ಸಿರ್ಸಾ ಮೂಲದ ಧಾರ್ಮಿಕ ಪಂಥ ಡೇರಾ ಸಚ್ಚಾ ಸೌಧದ ವಿವಾದಾಸ್ಪದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಆರೋಪಪಟ್ಟಿ ಸಲ್ಲಿಸಿದೆ.
ಬಾಬಾ ರಾಮ್ ರಹೀಮ್ ವಿರುದ್ಧ ಪತ್ರಕರ್ತ ರಾಮಚಂದ್ರ ಛತ್ರಪತಿಯನ್ನು 2002ರಲ್ಲಿ ಕೊಂದಿರುವ ಮತ್ತು ಆತನ ಶಿಷ್ಯ ರಂಜಿತ್ ಸಿಂಗ್ ಎಂಬಾತನನ್ನು 2003ರಲ್ಲಿ ಕೊಂದಿರುವ ಆರೋಪವಿದೆ. ಈ ಎರಡು ಕೊಲೆ ಪ್ರಕರಣದ ವಿಚಾರಣೆಯನ್ನು ಜನವರಿ 10ರಂದು ನಡೆಸಲಾಗುವುದು.
ಸಿಂಗ್ ವಿರುದ್ಧ ಆತನ ಮಹಿಳಾ ಶಿಷ್ಯೆಯರು ದೂರು ನೀಡಿರುವ ಆಧಾರದಲ್ಲಿ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಲಾಗಿದೆ. ಈ ಪ್ರಕರಣಗಳ ವಿಚಾರಣೆಯು ಫೆಬ್ರವರಿ 28ರಂದು ನಡೆಯಲಿದೆ.
ಸಿಖ್ ಧರ್ಮಗುರು ಗುರುಗೋವಿಂದ ಸಿಂಗ್ ಅವರನ್ನು ಅನುಸರಿಸುವ ಮೂಲಕ ಸಿಖ್ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವುದಾಗಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ರಾಮ್ ರಹೀಂನನ್ನು ಇತ್ತೀಚೆಗೆ ಪಂಜಾಬ್ ಪೊಲೀಸರು ಪ್ರಶ್ನಿಸಿದ್ದಾರೆ. |