ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗೂಗಲ್ ಅರ್ಥ್‌ನಲ್ಲಿ ಪಾಕ್ ಮನೆ ತೋರಿಸಿದ ಅಜ್ಮಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂಗಲ್ ಅರ್ಥ್‌ನಲ್ಲಿ ಪಾಕ್ ಮನೆ ತೋರಿಸಿದ ಅಜ್ಮಲ್
ND
ಗೂಗಲ್ ಅರ್ಥ್ ಎಂಬ ಆನ್‌ಲೈನ್ ನಕಾಶೆಯ ಮೂಲಕ 26/11 ಭಯೋತ್ಪಾದನಾ ದಾಳಿಯ ಏಕೈಕ ಬಂಧಿತ ಉಗ್ರಗಾಮಿ ಮಹಮದ್ ಅಜ್ಮಲ್ ಅಮೀರ್ ಪಾಕಿಸ್ತಾನದಲ್ಲಿ ತನ್ನ ಮನೆಯಿರುವ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯ ದಿಪಾಲಪುರ್ ಪ್ರದೇಶದಲ್ಲಿರುವ ತನ್ನ ಮನೆಯನ್ನು ಗೂಗಲ್ ಅರ್ಥ್‌ನಲ್ಲಿ ತಕ್ಷಣವೇ ಗುರುತಿಸುವಲ್ಲಿ ಅಜ್ಮಲ್ ಸಫಲನಾಗಿದ್ದ. ಗೂಗಲ್ ಅರ್ಥ್‌ನಲ್ಲಿ ಜಾಲಾಡುವುದರಲ್ಲಿ ಆತ ನಿಪುಣನಾಗಿದ್ದು, ಅದೇ ನೈಪುಣ್ಯವನ್ನು ತನ್ನ ಮನೆ ಪಚ್ಚೆ ಹಚ್ಚುವಲ್ಲಿಯೂ ತೋರಿಸಿದ್ದ ಎಂದು ಕ್ರೈಮ್ ಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.

ಒಕಾರಾದ ಅಜ್ಮಲ್, ಮುಲ್ತಾನ್‌ನ ಮೂವರು, ಫೈಸಲಾಬಾದ್‌ನ ಇಬ್ಬರು ಮತ್ತು ದೇರಾ ಇಸ್ಮಾಯಿಲ್ ಖಾನ್ ಎಂಬಲ್ಲಿನ ಒಬ್ಬ ಮತ್ತು ಸಿಯಾಲ್‌ಕೋಟ್ ಪ್ರದೇಶದ ಒಬ್ಬ ಉಗ್ರಗಾಮಿ- ಹೀಗೆ ಹತ್ತು ಮಂದಿ ಉಗ್ರರು ಮುಂಬಯಿ ದಾಳಿಯಲ್ಲಿ ಭಾಗವಹಿಸಿದ್ದರು.

ಲಷ್ಕರ್ ಇ ತೋಯ್ಬಾದಿಂದ ತರಬೇತಿ ಪಡೆದದ್ದು ಎಲ್ಲಿ ಎಂಬುದನ್ನು ತೋರಿಸುವಂತೆ ಕೇಳಿದಾಗ ಆತ, ಪ್ರದೇಶವನ್ನು ಗುರುತಿಸಲು ಸಫಲನಾದರೂ, ಉಗ್ರಗಾಮಿ ತರಬೇತಿ ಶಿಬಿರಗಳನ್ನು ನಿಖರವಾಗಿ ತೋರಿಸುವುದು ಸಾಧ್ಯವಾಗಲಿಲ್ಲ. ಹೆಚ್ಚಿನ ತರಬೇತಿ ಶಿಬಿರಗಳು ದಟ್ಟ ಕಾಡಿನ ಮಧ್ಯೆ, ತೀರಾ ದುರ್ಗಮ ಪ್ರದೇಶದಲ್ಲಿ ಇರುವುದರಿಂದ ಇದನ್ನು ಗುರುತಿಸುವುದು ಅಜ್ಮಲ್‌ಗೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಜಾಫರಾಬಾದ್‌ನ ಮನ್ಸೇರಾ ಶಿಬಿರ, ಬೈತುಲ್ ಮುಜಾಹಿದೀನ್ ಕೇಂದ್ರ ಹಾಗೂ ಕರಾಚಿಯಲ್ಲಿ ತಾನೂ ಸೇರಿದಂತೆ 10 ಮಂದಿ ಉಗ್ರರನ್ನು ಮುಂಬಯಿಗೆ ಕಳುಹಿಸುವ ಮೊದಲು ಮೂರು ತಿಂಗಳ ಕಾಲ ಯಾರ ಕಣ್ಣಿಗೂ ಬೀಳದಂತೆ ಇರಿಸಲಾಗಿರುವ ತಾಣವನ್ನು ಅಜ್ಮಲ್ ಗುರುತಿಸಿದ್ದಾನೆ.

ಅಲ್ಲದೆ, ಅಲ್-ಹುಸೈನಿ ಹಡಗನ್ನು ತಮ್ಮ ತಂಡವು ಏರಿದ್ದ ಸ್ಥಳವನ್ನೂ ಆತ ಗುರುತಿಸಿ ತೋರಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಕಾರ್ಯಾಚರಣೆ ಕುರಿತು ಭಾರತ ಸಂಶಯ
ಆಸಿಡ್ ಆರೋಪಿಗಳು ಪೊಲೀಸರ ಗುಂಡಿಗೆ ಬಲಿ
ರಾಜಸ್ಥಾನ: ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ
ಅಯೋಗ್ಯ ಅಧಿಕಾರಿಗಳನ್ನು ಮನೆಗೆ ಕಳುಹಿಸಲು ಶಿಫಾರಸ್ಸು
ಆಧುನಿಕ ಶಸ್ತ್ರಾಸ್ತ್ರ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ರಾಷ್ಟ್ರದಲ್ಲಿ ಅಳಿದುಳಿದಿರುವುದು ಕೇವಲ ಸಾವಿರದೈನೂರು ಹುಲಿಗಳು