ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಛತ್ತೀಸ್‌ಗಢ: ರಮಣ್ ಸಿಂಗ್ ಅಧಿಕಾರ ಸ್ವೀಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛತ್ತೀಸ್‌ಗಢ: ರಮಣ್ ಸಿಂಗ್ ಅಧಿಕಾರ ಸ್ವೀಕಾರ
ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಬಿಜೆಪಿಯ ರಮಣ್ ಸಿಂಗ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಆಯುರ್ವೇದಿಕ್ ವೈದ್ಯರಾಗಿದ್ದ ಸಿಂಗ್ ರಾಜಕಾರಣಿಯಾಗಿ ಪರಿವರ್ತಿತಗೊಂಡಿದ್ದು ಇದೀಗ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷರಾದ ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ಸುಮಾರು 15,000 ಕಾರ್ಯಕರ್ತರು ಉಪಸ್ಥಿತರಿದ್ದರು. ಪೊಲೀಸ್ ಪೆರೇಡ್ ಮೈದಾನದಲ್ಲಿ ಕೈಗೊಳ್ಳಲಾದ ಈ ಸಮಾರಂಭದಲ್ಲಿ ರಾಜ್ಯಪಾಲ ನರಸಿಂಹನ್ 56 ವರ್ಷದ 'ಮಿಸ್ಟರ್ ಕ್ಲೀನ್' ಖ್ಯಾತಿಯ ರಮಣ್ ಸಿಂಗ್‌ಗೆ ಪ್ರಮಾಣ ವಚನ ಪಠಿಸಿದರು.

2003, ಡಿಸೆಂಬರ್ 7ರಂದು ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ರಮಣ್ ಸಿಂಗ್, ತನ್ನ ಅಭಿವೃದ್ಧಿ ಆಡಳಿತ ಮತ್ತು ಸ್ವಚ್ಛ ನಡತೆಯಿಂದ ಮತದಾರರ ಮನ ಗೆದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಇವರು ಬಿಜೆಪಿಯ ಗೆಲುವಿನ ರೂವಾರಿಯಾಗಿದ್ದಾರೆ. ಎರಡು ಹಂತಗಳಲ್ಲಿ ನಡೆದ 90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿದೆ.

ಕೇಂದ್ರ ನಾಯಕರಲ್ಲಿ ಚರ್ಚಿಸಿದ ಬಳಿಕ ರಮಣ್ ಸಿಂಗ್ ತಮ್ಮ ಸಂಪುಟ ಸದಸ್ಯರನ್ನು ಆರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಧ್ಯಮಗಳ ಬಾಯಿಕಟ್ಟಲು ಸಂಸತ್ಸಮಿತಿ ಒಲವು
ಡೇರಾ ಮುಖ್ಯಸ್ಥನ ವಿರುದ್ಧ ಸಿಬಿಐ ಆರೋಪಪಟ್ಟಿ
ಉಗ್ರ ಕಸಬ್ ತನ್ನ ಮಗನೆಂದ ಪಾಕಿಸ್ತಾನಿ
ಸರ್ಕಾರದ ನಿರ್ದೇಶನ ಪಡೆಯುತ್ತೇವೆ: ಸು.ಕೋಗೆ ಸಿಬಿಐ
ಅಮ್ಮ(ಅಮೆರಿಕ)ನ ಬಳಿ ಓಡುವುದನ್ನು ನಿಲ್ಲಿಸಿ: ಶೌರಿ
ಬೇಹುಗಾರಿಕಾ ವ್ಯವಸ್ಥೆಯ ಪುನಶ್ಚೇತನಕ್ಕೆ ಅಮೆರಿಕ ಸಹಾಯ