ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆಯಲ್ಲಿ ಏಕತೆ ಘೋಷಿಸಿದ ವಿಪಕ್ಷ ನಾಯಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಯಲ್ಲಿ ಏಕತೆ ಘೋಷಿಸಿದ ವಿಪಕ್ಷ ನಾಯಕ
ನವದೆಹಲಿ: ಸಂಸತ್‌ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ, ಮುಂಬೈಯಲ್ಲಿ ಭಯೋತ್ಪಾದನಾ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ರಾಷ್ಟ್ರವು ಯುದ್ಧದಂತಹ ಸ್ಥಿತಿಯನ್ನು ಎದುರಿಸುತ್ತಿದ್ದು, ಈ ಪರಿಸ್ಥಿತಿಯಲ್ಲಿ ನಾವೆಲ್ಲ ಒಂದು ಎಂಬ ಏಕತೆಯನ್ನು ಪ್ರದರ್ಶಿಸುವುದಾಗಿ ಸಂಸತ್ತಿನಲ್ಲಿ ಭರವಸೆ ನೀಡಿದರು.

ಭಯೋತ್ಪಾದನೆಯನ್ನು ಪಕ್ಷ, ಜಾತಿ, ಮತ್ತು ಧರ್ಮಗಳಿಗೆ ಅತೀತವಾಗಿ ವಿರೋಧಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಭಾರತವು ಭಯೋತ್ಪಾದನೆಯ 'ಕೇಂದ್ರಬಿಂದು'ವಾಗಿದೆ ಎಂದು ಲೋಕಸಭೆಯಲ್ಲಿ ನುಡಿದ ಆಡ್ವಾಣಿ ಪಾಕಿಸ್ತಾನವು ಲಷ್ಕರೆ-ಇ-ತೋಯ್ಬಾದಂತಹ ಉಗ್ರವಾದಿ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದರು.

ಉಗ್ರರನ್ನು ನಿಗ್ರಹಿಸುವಂತೆ ಅಮೆರಿಕವು ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು ಎಂದು ಇದೇ ಸಂದರ್ಭದಲ್ಲಿ ಆಡ್ವಾಣಿ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ವಿರುದ್ಧ ಪುರಾವೆ ಇದೆ: ಸಂಸತ್‌ನಲ್ಲಿ ಚಿದು
ಅಸ್ಸಾಮಿನಲ್ಲಿ ಮತ್ತೆ ವಕ್ಕರಿಸಿದ ಹಕ್ಕಿಜ್ವರ
ಸಚಿವೆ ಮೇಲೆ ದೂರು ದಾಖಲಿಸಲು ಪೊಲೀಸ್‌ಗೆ ತಾಕೀತು
ಸಿಬಿಐ ತನಿಖೆಗೆ ಆದೇಶ ನೀಡಲು ಸು.ಕೋ, ಹೈ.ಕೋಗೆ ನಿರ್ಬಂಧವಿಲ್ಲ
ರಾಣೆ ಬೆಂಬಲಿಗರು-ಕಾಂಗ್ರೆಸಿಗರ ನಡುವೆ ಹೊಯ್ ಕೈ!
ಐಬಿ, ರಾ, ಎಂಐ ತಿಕ್ಕಾಟ, ಪ್ರಜೆಗಳಿಗೆ ಸಂಕಟ