ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಿಜೋರಾಂ ಮುಖ್ಯಮಂತ್ರಿಯಾಗಿ ತಾನ್‌ಹವ್ಲಾ ಅಧಿಕಾರ ಸ್ವೀಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿಜೋರಾಂ ಮುಖ್ಯಮಂತ್ರಿಯಾಗಿ ತಾನ್‌ಹವ್ಲಾ ಅಧಿಕಾರ ಸ್ವೀಕಾರ
ಮಿಜೋರಾಂನಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಗೆಲುವು ಸಾಧಿಸಿದ್ದ ಲಾಲ್‌ ತಾನ್‌‌ಹವ್ಲಾ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು.

ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಎಂ.ಎಂ.ಲಾಖೇರಾ ಅವರು 68ರ ಹರೆಯದ ಲಾಲ್ ತಾನ್‌‌ಹವ್ಲಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು, ಅಲ್ಲದೇ ರಾಜ್ಯ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ಆರ್.ಲಾಲ್‌ಜಿರ್ಲಿನಾ ಹಾಗೂ ಎಚ್ ಲಿಯನ್‌‌ಸೈಲ್ವೋ ಅವರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪಕ್ಷದ ಹೈಕಮಾಂಡ್‌‌ ಜತೆ ಸಮಾಲೋಚಿಸಿ ಮುಂದಿನ ಮಂತ್ರಿ ಮಂಡಲ ರಚನೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹತ್ತು ವರ್ಷಗಳ ದೀರ್ಘಾವಧಿಯ ನಂತರ ಕಾಂಗ್ರೆಸ್ ಮತ್ತೆ ಮಿಜೋರಾಂನಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆಗೆ ಏರುವ ಮೂಲಕ ತಾನ್‌‌ಹವ್ಲಾ 4ನೇ ಬಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿ: ದೇಶದ ಕ್ಷಮೆಯಾಚಿಸಿದ ಪ್ರಧಾನಿ
ಪಾಕ್ ವಿರುದ್ಧ ಯುದ್ಧ ಪರಿಹಾರವಲ್ಲ: ಪ್ರಣಬ್
ರಾಜ್: ಗೆಹ್ಲೋಟ್-ಓಲಾ ಬೆಂಬಲಿಗರ ನಡುವೆ ಘರ್ಷಣೆ
ಯುದ್ಧವನ್ನು ಒಗ್ಗಟ್ಟಿನಿಂದ ಎದುರಿಸೋಣ: ಆಡ್ವಾಣಿ
ಡಿ.24ರ ತನಕ ಕಸಬ್‌ ಪೊಲೀಸ್ ವಶಕ್ಕೆ
ಲೋಕಸಭೆಯಲ್ಲಿ ಏಕತೆ ಘೋಷಿಸಿದ ವಿಪಕ್ಷ ನಾಯಕ