ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ದಾಳಿ: ಕಠಿಣ ಕ್ರಮ ಬಯಸಿದ ಸಂಸತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿ: ಕಠಿಣ ಕ್ರಮ ಬಯಸಿದ ಸಂಸತ್
PTI
ಮುಂಬೈಯಲ್ಲಿ ಉಗ್ರರು ನಡೆಸಿರುವ ದಾಳಿಯನ್ನು 'ಅತ್ಯಂತ ಘೋರ' ಎಂದು ಕರೆದಿರುವ ಸಂಸತ್, ಇಂತಹ ದಾಳಿಗಳು ಪುನರಾವರ್ತನೆಯಾಗದಂತೆ ತಡೆಯಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು ಎಂದು ಒತ್ತಾಯಿಸಿದೆ.

ಸ್ಪೀಕರ್ ಸೋಮನಾಥ ಚಟರ್ಜಿ ಅವರು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಅಧ್ಯಕ್ಷ ಹಮೀದ್ ಅನ್ಸಾರಿ ಅವರುಗಳು ಮುಂಬೈ ದಾಳಿ ಮತ್ತು ಇತರ ಹಲವು ದಾಳಿಗಳನ್ನು ಚಳಿಗಾಲದ ಮೊದಲ ಅಧಿವೇಶನದ ಮೊದಲದಿನ ತೀವ್ರವಾಗಿ ಖಂಡಿಸಿದರು.

ಭಯೋತ್ಪಾದನೆಯ ಪಿಡುಗನ್ನು ತಡೆಯಲು ಎಲ್ಲಾ ಹಂತದಲ್ಲಿ ತಡೆಯಲು ಸರ್ಕಾರ ಮತ್ತು ಜನತೆಯ ಮುಂದಾಗಬೇಕು ಎಂದು ಅನ್ಸಾರಿ ರಾಜ್ಯಸಭೆಯಲ್ಲಿ ನುಡಿದರು.

ರಾಷ್ಟ್ರದ ವಾಣಿಜ್ಯ ನಗರಿ ಮುಂಬೈಯ ವಿವಿಧೆಡೆ ಅತ್ಯಂತ ಘೋರವಾದ ಭಯೋತ್ಪಾದನಾ ದಾಳಿಯ ಕಾರಣ ನಗರ ಅಲ್ಲೋಲಕಲ್ಲೋಲವಾಗಿತ್ತು ಎಂದು ಅನ್ಸಾರಿ ಹೇಳಿದರು.

ಇದೇ ವೇಳೆ ದೀರ್ಘಕಾಲದಿಂದ ಅಸ್ವಸ್ಥರಾಗಿದ್ದು ಸಾವನ್ನಪ್ಪಿದ್ದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ನಿಧನಕ್ಕೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿ.ಪಿ.ಸಿಂಗ್ ಅವರು ಒಬ್ಬ ಬಡವರ ಮತ್ತು ವಂಚಿತರ ನಿಜವಾದ ಸ್ನೇಹಿತರಾಗಿದ್ದರು ಎಂದು ಚಟರ್ಜಿ ನುಡಿದರು. ಇದೇ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ ಮುಜಾಫರ್‌ನಗರದ ಹಾಲಿಸಂಸದ ಮುನ್ವರ್ ಹಸನ್, ಮಾಜಿ ಸಚಿವ ಅಜಿತ್ ಕುಮಾರ್ ಪಾಂಜಾ ಅವರುಗಳ ನಿಧನಕ್ಕೂ ಸಂತಾಪ ವ್ಯಕ್ತಪಡಿಸಲಾಯಿತು.

ಒಂದು ನಿಮಿಷದ ಮೌನಾಚರಣೆ ಬಳಿಕ ಅಗಲಿದ ನಾಯಕರು ಮತ್ತು ಮುಂಬೈ ದಾಳಿಯ ಬಲಿಪಶುಗಳ ಗೌರವಾರ್ಥ ಉಭಯ ಸದನಗಳನ್ನು ಗರುವಾರಕ್ಕೆ ಮುಂದೂಡಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ: ಸಿಎಲ್‌ಪಿ ನಾಯಕಿಯಾಗಿ ಶೀಲಾದೀಕ್ಷಿತ್ ಆಯ್ಕೆ
ಕಟ್ಟೆಚ್ಚರದಲ್ಲಿ ವಾಯುಪಡೆ, ಪ್ರಮುಖರ ರಜೆ ರದ್ದು
26/11 ದಾಳಿಯ ಭಯೋತ್ಪಾದಕರ ಚಿತ್ರ ಬಿಡುಗಡೆ
ಇಂದಿನಿಂದ ಅಲ್ಪಾವಧಿಯ ಸಂಸತ್ ಅಧಿವೇಶನ
ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ
ಕಮಲಕ್ಕೆ ಛತ್ತೀಸ್‌ಗಢ್ ಉಳಿಸಿಕೊಟ್ಟ"ಮಿಸ್ಟರ್ ಕ್ಲೀನ್"