ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್: ಗೆಹ್ಲೋಟ್-ಓಲಾ ಬೆಂಬಲಿಗರ ನಡುವೆ ಘರ್ಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್: ಗೆಹ್ಲೋಟ್-ಓಲಾ ಬೆಂಬಲಿಗರ ನಡುವೆ ಘರ್ಷಣೆ
ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದುಬಂದಿರುವ ಕಾಂಗ್ರೆಸ್‌ ಗುರುವಾರ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಸಭೆ ಸೇರಿರುವ ವೇಳೆ, ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.

ಮುಖ್ಯಮಂತ್ರಿ ಪದಾಕಾಂಕ್ಷಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಜಾಟ್ ಸಮುದಾಯದ ನಾಯಕ ಸಿಸ್ ರಾಮ್ ಓಲಾ ಬೆಂಬಲಿಗರು ಘರ್ಷಣೆಗಿಳಿದು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆದರೆ, ಬಡಿದಾಟದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕಾರ್ಯಕರ್ತರ ನಡುವಿನ ಘರ್ಷಣೆಯಿಂದಾಗಿ ಸಭೆಯನ್ನು ಯಾವುದೇ ನಿರ್ಣಯ ಕೈಗೊಳ್ಳದೆ ಮುಂದೂಡಲಾಗಿದೆ.

ಜೈಪುರದ ಖಾಸ ಕೋತಿ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಂಚಿತವಾಗಿ ಎಐಸಿಸಿ ವೀಕ್ಷಕರಾದ ದಿಗ್ವಿಜಯ್ ಸಿಂಗ್, ಮಧುಸೂದನ್ ಮಿಸ್ತ್ರಿ, ವಿವೇಕೆ ಬನ್ಸಾಲ್, ವೀರೇಂದ್ರ ಸಿಂಗ್ ಹಾಗೂ ಮುಕುಲ್ ವಾಸ್ನಿಕ್ ಅವರುಗಳು ಮಾತುಕತೆ ನಡೆಸುತ್ತಿದ್ದ ವೇಳೆಗೆ ಉಭಯ ನಾಯಕರ ಬೆಂಬಲಿಗರು ಹೊರಗಡೆ ಘೋಷಣೆಗಳನ್ನು ಕೂಗುತ್ತಿದ್ದರು.

ಈ ಮಧ್ಯೆ, ಕೇವಲ ಒಂದೇ ಮತದ ಅಂತರದಿಂದ ಸೋತ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ಜೋಷಿಯವರ ಬೆಂಗಲಿಗರೂ ಘೋಷಣೆಗಳನ್ನು ಕೂಗುತ್ತಿದ್ದುದು ಕಂಡುಬರುತ್ತಿತ್ತು.

ಗೆಲ್ಹಾಟ್ ಮತ್ತು ಓಲಾ ಬೆಂಬಲಿಗರ ಘರ್ಷಣೆಯಿಂದಾಗಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗದಿದ್ದರೂ, ಗೆಹ್ಲೋಟ್ ಮುಖ್ಯಮಂತ್ರಿ ಹಾಗೂ ಓಲಾ ಅವರನ್ನು ಉಪಮುಖ್ಯಮಂತ್ರಿಯಾಗಿ ಆರಿಸುವ ರಾಜೀಸೂತ್ರವನ್ನು ಕೈಗೊಳ್ಳಬಹುದು ಎಂಬ ಊಹೆ ದಟ್ಟವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುದ್ಧವನ್ನು ಒಗ್ಗಟ್ಟಿನಿಂದ ಎದುರಿಸೋಣ: ಆಡ್ವಾಣಿ
ಡಿ.24ರ ತನಕ ಕಸಬ್‌ ಪೊಲೀಸ್ ವಶಕ್ಕೆ
ಲೋಕಸಭೆಯಲ್ಲಿ ಏಕತೆ ಘೋಷಿಸಿದ ವಿಪಕ್ಷ ನಾಯಕ
ಪಾಕ್ ವಿರುದ್ಧ ಪುರಾವೆ ಇದೆ: ಸಂಸತ್‌ನಲ್ಲಿ ಚಿದು
ಅಸ್ಸಾಮಿನಲ್ಲಿ ಮತ್ತೆ ವಕ್ಕರಿಸಿದ ಹಕ್ಕಿಜ್ವರ
ಸಚಿವೆ ಮೇಲೆ ದೂರು ದಾಖಲಿಸಲು ಪೊಲೀಸ್‌ಗೆ ತಾಕೀತು