್ತು.

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚುನಾವಣೆಯಲ್ಲಿ ಗೆದ್ದ ಎಲ್ಲಾ 42 ನೂತನ ಶಾಸಕರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹ್ಸಿನಾ ಕಿದ್ವಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಿಕೆ ಬನ್ಸಾಲ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಪುಟ ಖಾತೆಯ ಮೇಲೆ ಹಿಡಿತ ಸಾಧಿಸಲು ದೀಕ್ಷಿತ್ ಅವರು ತಮ್ಮ ನಿಷ್ಠಾವಂತರಿಗೆ ಖಾತೆಗಳನ್ನು ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಟ್ಟೆಚ್ಚರದಲ್ಲಿ ವಾಯುಪಡೆ, ಪ್ರಮುಖರ ರಜೆ ರದ್ದು
26/11 ದಾಳಿಯ ಭಯೋತ್ಪಾದಕರ ಚಿತ್ರ ಬಿಡುಗಡೆ
ಇಂದಿನಿಂದ ಅಲ್ಪಾವಧಿಯ ಸಂಸತ್ ಅಧಿವೇಶನ
ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ
ಕಮಲಕ್ಕೆ ಛತ್ತೀಸ್‌ಗಢ್ ಉಳಿಸಿಕೊಟ್ಟ"ಮಿಸ್ಟರ್ ಕ್ಲೀನ್"
ಜೈಶೆ ಎ ಮೊಹಮ್ಮದ್ ನಾಯಕ ಅಜರ್ ಗೃಹಬಂಧನದಲ್ಲಿ