ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಧುನಿಕ ಶಸ್ತ್ರಾಸ್ತ್ರ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಧುನಿಕ ಶಸ್ತ್ರಾಸ್ತ್ರ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಭಯೋತ್ಪಾದಕರನ್ನು ಸಮರ್ಥವಾಗಿ ನಿಗ್ರಹಿಸಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸರ್ವೊಚ್ಚನ್ಯಾಯಾಲಯ, ಇದಕ್ಕೆ ಸಮರ್ಪಕ ಉತ್ತರ ನೀಡುವಂತೆ ಕೇಂದ್ರ ಸರಕಾರಕ್ಕೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಮಾಜಿ ಆಟರ್ನಿ ಜನರಲ್ ಸೋಲಿ ಸೊರಬ್ಜಿ ಅವರು, ಪೊಲೀಸರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇಲ್ಲದೆ ಇರುವುದರಿಂದ ಉಗ್ರರನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಇತ್ತೀಚೆಗೆ ಮುಂಬೈ ದಾಳಿಯೇ ಸಾಕ್ಷಿ, ಸರಕಾರ ಇನ್ನಾದರೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.

ಅಲ್ಲದೇ ಪೊಲೀಸರು ಮುಂಬೈ ಸಿಎಸ್‌ಟಿ ರೈಲ್ವೆ ನಿಲ್ದಾಣದಲ್ಲಿ ಉಗ್ರರೊಂದಿಗೆ ಕಾದಾಡುವಾಗ 303ರೈಫಲ್‌ಗಳನ್ನು ಬಳಸಿರುವುದಾಗಿಯೂ ಅರ್ಜಿಯಲ್ಲಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರದಲ್ಲಿ ಅಳಿದುಳಿದಿರುವುದು ಕೇವಲ ಸಾವಿರದೈನೂರು ಹುಲಿಗಳು
ಛತ್ತೀಸ್‌ಗಢ: ರಮಣ್ ಸಿಂಗ್ ಅಧಿಕಾರ ಸ್ವೀಕಾರ
ಮಾಧ್ಯಮಗಳ ಬಾಯಿಕಟ್ಟಲು ಸಂಸತ್ಸಮಿತಿ ಒಲವು
ಡೇರಾ ಮುಖ್ಯಸ್ಥನ ವಿರುದ್ಧ ಸಿಬಿಐ ಆರೋಪಪಟ್ಟಿ
ಉಗ್ರ ಕಸಬ್ ತನ್ನ ಮಗನೆಂದ ಪಾಕಿಸ್ತಾನಿ
ಸರ್ಕಾರದ ನಿರ್ದೇಶನ ಪಡೆಯುತ್ತೇವೆ: ಸು.ಕೋಗೆ ಸಿಬಿಐ