ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಗುರುವಾರ ದೇಶದ ಕ್ಷಮೆಯಾಚಿಸಿದ್ದಾರೆ.
ಅವರು ಗುರುವಾರ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ, ಮುಂಬೈ ಉಗ್ರರ ದಾಳಿಯ ಹಿನ್ನೆಲೆಯಲ್ಲಿ, ದೇಶ ಸೇರಿದಂತೆ ಜಾಗತಿಕವಾಗಿ ತಾಂಡವಾಡುತ್ತಿರುವ ಉಗ್ರರ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಆ ನಿಟ್ಟಿನಲ್ಲಿ ಭಯೋತ್ಪಾದಕರನ್ನು ಸದೆ ಬಡಿಯಲೇಬೇಕು ಎಂದು ಹೇಳಿದ ಪ್ರಧಾನಿ, ದೇಶದಲ್ಲಿ ಆಧುನಿಕ ಹಾಗೂ ಸಶಕ್ತವಾದ ಪೊಲೀಸ್ ಪಡೆಯ ಅಗತ್ಯವಿದೆ ಎಂದು ತಿಳಿಸಿದರು.
ಭಾರತ ಪ್ರತಿಯೊಂದು ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಭಯೋತ್ಪಾದನೆಯನ್ನು ಎದುರಿಸಲು ಪಕ್ಷಬೇಧ ಮರೆತು ಹೋರಾಡಬೇಕಾಗಿದೆ ಎಂದರು.
ಭಯೋತ್ಪಾದನೆ ಎದುರು ನಾವು ಸೋಲನ್ನಪ್ಪಿದ್ದೇವೆ, ಅದಕ್ಕೆ ಸಾಕಷ್ಟು ಬೆಲೆ ತೆರುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಭಯೋತ್ಪಾದನೆ ದೇಶದ ದೊಡ್ಡ ಸವಾಲು ಆಗಿದ್ದು, ಅದನ್ನು ನಿಗ್ರಹಿಸಲು ಕೇಂದ್ರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು. |