ಮುಂಬೈದಾಳಿ ನಡೆಸಿದ ವಿಧ್ವಂಸಕರ ವಿರುದ್ಧ ಭದ್ರತಾ ಪಡೆಗಳು ನಡೆಸಿರುವ 60 ಗಂಟೆಗಳ ಕಾಲದ 'ಆಪರೇಶನ್ ಬ್ಲಾಕ್ ಟೊರಾಂಡೋ'ದ ನೇರ ಪ್ರಸಾರ ಮಾಡಿರುವ ಮಾಧ್ಯಮಗಳ ಕ್ರಮದ ಕುರಿತು ಕಳವಳ ವ್ಯಕ್ತ ಪಡಿಸಿಕುವ ಸಂಸದೀಯ ಸಮಿತಿ, ಮಾಧ್ಯಮಗಳ ಮೇಲೆ ಶಾಸನಾತ್ಮಕ ನಿರ್ಬಂಧ ಹೇರುವ ಒಲವು ವ್ಯಕ್ತಪಡಿಸಿದೆ." ದೂರದರ್ಶನ ಚಾನೆಲ್‌ಗಳು ತಮ್ಮ ವೀಕ್ಷಕರಿಗಾಗಿ ಬಿತ್ತರಿಸಿದ ನೇರ ದೃಶ್ಯಗಳನ್ನು, ದಾಳಿಕೋರರಿಗೆ ಮಾರ್ಗದರ್ಶನ ನೀಡಿರುವ ದರುಳರು ದೂರದಲ್ಲಿ ಕುಳಿತು ವೀಕ್ಷಿಸಿರಬಹುದಾಗಿದ್ದು, ಇದು ಅಪಾಯಕಾರಿ" ಎಂದು ಸಮಿತಿ ಹೇಳಿದೆ. ಹಿರಿಯ ಬಿಜೆಪಿ ನಾಯಕ ಎಂ.ವೆಂಕಯ್ಯ ನಾಯ್ಡು ನೇತೃತ್ವದ ಸಮತಿಯು ಶುಕ್ರುವಾರ ಸದನಕ್ಕೆ ಸಲ್ಲಿಸಿದ ವರದಿಯಲ್ಲಿ "ಕಮಾಂಡೋಗಳ ಕಾರ್ಯಾಚರಣೆಯ ನೇರ ಪ್ರಸಾರವು ಕಾರ್ಯಾಚರಣೆಯ ಯಶಸ್ಸಿಗೆ, ಒತ್ತೆಯಾಳುಗಳು ಮತ್ತು ಭದ್ರತಾ ಪಡೆಗಳ ಸುರಕ್ಷತೆಗೂ ಅಪಾಯಕಾರಿ ಪರಿಣಾಮ ಬೀರಬಹುದು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ." ಸೂಕ್ಷ್ಮ ವಿಚಾರಗಳ ಕುರಿತು ಮಾಹಿತಿ ನೀಡುವ ವೇಳೆಗೆ ಮಾಧ್ಯಮಗಳು ಸಾಕಷ್ಟು ಜಾಗರೂಕವಾಗಿರಬೇಕು ಮತ್ತು ರಾಷ್ಟ್ರದ ಹಿತಾಸಕ್ತಿ, ಭದ್ರತಾ ಪಡೆ ಸಿಬ್ಬಂದಿಗಳ ಮತ್ತು ಒತ್ತೆಯಾಳುಗಳ ಜೀವಗಳಿಗೆ ಹಾನಿಯಾಗದು ಮತ್ತು ನೇರ ಪ್ರಸಾರದಿಂದಾಗಿ ಇಂತಹ ಕಾರ್ಯಾಚರಣೆಗಳು ಅಪಾಯಕ್ಕೆ ಸಿಲುಕದು ಎಂಬುದನ್ನು ಅವುಗಳು ಖಚಿತಪಡಿಸಿಕೊಳ್ಳಬೇಕು" ಸಮಿತಿ ಅಭಿಪ್ರಾಯಿಸಿದೆ.ಮುಂಬೈ ಕಾರ್ಯಾಚರಣೆಯ ನೇರಪ್ರಸಾರದ ವೇಳೆಗೆ, ನಂತರದ ಅವಧಿಯಲ್ಲಿ ಸೂಕ್ತ ಸಲಹೆಗಳ ಮೇರೆಗೆ ಆಂಶಿಕವಾಗಿ ನಿರ್ಬಂಧಿಸಲಾಗಿತ್ತು ಎಂದೂ ಸಮಿತಿ ಗಮನಿಸಿದೆ. ಮಾಧ್ಯಮಗಳು ಸ್ವಯಂ ನಿಯಂತ್ರಣಗಳನ್ನು ಹೇರಿಕೊಳ್ಳಲಿಲ್ಲ ಎಂದು ವರದಿ ಹೇಳಿದೆ.ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ ಎಂದು ಸಮಿತಿ ಹೇಳಿದೆ. ಆದರೆ, ಹೆಚ್ಚುಗಾರಿಕೆ ಮತ್ತು ವಾಣಿಜ್ಯ ದರಗಳನ್ನು ಏರಿಸಿಕೊಳ್ಳುವ ವಾಹಿನಿಗಳ ಈ ಸ್ಫರ್ಧಾ ಯುಗದಲ್ಲಿ ಸ್ವಯಂ ನಿಯಂತ್ರಣ ಪರಿಣಾಮಕಾರಿಯಾಗದು ಎಂದು ವರದಿಯಲ್ಲಿ ಸಮಿತಿ ಅಭಿಪ್ರಾಯಿಸಿದೆ.ಹಾಗಾಗಿ, ಸಮಾಜದ ಹಿತದೃಷ್ಟಿಯಿಂದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ವರದಿಗಾರಿಕೆ ಮೇಲೆ ನಿಯಂತ್ರಣ ಹೇರಲು ಭಾರತೀಯ ಪತ್ರಿಕಾ ಮಂಡಳಿಯ ಮಾದರಿಯಲ್ಲಿ ಹೆಚ್ಚಿನ ಅಧಿಕಾರವಿರುವ ಶಾಸನಾತ್ಮಕ ನಿಯಂತ್ರಣಗಳ ಕುರಿತು ಸಮಿತಿ ಒಲವು ಸೂಚಿಸಿದೆ. |