ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಯೋಗ್ಯ ಅಧಿಕಾರಿಗಳನ್ನು ಮನೆಗೆ ಕಳುಹಿಸಲು ಶಿಫಾರಸ್ಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಯೋಗ್ಯ ಅಧಿಕಾರಿಗಳನ್ನು ಮನೆಗೆ ಕಳುಹಿಸಲು ಶಿಫಾರಸ್ಸು
NRB
ಸೂಕ್ತ ಕಾರ್ಯಕ್ಷಮತೆ ತೋರದ ಸರಕಾರಿ ಸಿಬ್ಬಂದಿಗಳಿಗೆ ಇನ್ನು ಮುಂದೆ ಗ್ರಹಚಾರ ಕಾದಿದೆ.

ಇನ್ನುಮುಂದೆ ಸರಕಾರಿ ನೌಕರರು ತಮ್ಮ ಮೇಲಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದಿದ್ದಲ್ಲಿ, ತಮ್ಮ ಸೇವೆಯ 20 ವರ್ಷಗಳ ಬಳಿಕ ಉದ್ಯೋಗವನ್ನು ಕಳೆದುಕೊಳ್ಳುವ ಅಪಾಯಕ್ಕೀಡಾಗಬೇಕಾಗಬಹುದು.

ವೀರಪ್ಪ ಮೊಯ್ಲಿ ನೇತೃತ್ವದ ಆಡಳಿತ ಸುಧಾರಣಾ ಸಮಿತಿಯು, ಸರಕಾರಿ ನೌಕರರ ಸೇವಾ ನಿಯಮಗಳಲ್ಲಿ ಬದಲಾವಣೆಗೆ ಶಿಫಾರಸ್ಸು ಮಾಡಿದ್ದು, ನಾಗರಿಕ ಸೇವಕರು ಹೆಚ್ಚು ಉತ್ತರದಾಯಿಯಾಗುವಂತೆ ಮಾಡಲು ಎರಡು ತೀವ್ರ ಪರಾಮರ್ಷೆಯ ಸಲಹೆ ನೀಡಿದೆ.

ಮೊದಲ ಪರಾಮರ್ಷೆಯನ್ನು ನೌಕರನೊಬ್ಬನ ಸೇವೆಯ 14 ವರ್ಷದಲ್ಲಿ ನಡೆಸಲಾಗುವುದು. ಈ ವೇಳೆಯಲ್ಲಿ ನೌಕರರ ಸಾಮರ್ಥ್ಯ ಮತ್ತು ಬಲಹೀನತೆಗಳ ಕುರಿತು ತಿಳಿಸಲಾಗುವುದು. ಎರಡನೆ ಪರಾಮರ್ಷೆಯು 20 ವರ್ಷಗಳ ಬಳಿಕ ನಡೆಯಲಿದ್ದು ಅಧಿಕಾರಿ ಸೇವೆಯಲ್ಲಿ ಮುಂದುವರಿಯಲು ಅರ್ಹನೆ ಎಂಬುದನ್ನು ನಿರ್ಧರಿಸಲಾಗುವುದು.

ಇಪ್ಪತ್ತು ವರ್ಷಗಳ ಪರಾಮರ್ಷೆಯ ವೇಳೆ ಸರಕಾರಿ ಅಧಿಕಾರಿಗಳು ಅಯೋಗ್ಯರೆಂದು ಕಂಡು ಬಂದಲ್ಲಿ ಅವರನ್ನು ಮನೆಗೆ ಕಳುಹಿಸಲಾಗುವುದು. ಈ ಕುರಿತು ಪ್ರಸ್ತಾಪಿತ ನಾಗರಿಕ ಸೇವೆಗಳ ನಿಯಮದಲ್ಲಿ ನಿಬಂಧನೆಯೊಂದನ್ನು ಮಾಡಲಾಗುವುದು ಎಂದು ಆಯೋಗವು ಶುಕ್ರವಾರ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಇನ್ನು ಮುಂದಿನ ಹೊಸ ನೇಮಕಾತಿಗಳ ವೇಳೆ, ನೇಮಕಾತಿಯ ಅವಧಿ 20 ವರ್ಷಗಳು, ಮತ್ತು ಬಳಿಕ ಅದರ ವಿಸ್ತರಣೆಯು ಸಿಬ್ಬಂದಿಯ ಪರಾಮರ್ಷೆಯ ಫಲಿತಾಂಶದ ಆಧರಾದ ಮೇಲೆ ಅವಲಂಬಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗುವುದು ಎಂಬುದಾಗಿ ಸಮಿತಿಯ 377 ಪುಟಗಳ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಧುನಿಕ ಶಸ್ತ್ರಾಸ್ತ್ರ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ರಾಷ್ಟ್ರದಲ್ಲಿ ಅಳಿದುಳಿದಿರುವುದು ಕೇವಲ ಸಾವಿರದೈನೂರು ಹುಲಿಗಳು
ಛತ್ತೀಸ್‌ಗಢ: ರಮಣ್ ಸಿಂಗ್ ಅಧಿಕಾರ ಸ್ವೀಕಾರ
ಮಾಧ್ಯಮಗಳ ಬಾಯಿಕಟ್ಟಲು ಸಂಸತ್ಸಮಿತಿ ಒಲವು
ಡೇರಾ ಮುಖ್ಯಸ್ಥನ ವಿರುದ್ಧ ಸಿಬಿಐ ಆರೋಪಪಟ್ಟಿ
ಉಗ್ರ ಕಸಬ್ ತನ್ನ ಮಗನೆಂದ ಪಾಕಿಸ್ತಾನಿ