ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮ್ಮ(ಅಮೆರಿಕ)ನ ಬಳಿ ಓಡುವುದನ್ನು ನಿಲ್ಲಿಸಿ: ಶೌರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮ್ಮ(ಅಮೆರಿಕ)ನ ಬಳಿ ಓಡುವುದನ್ನು ನಿಲ್ಲಿಸಿ: ಶೌರಿ
ಭಯೋತ್ಪಾದನೆಯನ್ನು ನಿಭಾಯಿಸಲು ರಾಷ್ಟ್ರಕ್ಕೆ ಬೇರೆಯವರು ನೆರವು ನೀಡುತ್ತಾರೆ ಎಂಬ ಭಾವನೆಯನ್ನು ತೊಡೆದು ಹಾಕಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿರುವ ಹಿರಿಯ ಬಿಜೆಪಿ ನಾಯಕ ಅರುಣ್ ಶೌರಿ, ಸಹಾಯಕ್ಕಾಗಿ ಮಮ್ಮಿ(ಅಮೆರಿಕ) ಬಳಿ ಓಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ಅವರು ರಾಜ್ಯಸಭೆಯಲ್ಲಿ ಮುಂಬೈ ದಾಳಿಯ ಬಗ್ಗೆ ಚರ್ಚೆಯನ್ನು ಆರಂಭಿಸುತ್ತಾ ಮಾತನಾಡುತ್ತಿದ್ದರು. ಭಯೋತ್ಪಾದನೆ ವಿರುದ್ಧ ಪೂರ್ಣ ಮಟ್ಟದ ಯುದ್ಧಕ್ಕೆ ಪ್ರತಿಪಕ್ಷ ಬಿಜೆಪಿ ಬೆಂಬಲ ಘೋಷಸಿದೆ.ಆದರೆ, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ನಿಭಾಯಿಸುವುದರಲ್ಲಿ ಅಮೆರಿಕ ರಕ್ಷಣೆ ನೀಡುತ್ತದೆಂಬ ಆಶಯದೊಂದಿಗೆ ಅಲ್ಲಿಗೆ ಓಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಅವರು ನುಡಿದರು.

ಪಾಕ್ ಜತೆ ಶಾಂತಿ ಪ್ರಕ್ರಿಯೆಯನ್ನು ನಿಲ್ಲಿಸಿ ಎಂದು ಸರ್ಕಾರಕ್ಕೆ ಸೂಚಿಸಿದ ಅವರು, ಐಎಸ್‌ಐ ಭಾರತದ ಉಗ್ರಗಾಮಿಗಳನ್ನು ಒಂದಾಗಿ ಹೆಣೆಯುತ್ತಿದೆಯೆಂದು ಗುಪ್ತಚರ ದಾಖಲೆಗಳು ತೋರಿಸಿವೆ ಎಂದು ಹೇಳಿದರು. ಚೀನಾ ಪಾಕಿಸ್ತಾನಕ್ಕೆ ಆಸರೆಯಾಗಿದೆ ಎಂದು ಅಭಿಪ್ರಾಯಪಟ್ಟ ಶೌರಿ, ಇಸ್ಲಾಮಾಬಾದ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಾ ಅದೇ ಸಮಯದಲ್ಲಿ ನವದೆಹಲಿಯ ಮೇಲೆ ಶಾಂತಿ ಪ್ರಕ್ರಿಯೆಯ ಜವಾಬ್ದಾರಿ ಹೊರಿಸಿದೆ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೇಹುಗಾರಿಕಾ ವ್ಯವಸ್ಥೆಯ ಪುನಶ್ಚೇತನಕ್ಕೆ ಅಮೆರಿಕ ಸಹಾಯ
ಮುಂಬೈ ದಾಳಿಗೂ ಇಂಡಿಯನ್ ಮುಜಾಹಿದೀನ್‌ಗೂ ಲಿಂಕ್?
ರಾಜಸ್ಥಾನ ಸಿಎಂ ಆಗಿ ಅಶೋಕ್ ಗೆಹ್ಲೋಟ್ ಆಯ್ಕೆ
ಮಿಜೋರಾಂ ಮುಖ್ಯಮಂತ್ರಿಯಾಗಿ ತಾನ್‌ಹವ್ಲಾ ಅಧಿಕಾರ ಸ್ವೀಕಾರ
ದಾಳಿ: ದೇಶದ ಕ್ಷಮೆಯಾಚಿಸಿದ ಪ್ರಧಾನಿ
ಪಾಕ್ ವಿರುದ್ಧ ಯುದ್ಧ ಪರಿಹಾರವಲ್ಲ: ಪ್ರಣಬ್