ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಐಬಿ, ರಾ, ಎಂಐ ತಿಕ್ಕಾಟ, ಪ್ರಜೆಗಳಿಗೆ ಸಂಕಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಬಿ, ರಾ, ಎಂಐ ತಿಕ್ಕಾಟ, ಪ್ರಜೆಗಳಿಗೆ ಸಂಕಟ
WD
ರಾಷ್ಟ್ರದ ಮ‌ೂರು ಬೇಹುಗಾರಿಕಾ ಸಂಸ್ಥೆಯಗಳ ನಡುವಿನ ಗುದ್ದಾಟದಿಂದ ಭಾರತವು ಭಾರೀ ಬೆಲೆತೆರುವಂತಾಗಿದ್ದು, ಮುಂಬೈ ದಾಳಿಯು ಇಂತಹ ತಿಕ್ಕಾಟದ ಫಲ ಎಂದು ಇವುಗಳ ನಿಕಟ ಮೂಲಗಳು ಹೇಳುತ್ತಿವೆ.

ರಾಷ್ಟ್ರವು ಮ‌ೂರು ಪ್ರಮುಖ ಗುಪ್ತಚರ ದಳಗಳನ್ನು ಹೊಂದಿದೆ. ಆಂತರಿಕ ಮಾಹಿತಿಗಳನ್ನು ಸಂಗ್ರಹಿಸುವ ಗುಪ್ತಚರ ದಳ(ಐಬಿ), ಬಾಹ್ಯ ಗುಪ್ತಚರ ಮಾಹಿತಿ ಸಂಗ್ರಹಿಸುವ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್(ರಾ) ಮತ್ತು ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವ ಸೇನಾ ಬೇಹುಗಾರಿಕೆ(ಎಂಐ).

ರಾ, ಐಬಿ ಮತ್ತು ಎಂಐಗಳ ನಡುವಣ ಪ್ರತಿಸ್ಫರ್ಧೆಯು ಈ ಮೂರು ಏಜೆನ್ಸಿಗಳಿಗೆ ಮಾತ್ರವಲ್ಲದೆ, ರಾಷ್ಟ್ರಕ್ಕೂ ಸಾಕಷ್ಟು ಹಾನಿಯುಂಟುಮಾಡಿದೆ. ಈ ಬೇಹುಗಾರಿಕಾ ಸಂಸ್ಥೆಗಳಿಗೆ ಪರಸ್ಪರ ಮಾಹಿತಿ ಹಂಚಿಕೊಳ್ಳಲು ಇಷ್ಟವಿಲ್ಲದಿರುವುದು ಅತಿ ದೊಡ್ಡ ಸಂಕಷ್ಟವಾಗಿದೆ ಎಂದು ರಾ ಸಂಸ್ಥೆಯ ನಿವೃತ್ತ ಮೇಜರ್ ಜನರಲ್ ಹೇಳುತ್ತಾರೆ. ಇವರು ಗುಪ್ತಚರದಳಗಳನ್ನು ಅತಿ ಹತ್ತಿರದಿಂದ ಕಂಡವರು.

"ಎಲ್ಲಾ ಗುಪ್ತಚರ ದಳಗಳಲ್ಲೂ ಯಾವುದೇ ಕಾರ್ಯದ ಕೀರ್ತಿ ತಮ್ಮದಾಗಬೇಕು ಎಂಬ ಸ್ಫರ್ಧೆ ಇರುತ್ತದೆ. ಮಾಹಿತಿಯನ್ನು ರಾಜಕೀಯದಲ್ಲಿ ಅತ್ಯಂತ ಪ್ರಮುಖರಿಗೆ, ಕೆಲವೊಮ್ಮೆ ಪ್ರಧಾನಿಗಳಿಗೆ ತಿಳಿಸುವ ತನಕ ಅದನ್ನು ಗೌಪ್ಯವಾಗಿರಿಸಬೇಕು ಎಂಬ ಒಂದು ಪ್ರವೃತ್ತಿ ಕಾಣುತ್ತಿದೆ" ಎಂದು ಸಿಂಗ್ ಹೇಳುತ್ತಾರೆ.

'ಇಂಡಿಯಾಸ್ ಎಕ್‌ಸ್ಟರ್ನಲ್ ಇಂಟಲಿಜೆನ್ಸ್- ಸೀಕ್ರೆಟ್ಸ್ ಆಫ್ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್' ಎಂಬ ಪುಸ್ತಕದಲ್ಲಿ ಸಿಂಗ್ ಅವರು ಐಬಿ, ಮತ್ತು ರಾ ನಡುವಿನ ಪ್ರತಿಸ್ಫರ್ಧೆಯನ್ನು ನಮೂದಿಸಿದ್ದಾರೆ. ಈ ಸಂಸ್ಥೆಗಳ ಚರಿತ್ರೆಯನ್ನು ಗಮನಿಸಿದರೆ ಇದು ಅನಿವಾರ್ಯವೇನೋ ಎಂಬಂತಾಗಿದೆ ಎಂದೂ ಅವರು ಹೇಳಿದ್ದಾರೆ.

