ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರ ದಾಳಿಯಿಂದ ಪ್ರಜಾಸತ್ತೆಗೆ ಭಂಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ದಾಳಿಯಿಂದ ಪ್ರಜಾಸತ್ತೆಗೆ ಭಂಗ
ರಾಷ್ಟ್ರಾದ್ಯಂತ ಉಗ್ರರು ನಡೆಸಿರುವ ಭಯೋತ್ಪಾದನಾ ದಾಳಿಯಿಂದ, ಅದರಲ್ಲೂ ವಿಶೇಷವಾಗಿ ಇತ್ತೀಚಿನ ಮಂಬೈ ದಾಳಿಯಿಂದಾಗಿ ಭಾರತದ ಪ್ರಜಾಪ್ರಭುತ್ವಕ್ಕೆ ಭಂಗ ಉಂಟಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಹೇಳಿದ್ದಾರೆ.

ಭಯೋತ್ಪಾದನಾ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ದೆಹಲಿ ಮತ್ತು ಮುಂಬೈ ನಗರಗಳ ಮೇಲಿನ ಭಯೋತ್ಪಾದನಾ ದಾಳಿಯಿಂದಾಗಿ "ನಮ್ಮ ಆರ್ಥಿಕತೆಗೆ ಹಾನಿಯಾಗಿದೆ, ನಮ್ಮ ಜನತೆಗೆ ಹಾನಿಯಾಗಿದೆ ಮತ್ತು ಭಾರತಕ್ಕೆ ಹಾನಿಯಾಗಿದೆ" ಎಂದು ನುಡಿದರು.

ರಾಷ್ಟ್ರದ ಸರ್ವಾಂಗೀಣ ಅಭ್ಯುದಯವನ್ನು ನಾಶ ಪಡಿಸಲು ರಾಷ್ಟ್ರದಲ್ಲಿ ಮತೀಯ ಸೌಹಾರ್ದವನ್ನು ಕೆಡಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ ಪ್ರಧಾನಿಗಳು, ಭಯೋತ್ಪಾದನಾ ದಾಳಿಯ ವಿರುದ್ಧ ಯಾವುದೇ ಪಂಗಡವನ್ನು ಗುರಿಯಾಗಿಸಬಾರದು ಎಂದು ಎಚ್ಚರಿಸಿದರು.

2001ರಲ್ಲಿ ಉಗ್ರರು ಸಂಸತ್ ದಾಳಿ ನಡೆಸಿ ಇಂದಿಗೆ ಏಳು ವರ್ಷಗಳು ಸಲ್ಲುತ್ತಿರುವ ಹಿನ್ನೆಲೆಯಲ್ಲಿ, ಭಯೋತ್ಪಾದನೆಯು 'ಮಾನವ ಚೈತನ್ಯದ ಮೇಲಿನ ಸವಾಲು' ಎಂದರಲ್ಲದೆ, ಸರಕಾರಗಳು ಇವುಗಳನ್ನು ಬುಡಸಮೇತ ಕಿತ್ತು ಹಾಕುವ ಅವಶ್ಯಕತೆಯಿದೆ ಎಂದು ನುಡಿದರು.

ವಿಶ್ವಾದ್ಯಂತ ಸರ್ಕಾರಗಳು ಭಯೋತ್ಪಾದನೆಯ ವಿರುದ್ಧ ಕ್ಷಿಪ್ರವಾಗಿ ಮತ್ತು ಏಕತೆಯಿಂದ ಹೋರಾಡುವುದಾಗಿ ಭರವಸೆ ನೀಡಿರುವುದಾಗಿ ಅವರು ಈ ಸಂದರ್ಭದಲ್ಲಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೂಗಲ್ ಅರ್ಥ್‌ನಲ್ಲಿ ಪಾಕ್ ಮನೆ ತೋರಿಸಿದ ಅಜ್ಮಲ್
ಪಾಕ್ ಕಾರ್ಯಾಚರಣೆ ಕುರಿತು ಭಾರತ ಸಂಶಯ
ಆಸಿಡ್ ಆರೋಪಿಗಳು ಪೊಲೀಸರ ಗುಂಡಿಗೆ ಬಲಿ
ರಾಜಸ್ಥಾನ: ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ
ಅಯೋಗ್ಯ ಅಧಿಕಾರಿಗಳನ್ನು ಮನೆಗೆ ಕಳುಹಿಸಲು ಶಿಫಾರಸ್ಸು
ಆಧುನಿಕ ಶಸ್ತ್ರಾಸ್ತ್ರ: ಕೇಂದ್ರಕ್ಕೆ ಸುಪ್ರೀಂ ನೋಟಿಸ್