ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಬಿಐ ತನಿಖೆಗೆ ಆದೇಶ ನೀಡಲು ಸು.ಕೋ, ಹೈ.ಕೋಗೆ ನಿರ್ಬಂಧವಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಬಿಐ ತನಿಖೆಗೆ ಆದೇಶ ನೀಡಲು ಸು.ಕೋ, ಹೈ.ಕೋಗೆ ನಿರ್ಬಂಧವಿಲ್ಲ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗಳನ್ನೊಳಗೊಂಡಿರುವ ಸಂಕೀರ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನಿರ್ಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಸಂವಿಧಾನದ ವಿಧಿ 226 ಮತ್ತು 32ರಡಿಯಲ್ಲಿ ಪ್ರಕರಣಗಳ ತನಿಖೆ ನಡೆಸುವಂತೆ ಆದೇಶ ನೀಡಲು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ಅಧಿಕಾರಗಳ ಮೇಲೆ ನಿಯಂತ್ರಣವಿಲ್ಲ ಎಂದು ಸಾಲಿಸಿಟರ್ ಜನರಲ್ ಜಿ.ಇ.ವಹನ್ವತಿ ಅವರು ಹೇಳಿದ್ದಾರೆ.

ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯಗಳು ಈ ಹಕ್ಕುಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಸಂವಿಧಾನದ ವಿಧಿ 14, 19ರಲ್ಲಿ ಒದಗಿಸಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದಾಗ ನ್ಯಾಯಾಲಯವು ಹಸ್ತಕ್ಷೇಪ ನಡೆಸಬಹುದು ಎಂದು ಅವರು ಐದು ಸದಸ್ಯತ್ವದ ನ್ಯಾಯಪೀಠಕ್ಕೆ ಹೇಳಿದ್ದಾರೆ. ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಪಂಚ ಸದಸ್ಯ ಪೀಠವು ವಿವಿಧ ರಾಜ್ಯಗಳಲ್ಲಿನ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಬಿಐಗೆ ಆದೇಶ ನೀಡಲು ನ್ಯಾಯಾಲಯಗಳ ಅಧಿಕಾರ ಸಿಂಧುತ್ವವನ್ನು ಪರೀಕ್ಷಿಸುತ್ತಿದ್ದಾಗ ಸಾಲಿಸಿಟರ್ ಅವರು ಈ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಣೆ ಬೆಂಬಲಿಗರು-ಕಾಂಗ್ರೆಸಿಗರ ನಡುವೆ ಹೊಯ್ ಕೈ!
ಐಬಿ, ರಾ, ಎಂಐ ತಿಕ್ಕಾಟ, ಪ್ರಜೆಗಳಿಗೆ ಸಂಕಟ
ಮುಂಬೈ ದಾಳಿ: ಕಠಿಣ ಕ್ರಮ ಬಯಸಿದ ಸಂಸತ್
ದೆಹಲಿ: ಸಿಎಲ್‌ಪಿ ನಾಯಕಿಯಾಗಿ ಶೀಲಾದೀಕ್ಷಿತ್ ಆಯ್ಕೆ
ಕಟ್ಟೆಚ್ಚರದಲ್ಲಿ ವಾಯುಪಡೆ, ಪ್ರಮುಖರ ರಜೆ ರದ್ದು
26/11 ದಾಳಿಯ ಭಯೋತ್ಪಾದಕರ ಚಿತ್ರ ಬಿಡುಗಡೆ