"ವಿದೇಶಿ ಉಗ್ರಗಾಮಿ ಸಂಘಟನೆಯೊಂದು ಭಾರತೀಯನೊಬ್ಬನನ್ನು ನೇಮಿಸಿಕೊಳ್ಳುವುದು ಖಂಡಿತವಾಗಿಯೂ ಐಬಿಗೆ ಕಳವಳಕಾರಿ ವಿಚಾರ. ಆತನನ್ನು ಗಡಿಯಾಚೆಗೆ ಕರೆದೊಯ್ದಾಗ ಅದು ರಾ ಸಂಘಟನೆಯ ಆಸಕ್ತಿಯ ವಿಚಾರವಾಗುತ್ತದೆ. ಆತ ಭಾರತಕ್ಕೆ ಮರು ಪ್ರವೇಶ ಮಾಡಿ ಜಮ್ಮು ಕಾಶ್ಮೀರದ ಸೇನಾ ನೆಲೆಗಳಲ್ಲಿ ದಾಳಿ ಮಾಡಿದಾಗ ಅದು ಸೇನಾ ಬೇಹುಗಾರಿಕೆಯ ವಿಚಾರವಾಗುತ್ತದೆ. ಈತ ಪ್ರತಿಬಾರಿ ಗಡಿ ದಾಟಿದ ವೇಳೆಗೆ ಆತನನ್ನು ಒಂದು ದಳದಿಂದ ಇನ್ನೊಂದು ದಳಕ್ಕೆ ಹಸ್ತಾಂತರಿಸಬೇಕೆ ಅಥವಾ, ಎಲ್ಲರೂ ಒಟ್ಟಾಗಿ ಆತನ ಮೇಲೆ ಕಣ್ಣಿಡಬೇಕೇ? ಅಥವಾ ರಾದ ವ್ಯಾಪ್ತಿಗೆ ಬರುವ ಗಡಿಯಾಚೆಗಿನ ರೇಡಿಯೋ ಮತ್ತು ಉಪಗ್ರಹ ಸಂಪರ್ಕಗಳನ್ನು ಪರಿಶೀಲಿಸಲು ಸೇನೆ ಮತ್ತು ಗುಪ್ತಚರ ದಳಗಳಿಗೆ ಅನುವು ನೀಡಬೇಕೇ" ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಿಲ್ಲ ಮತ್ತು ಇವುಗಳು ಪರಸ್ಪರ ಆರೋಪಗಳನ್ನು ಹೆಚ್ಚಿಸುವಂತೆ ಮಾಡುತ್ತದೆ ಎಂದು ಸಿಂಗ್ ಸಮಸ್ಯೆಯ ಎಳೆಯನ್ನು ಬಿಡಿಸಿಟ್ಟಿದ್ದಾರೆ.

ಐಬಿಯೊಂದಿಗೆ ಮಾಹಿತಿ ಹಂಚಿಕೊಳ್ಳಲು ರಾಗೆ ಇಚ್ಚೆ ಇಲ್ಲದಿರುವುದು ದಂತಕತೆ. ಇದಲ್ಲದೆ ರಾಷ್ಟ್ರೀಯ ಭದ್ರತಾ ಸಲಹಾಗಾರ ಮತ್ತು ರಾ ಮುಖ್ಯಸ್ಥರ ನಡುವಿನ ವೈಯಕ್ತಿಕ ಅಹಂನ ಘರ್ಷಣೆಗೆ ಸಾಕಷ್ಚು ಉದಾಹರಣೆಗಳಿಗೆ ಎಂದು ಐಬಿಯ ಮಾಜಿ ಜಂಟಿ ನಿರ್ದೇಶಕ ಕೃಷ್ಣ ಧಾರ್ ಹೇಳುತ್ತಾರೆ.

ಗುಪ್ತಚರದಳಗಳು ಬೇಹುಗಾರಿಕಾ ಮಾಹಿತಿಗಳನ್ನು ಹಂಚಿಕೊಳ್ಳದಿರುವುದು ಒಂದು ಸಮಸ್ಯೆ ಎಂದು ಗಡಿ ಭದ್ರತಾ ಪಡೆಯ ಮಾಜಿ ಪ್ರಧಾನಿ ನಿರ್ದೇಶಕ ಎ.ಕೆ.ಮಿತ್ರಾ ಅಭಿಪ್ರಾಯಿಸಿದ್ದಾರೆ.

"ಪ್ರಮುಖ ಮಾಹಿತಿಗಳನ್ನು ಇತರ ಗುಪ್ತಚರದಳಗಳೊಂದಿಗೆ ಹಂಚಿಕೊಳ್ಳದಿರುವುದು ಸಮರ್ಥನೀಯವಲ್ಲ. ಇದಕ್ಕಾಗಿ ರಾಷ್ಟ್ರವು ಬೆಲೆ ತೆರುತ್ತಿದೆ. ನಾವು ಇಂತದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಿದೆ" ಎಂದು ಮಿತ್ರಾ ಕಟು ನುಡಿದಿದ್ದಾರೆ.

ಇತ್ತೀಚೆಗೆ ಮುಂಬೈಯಲ್ಲಿ ಉಗ್ರರು ದಾಳಿಯ ಬಳಿಕ ಈ ಮೂರು ಏಜೆನ್ಸಿಗಳು ಪರಸ್ಪರರ ಮೇಲೆ ಆರೋಪ ಹೊರಿಸಿಕೊಂಡಿದ್ದವು.
ರಾ ಮತ್ತು ಐಬಿಗಳು ತಾವು ಭಯೋತ್ಪಾದನಾ ದಾಳಿಯ ನಿರ್ದಿಷ್ಟ ಸ್ಥಳಗಳು ಮತ್ತು ದಿನಾಂಕಗಳ ಕುರಿತು ಮಾಹಿತಿ ನೀಡಿದ್ದೆವು ಎಂದು ಹೇಳುತ್ತಿವೆ. ಆದರೆ ರಾಜ್ಯ ಸರ್ಕಾರ ಮತ್ತು ನೌಕಾದಳವು, ಕ್ರಮಕೈಗೊಳ್ಳುವಂತಹ ಮಾಹಿತಿಗಳನ್ನು ನೀಡಲಿಲ್ಲ ಎಂದು ಹೇಳಿವೆ. ಸಂಪುಟ ಕಾರ್ಯದರ್ಶಿಯವರು ಇದೀಗ ಈ ವಿಚಾರದತ್ತ ಗಮನ ಹರಿಸಿದ್ದಾರೆ.

ಐಬಿ, ರಾ ಮತ್ತು ಸೇನಾ ನಿರ್ದೇಶನಾಲಯಗಳು ನೌಕಾದಳ ಮತ್ತು ವಾಯುದಳದ ಬೇಹುಗಾರಿಕಾ ಮಾಹಿತಿಗಳನ್ನು ವಿಮರ್ಷಿಸುವ ಗುಪ್ತಚರದ ಜಂಟಿ ಸಮಿತಿ(ಜೆಐಸಿ)ಯು ರಾಷ್ಟ್ರೀಯ ಭದ್ರತಾ ಮಂಡಳಿಯಡಿ ಕಾರ್ಯ ನಿರ್ವಹಿಸುತ್ತಿದ್ದು, ಇದು ನಿರೀಕ್ಷಿತ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಈ ಸಮಿತಿಯು ಹೆಚ್ಚೂಕಮ್ಮಿ ನಿಷ್ಕ್ರಿಯವಾಗಿದೆ ಮತ್ತು ಗುಪ್ತಚರ ದಳಗಳ ಮುಖ್ಯಸ್ಥರು ಜೆಐಸಿಯಡಿ ಕಳೆದ ಎರಡು ವರ್ಷಗಳಲ್ಲಿ ಭೇಟಿಯಾಗಿರುವುದು ಅತ್ಯಂತ ವಿರಳ ಎಂದು ಮೂಲಗಳು ಹೇಳಿವೆ. "ಸೇನೆಯು ಗುಪ್ತಚರ ಮಾಹಿತಿಗಳನ್ನು ಯಾವತ್ತೂ ಇತರ ಏಜೆನ್ಸಿಗಳೊಂದಿಗೆ ಹಂಚಿಕೊಂಡಿರಲಿಲ್ಲ" ಎಂದು ಕಾರ್ಗಿಲ್ ಪರಾಮರ್ಶಾ ಸಮಿತಿಯ ವರದಿಯನ್ನು ಉಲ್ಲೇಖಿಸಿ ಸಿಂಗ್ ತನ್ನ ಪುಸ್ತಕದಲ್ಲಿ ಹೇಳಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿ: ಕಠಿಣ ಕ್ರಮ ಬಯಸಿದ ಸಂಸತ್
ದೆಹಲಿ: ಸಿಎಲ್‌ಪಿ ನಾಯಕಿಯಾಗಿ ಶೀಲಾದೀಕ್ಷಿತ್ ಆಯ್ಕೆ
ಕಟ್ಟೆಚ್ಚರದಲ್ಲಿ ವಾಯುಪಡೆ, ಪ್ರಮುಖರ ರಜೆ ರದ್ದು
26/11 ದಾಳಿಯ ಭಯೋತ್ಪಾದಕರ ಚಿತ್ರ ಬಿಡುಗಡೆ
ಇಂದಿನಿಂದ ಅಲ್ಪಾವಧಿಯ ಸಂಸತ್ ಅಧಿವೇಶನ
ಚವಾಣ್-ಛಗನ್ ಪ್ರಮಾಣವಚನ ಸ್ವೀಕಾರ